Post Office Savings Account ATM Charges: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಮಾಹಿತಿ ಇದೆ. ಅಕ್ಟೋಬರ್ 1 ರಿಂದ ಎಟಿಎಂ ಕಾರ್ಡ್ ಮೇಲಿನ ಶುಲ್ಕದಲ್ಲಿ ಬದಲಾವಣೆ ಆಗಲಿದೆ. ಅಂಚೆ ಇಲಾಖೆಯು ಸುತ್ತೋಲೆ ಹೊರಡಿಸುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಅಂಚೆ ಇಲಾಖೆಯು ಪೋಸ್ಟ್ ಆಫೀಸ್ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ ಸೀಮಿತ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತದೆ. ಇದೀಗ ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಜಾರಿಗೆ ಬರಲಿರುವ ಹೊಸ ಶುಲ್ಕಗಳ ಬಗ್ಗೆ ತಿಳಿಯೋಣ.
ಪೋಸ್ಟ್ ಆಫೀಸ್ ಹೊಸ ಎಟಿಎಂ ಶುಲ್ಕಗಳು:
ಅಕ್ಟೋಬರ್ 1 ರಿಂದ, ಪೋಸ್ಟ್ ಆಫೀಸ್ ಎಟಿಎಂ (Post Office ATM) /ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ 125 ರೂ. ಮತ್ತು ಜಿಎಸ್‌ಟಿ ಆಗಿರುತ್ತದೆ. ಈ ಶುಲ್ಕಗಳು 1 ಅಕ್ಟೋಬರ್ 2021 ರಿಂದ 30 ಸೆಪ್ಟೆಂಬರ್ 2022 ರವರೆಗೆ ಅನ್ವಯವಾಗುತ್ತವೆ. ಇದಲ್ಲದೆ ಇಂಡಿಯಾ ಪೋಸ್ಟ್ ಈಗ ತನ್ನ ಗ್ರಾಹಕರಿಗೆ ಕಳುಹಿಸಿದ ಎಸ್‌ಎಂಎಸ್ ಅಲರ್ಟ್‌ಗಳಿಗಾಗಿ 12 ರೂಪಾಯಿ ಮತ್ತು ಜಿಎಸ್‌ಟಿ ವಿಧಿಸುತ್ತದೆ.
ಇದನ್ನೂ ಓದಿ- Post Office MIS Scheme: ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ ಅಂಚೆ ಕಚೇರಿಯ ಈ ಯೋಜನೆ
ಇಂಡಿಯಾ ಪೋಸ್ಟ್ (India Post) ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಕಳೆದುಕೊಂಡರೆ, ಅಕ್ಟೋಬರ್ 1 ರಿಂದ ಮತ್ತೊಂದು ಡೆಬಿಟ್ ಕಾರ್ಡ್ (Debit Card) ಪಡೆಯಲು ಅವರಿಗೆ 300 ರೂಪಾಯಿ ಮತ್ತು ಜಿಎಸ್‌ಟಿ ಶುಲ್ಕವನ್ನು ವಿಧಿಸಲಾಗುತ್ತದೆ. ಇದರ ಹೊರತಾಗಿ, ಅಕ್ಟೋಬರ್ 1 ರಿಂದ ಎಟಿಎಂ ಪಿನ್ ಕಳೆದುಹೋದರೆ, ನಕಲಿ ಪಿನ್ ಪಡೆಯಲು ಕೂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ, ಗ್ರಾಹಕರು ಶಾಖೆಗೆ ಹೋಗಿ ಮತ್ತೆ ಪಿನ್ ಪಡೆಯಬೇಕು, ಇದಕ್ಕಾಗಿ ಅವರಿಗೆ 50 ರೂಪಾಯಿ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ. ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆಯಿಂದಾಗಿ ಎಟಿಎಂ ಅಥವಾ ಪಿಒಎಸ್ ವಹಿವಾಟುಗಳನ್ನು ನಿರಾಕರಿಸಿದರೆ, ಗ್ರಾಹಕರು ಅದಕ್ಕಾಗಿ 20 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
ಉಚಿತ ವಹಿವಾಟುಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ:
ಇದಲ್ಲದೇ, ಅಂಚೆ ಇಲಾಖೆಯು ಎಟಿಎಂಗಳಲ್ಲಿ ಮಾಡಬಹುದಾದ ಉಚಿತ ವಹಿವಾಟುಗಳ ಸಂಖ್ಯೆಯನ್ನು ಸೀಮಿತಗೊಳಿಸಿದೆ. ಸುತ್ತೋಲೆಯ ಪ್ರಕಾರ, ಇಂಡಿಯಾ ಪೋಸ್ಟ್‌ನ ಸ್ವಂತ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳ ನಂತರ, ಜಿಎಸ್‌ಟಿಯೊಂದಿಗೆ ಪ್ರತಿ ಹಣಕಾಸು ವಹಿವಾಟಿಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ- Best Investment idea : ಅಂಚೆ ಕಚೇರಿಯ ಈ 4 ಯೋಜನೆಗಳಲ್ಲಿ ಹೂಡಿಕೆ ಮಾಡಿ ಮಿಲಿಯನೇರ್ ಆಗಿ : ಇಲ್ಲಿದೆ ಸಂಪೂರ್ಣ ಮಾಹಿತಿ!
ಇಂಡಿಯಾ ಪೋಸ್ಟ್‌ನ ಸ್ವಂತ ಎಟಿಎಮ್‌ಗಳಲ್ಲಿ (India Post ATM) ಹಣಕಾಸೇತರ ವಹಿವಾಟುಗಳಿಗಾಗಿ, ಗ್ರಾಹಕರು ಐದು ಉಚಿತ ವಹಿವಾಟುಗಳ ನಂತರ ಪ್ರತಿ ವಹಿವಾಟಿಗೆ 5 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ವಹಿವಾಟುಗಳನ್ನು ನಡೆಸಿದ ಸಂದರ್ಭದಲ್ಲಿ, ಮೆಟ್ರೋ ನಗರಗಳಲ್ಲಿ ಮೂರು ಉಚಿತ ವಹಿವಾಟುಗಳು ಅಥವಾ ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ವಹಿವಾಟುಗಳ ನಂತರ, ಒಬ್ಬರು 8 ರೂ. ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಡೆಬಿಟ್ ಕಾರ್ಡ್ ಹೊಂದಿರುವವರು ಪಾಯಿಂಟ್ ಆಫ್ ಸರ್ವಿಸ್ (ಪಿಒಎಸ್) ನಲ್ಲಿ ನಗದು ಹಿಂಪಡೆಯಲು ವಹಿವಾಟಿನ 1% ಅನ್ನು ಪಾವತಿಸಬೇಕಾಗುತ್ತದೆ, ಪ್ರತಿ ವಹಿವಾಟಿಗೆ ಗರಿಷ್ಠ 5 ರೂ. ಅಂದರೆ, ಒಟ್ಟಾರೆಯಾಗಿ ಇಂಡಿಯಾ ಪೋಸ್ಟ್‌ನ ಗ್ರಾಹಕರು ಈಗ ಎಟಿಎಂ ಸೇವೆಗಳಿಗಾಗಿ ಹೆಚ್ಚು ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.