ನವದೆಹಲಿ: e-RUPI Launch- ಭಾರತ ಇಂದು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಇ-ವೋಚರ್ ಆಧಾರಿತ ಡಿಜಿಟಲ್ ಪಾವತಿ ಪರಿಹಾರ ಇ-ರೂಪಿ (e-RUPI) ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರಂಭಿಸಲಿದ್ದಾರೆ. ಇದರ ಮೂಲಕ, ಫಲಾನುಭವಿಗಳಿಗೆ ಸೋರಿಕೆಯಿಲ್ಲದೆ ಲಾಭಗಳು ತಲುಪಲು ಸಾಧ್ಯವಾಗುತ್ತದೆ.
ಏನಿದು e-RUPI?
ಇ-ರೂಪಿ (e-RUPI) ಎಂದರೆ, ವಾಸ್ತವವಾಗಿ ಇದು ನಗದುರಹಿತ (Cashless) ಮತ್ತು ಸಂಪರ್ಕವಿಲ್ಲದ ವಿಧಾನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್ಗೆ ಕಳುಹಿಸಲಾಗುತ್ತದೆ. ಈ ಒಂದು ಬಾರಿಯ ಪಾವತಿ ಕಾರ್ಯವಿಧಾನವಾಗಿದ್ದು ಬಳಕೆದಾರರು ಸೇವಾ ಪೂರೈಕೆದಾರರಲ್ಲಿ ವೋಚರ್ ಅನ್ನು ಪಡೆದುಕೊಳ್ಳಲು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ (Digital Payments) ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಗತ್ಯವಿಲ್ಲ.
ಇದನ್ನೂ ಓದಿ- Credit Card ಬಳಸಿ ಅಪ್ಪಿ-ತಪ್ಪಿಯೂ ಈ ಪೇಮೆಂಟ್ಸ್ ಮಾಡಬೇಡಿ, ಆರ್ಬಿಐ ಸೂಚನೆ
ಮಧ್ಯವರ್ತಿ ಅಗತ್ಯವಿಲ್ಲ:
ಇ-ರೂಪಿ (e-RUPI) ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಸೇವೆಗಳ ಪ್ರಾಯೋಜಕರನ್ನು ಅಂತರ್ಸಂಪರ್ಕಿಸುತ್ತದೆ ಮತ್ತು ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡುವುದನ್ನು ಖಾತ್ರಿಪಡಿಸುತ್ತದೆ. ಪೂರ್ವಪಾವತಿಯಾಗಿರುವುದರಿಂದ, ಇದು ಯಾವುದೇ ಮಧ್ಯವರ್ತಿಯನ್ನು ಒಳಗೊಳ್ಳದೆ ಸಮಯಕ್ಕೆ ಸೇವಾ ಪೂರೈಕೆದಾರರಿಗೆ ಪಾವತಿಸುತ್ತದೆ. ಸೇವೆಗಳ ಸೋರಿಕೆ-ನಿರೋಧಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ.
Prime Minister Narendra Modi will launch e-RUPI, a person and purpose-specific digital payment solution on August 2 via video conferencing.
(File Photo) pic.twitter.com/dCH8JRufjt
— ANI (@ANI) July 31, 2021
ಈ ಯೋಜನೆಗಳು ಪ್ರಯೋಜನ ಪಡೆಯುತ್ತವೆ:
ಇ-ರೂಪಿ (e-RUPI) ವೇದಿಕೆಯನ್ನು ಅನೇಕ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಬಳಸಬಹುದು. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ರಸಗೊಬ್ಬರ ಸಹಾಯಧನ, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ರೋಗನಿರೋಧಕಗಳಂತಹ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ಒದಗಿಸಲು ಬಳಸಬಹುದು. ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಬಳಸಬಹುದು.
ಇದನ್ನೂ ಓದಿ- Raam Currency: ಈ ದೇಶದಲ್ಲಿ ರಾಮನ ಚಿತ್ರವಿರುವ ನೋಟಿನ ಮೌಲ್ಯ ಎಷ್ಟು ಗೊತ್ತೇ?
ಡಿಜಿಟಲ್ ಪಾವತಿ ಪರಿಹಾರ e-RUPI ಆರಂಭಿಸುವ ಮುಖ್ಯ ಉದ್ದೇಶವೆಂದರೆ ಆನ್ಲೈನ್ ಪಾವತಿಯನ್ನು ಹೆಚ್ಚು ಸುಲಭ ಮತ್ತು ಸುರಕ್ಷಿತವಾಗಿಸುವುದು. ವೇದಿಕೆಯನ್ನು ರಾಷ್ಟ್ರೀಯ ಪಾವತಿಗಳ ನಿಗಮವು (NPCI) ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ