PM Kisan ಯೋಜನೆಯ ₹4000 ಬಂದಿಲ್ಲವೆ? ಹಾಗಿದ್ರೆ, ಈ ಕೆಲಸ ಮಾಡಿ, ಖಂಡಿತಾ ಹಣ ಬರುತ್ತೆ!

ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme 2020) ಸಹಾಯದಿಂದ 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 20,000 ಕೋಟಿ ರೂ. 10ನೇ ಕಂತಿನ ಮೊತ್ತದ ಜತೆಗೆ ಒಂಬತ್ತನೇ ಕಂತಿನ  4000 ರೂಪಾಯಿ ಹಣ ಕೂಡ ರೈತರ ಖಾತೆಗೆ ಬಂದಿದೆ.

Written by - Channabasava A Kashinakunti | Last Updated : Feb 21, 2022, 11:02 AM IST
  • ಪಿಎಂ ಕಿಸಾನ್‌ ಯೋಜನೆಯ 10ನೇ ಕಂತು ಬಿಡುಗಡೆಯಾಗಿದೆ
  • ನಿಮ್ಮ ಖಾತೆಗೆ ಹಣ ಬರದಿದ್ದರೆ ದೂರು ನೀಡಿ
  • ಕೃಷಿ ಸಚಿವಾಲಯ ಟೋಲ್ ಫ್ರೀ ನಂಬರ್ ಇಲ್ಲಿದೆ
PM Kisan ಯೋಜನೆಯ ₹4000 ಬಂದಿಲ್ಲವೆ? ಹಾಗಿದ್ರೆ, ಈ ಕೆಲಸ ಮಾಡಿ, ಖಂಡಿತಾ ಹಣ ಬರುತ್ತೆ! title=

ನವದೆಹಲಿ : ಪಿಎಂ ಕಿಸಾನ್ ಯೋಜನೆಯಡಿ 10 ನೇ ಕಂತಿನ ಹಣವನ್ನು ವರ್ಷದ ಮೊದಲ ದಿನದಂದು ಅಂದರೆ ಜನವರಿ 1 ರಂದು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme 2020) ಸಹಾಯದಿಂದ 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 20,000 ಕೋಟಿ ರೂ. 10ನೇ ಕಂತಿನ ಮೊತ್ತದ ಜತೆಗೆ ಒಂಬತ್ತನೇ ಕಂತಿನ  4000 ರೂಪಾಯಿ ಹಣ ಕೂಡ ರೈತರ ಖಾತೆಗೆ ಬಂದಿದೆ.

ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ

ಪಿಎಂ-ಕಿಸಾನ್ ಯೋಜನೆ(PM Kisan Samman Nidhi)ಯು ದುರ್ಬಲ ರೈತ ಕುಟುಂಬಗಳಿಗೆ ಪೂರಕ ಆದಾಯವನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ವಿಶೇಷವಾಗಿ ಸುಗ್ಗಿಯ ಕಾಲದ ಮೊದಲು ಅವರ ಇತರ ಅಗತ್ಯಗಳನ್ನು ಪೂರೈಸುತ್ತದೆ. ಇದರ ಅಡಿಯಲ್ಲಿ ಪ್ರತಿ ರೈತರ ಖಾತೆಗೆ 2000 ರೂ. ಈ ಯೋಜನೆಯಡಿ ಹಣ ಸಿಗದೇ ಇದ್ದಲ್ಲಿ ತಕ್ಷಣವೇ ಕೇಂದ್ರ ಕೃಷಿ ಸಚಿವಾಲಯ(Ministry of Agriculture)ಕ್ಕೆ ದೂರು ನೀಡಬಹುದು. 

ಇದನ್ನೂ ಓದಿ : 21-02-2022 Today Gold Price:ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಎಲ್ಲಿ ಮತ್ತು ಹೇಗೆ ದೂರು ನೀಡಬೇಕು?

ನಿಮ್ಮ ಖಾತೆಗೆ 2000 ರೂಪಾಯಿ ಬರದೇ ಇದ್ದಲ್ಲಿ ಮೊದಲು ನಿಮ್ಮ ಪ್ರದೇಶದ ಲೆಕ್ಕಾಧಿಕಾರಿ ಹಾಗೂ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬೇಕು. ನಿಮ್ಮ ಮಾತುಗಳು ಇಲ್ಲಿ ಕೇಳಿಸದಿದ್ದರೆ ಅಥವಾ ಈ ನಂತರವೂ ಖಾತೆಗೆ ಹಣ ಬರದಿದ್ದರೆ, ನೀವು ಅದಕ್ಕೆ ಸಂಬಂಧಿಸಿದ ಸಹಾಯವಾಣಿಗೆ ಕರೆ ಮಾಡಬಹುದು. ಈ ಡೆಸ್ಕ್ (PM-KISAN Help Desk)) ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಇದಲ್ಲದೇ, ನೀವು pmkisan-ict@gov.in ಇ-ಮೇಲ್ ಮೂಲಕವೂ ಸಂಪರ್ಕಿಸಬಹುದು. ಇನ್ನೂ ಕೆಲಸ ಮಾಡದಿದ್ದರೆ 011-23381092 (Direct HelpLine) ಸಂಖ್ಯೆಗೆ ಕರೆ ಮಾಡಿ.

ಕೃಷಿ ಸಚಿವಾಲಯಕ್ಕೆ ನೀಡಿ ದೂರು 

ಕೃಷಿ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ರೈತರ ಬ್ಯಾಂಕ್ ಖಾತೆಗೆ(Bank Account) ತಲುಪದಿದ್ದರೆ, ಅದನ್ನು ತಕ್ಷಣವೇ ಪರಿಹರಿಸಲಾಗುವುದು. ರೈತರ ಖಾತೆಗೆ ಹಣ ಬರದಿದ್ದಲ್ಲಿ ಅಥವಾ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಯಾವುದೇ ಸಂದರ್ಭದಲ್ಲಿ ಸರಿಪಡಿಸಲಾಗುವುದು. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನದಲ್ಲಿದೆ.

ನೀವು ಕೂಡ ಇಲ್ಲಿ ಸಂಪರ್ಕಿಸಬಹುದು

ಈ ಯೋಜನೆಯ ಸ್ಥಿತಿಯನ್ನು ನೀವೇ ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಬಹುದು. ನೀವು ಯೋಜನೆಯ ರೈತ ಕಲ್ಯಾಣ ವಿಭಾಗ(Farmer’s Welfare Section)ದಲ್ಲಿ ಸಂಪರ್ಕಿಸಬಹುದು. ದೆಹಲಿಯಲ್ಲಿರುವ ಅದರ ಫೋನ್ ಸಂಖ್ಯೆ 011-23382401 ಆಗಿದ್ದರೆ, ಅದರ ಇ-ಮೇಲ್ ಐಡಿ (pmkisan-hqrs@gov.in).

ಇದನ್ನೂ ಓದಿ : Petrol Price Today : ವಾಹನ ಸವಾರರ ಗಮನಕ್ಕೆ ; ಇಲ್ಲಿದೆ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ!

ಕೃಷಿ ಸಚಿವಾಲಯದ ಸಹಾಯವಾಣಿ ನಂಬರ್

PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261
PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011—23381092, 23382401
ಪಿಎಂ ಕಿಸಾನ್‌ನ ಹೊಸ ಸಹಾಯವಾಣಿ: 011-24300606
PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News