PMJJBY: ನಿಮ್ಮ ಬ್ಯಾಂಕ್ ಖಾತೆಯಿಂದ 330 ರೂ. ಕಡಿತಗೊಂಡಿದೆಯೇ? ಚಿಂತಿಸಬೇಡಿ, ಅದಕ್ಕೆ ಕಾರಣವೇನೆಂದು ತಿಳಿಯಿರಿ

PMJJBY: ನಿಮ್ಮ ಬ್ಯಾಂಕ್ ಖಾತೆಯಿಂದ 330 ರೂ.ಗಳನ್ನು ಕಡಿತಗೊಳಿಸಿದ್ದರೆ, ಚಿಂತೆ ಮಾಡುವ ಅಗತ್ಯವಿಲ್ಲ. ಇದರೊಂದಿಗೆ ನಿಮಗೆ ಎರಡು ಲಕ್ಷ ರೂಪಾಯಿಗಳ ವಿಮೆ ಸಿಕ್ಕಿದೆ. ಇದನ್ನು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಕಡಿತಗೊಳಿಸಲಾಗಿದೆ.

Written by - Yashaswini V | Last Updated : Jun 10, 2021, 12:15 PM IST
  • ನೀವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಿ ಎಂಬುದು ಮುಖ್ಯವ
  • ಈ ಮೊತ್ತವನ್ನು ಕೇವಲ ಒಂದು ಖಾತೆಯಿಂದ ಮಾತ್ರ ಕಡಿತಗೊಳಿಸಲಾಗುತ್ತದೆ
  • ಬಹು ಬ್ಯಾಂಕ್ ಖಾತೆಗಳಿಂದ ಹಣವನ್ನು ಕಡಿತಗೊಳಿಸಿದ್ದರೆ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬಹುದು
PMJJBY: ನಿಮ್ಮ ಬ್ಯಾಂಕ್ ಖಾತೆಯಿಂದ 330 ರೂ. ಕಡಿತಗೊಂಡಿದೆಯೇ? ಚಿಂತಿಸಬೇಡಿ, ಅದಕ್ಕೆ ಕಾರಣವೇನೆಂದು ತಿಳಿಯಿರಿ title=
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ

ನವದೆಹಲಿ: PMJJBY-  ಬ್ಯಾಂಕ್ ಖಾತೆಯಿಂದ  330 ರೂ.ಗಳನ್ನು ಕಡಿತಗೊಳಿಸಲಾಗಿದೆ ಎಂಬ ಸಂದೇಶವನ್ನು ನೀವೂ ಸ್ವೀಕರಿಸಿದ್ದೀರಾ? ಅದರ ಬಗ್ಗೆ ಚಿಂತಿಸಬೇಡಿ. ಯಾವುದೇ ಬ್ಯಾಂಕುಗಳು ಈ ಮೊತ್ತವನ್ನು ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ ಅಥವಾ ಯಾವುದೇ ಹ್ಯಾಕರ್ ನಿಮ್ಮ ಖಾತೆಯಿಂದ ಈ ಮೊತ್ತವನ್ನು ತೆಗೆದುಕೊಂಡಿರುವುದಿಲ್ಲ. ಬದಲಿಗೆ ನೀವೂ ಕೂಡ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯನ್ನು ತೆಗೆದುಕೊಂಡಿದ್ದರೆ ನಿಮ್ಮ ಖಾತೆಯಿಂದ ಅದರ ವಾರ್ಷಿಕ ಪ್ರೀಮಿಯಂ  330 ರೂ.  ಅನ್ನು ಕಡಿತಗೊಳಿಸಲಾಗಿರುತ್ತದೆ.  

ಕೇಂದ್ರ ಸರ್ಕಾರ  ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (Pradhanmantri Jeevan Jyoti Bima Yojana) ಅನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಯಾವುದೇ ಬ್ಯಾಂಕ್ ಖಾತೆದಾರರಿಗೆ ವಾರ್ಷಿಕ 330 ರೂ.ಗಳ ವಾರ್ಷಿಕ ಪ್ರೀಮಿಯಂನಲ್ಲಿ 2 ಲಕ್ಷ ರೂ. ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ. ಅಂದರೆ ವಿಮಾದಾರನು ಮರಣ ಹೊಂದಿದರೆ, ಈ ಹಣವನ್ನು ವಿಮಾದಾರರ ನಾಮಿನಿಗೆ ನೀಡಲಾಗುತ್ತದೆ. 

ಇದನ್ನೂ ಓದಿ- Vaccination Certificate : ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ Term Insurance..!

ವಾಸ್ತವವಾಗಿ, ಒಮ್ಮೆ ಈ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಗೆ ಅರ್ಜಿ ಸಲ್ಲಿಸಿದ ಬಳಿಕ ಖಾತೆದಾರರಿಗೆ ಅವರ ಆಜ್ಞೆಯ ಮೇರೆಗೆ ನೇರವಾಗಿ ಬ್ಯಾಂಕಿನಿಂದ ಈ ನಿಗದಿತ ಮೊತ್ತವನ್ನು ಕಡಿತಗೊಳಿಸಲಾಗುವುದು. ಆದರೆ ಅನೇಕ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿರುವುದನ್ನು ಮರೆತಿರಬಹುದು. ಹಾಗಾಗಿಯೇ,  ತಮ್ಮ ಖಾತೆಯಿಂದ ಅನಗತ್ಯವಾಗಿ ಹಣವನ್ನು ಕಡಿತಗೊಳಿಸಲಾಗಿದೆ ಎಂದು ಅವರು ಚಿಂತಿತರಾಗಿದ್ದಾರೆ.

ಇದನ್ನೂ ಓದಿ- Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು

ನೀವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಿ ಎಂಬುದು ಮುಖ್ಯವಲ್ಲ. ಈ ಮೊತ್ತವನ್ನು ಕೇವಲ ಒಂದು ಖಾತೆಯಿಂದ ಮಾತ್ರ ಕಡಿತಗೊಳಿಸಲಾಗುತ್ತದೆ. ಬಹು ಬ್ಯಾಂಕ್ ಖಾತೆಗಳಿಂದ ಹಣವನ್ನು ಕಡಿತಗೊಳಿಸಿದ್ದರೆ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬಹುದು. ಈಗಾಗಲೇ ಬೇರೆ ಬ್ಯಾಂಕಿನಲ್ಲಿರುವ ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿದ್ದರೆ ಆ ಬ್ಯಾಂಕಿನಿಂದ ಸ್ಟೇಟ್ಮೆಂಟ್ ಪಡೆದು ಮಾಹಿತಿ ಒದಗಿಸಬಹುದು. ಇದಕ್ಕಾಗಿ, ನೀವು ಬ್ಯಾಂಕಿಗೆ ಪತ್ರವೊಂದನ್ನು ಸಹ ನೀಡಬಹುದು, ಇದರಲ್ಲಿ ನೀವು ಈಗಾಗಲೇ ಯಾವ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಅದರ ನಂತರ ನಿಮ್ಮ ಖಾತೆಯಿಂದ ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸಲಾಗುತ್ತದೆ. ಈ ಪ್ರೀಮಿಯಂ ಅನ್ನು ಜೂನ್-ಆಗಸ್ಟ್ ನಡುವೆ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News