PM Kisan: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವುದು ಇನ್ನೂ ಸುಲಭ, ಎಸ್‌ಬಿಐನಲ್ಲಿ ಕೆಸಿಸಿಗೆ ಈ ರೀತಿ ಅರ್ಜಿ ಸಲ್ಲಿಸಿ

ಪಿಎಂ ಕಿಸಾನ್ ನ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಕೂಡ ಸುಲಭವಾಗಿದೆ.   

Written by - Yashaswini V | Last Updated : Sep 8, 2021, 06:40 AM IST
  • ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ಸಕಾಲಕ್ಕೆ ಸಾಲ ಪಡೆಯುತ್ತಾರೆ
  • ಈ ಯೋಜನೆಯನ್ನು 1998 ರಲ್ಲಿ ಆರಂಭಿಸಲಾಯಿತು
  • ರೈತರಿಗೆ ಅಲ್ಪಾವಧಿಯ ಸಾಲವನ್ನು ಸಕಾಲಕ್ಕೆ ಒದಗಿಸುವುದು ಇದರ ಉದ್ದೇಶವಾಗಿತ್ತು
PM Kisan: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವುದು ಇನ್ನೂ ಸುಲಭ, ಎಸ್‌ಬಿಐನಲ್ಲಿ ಕೆಸಿಸಿಗೆ ಈ ರೀತಿ ಅರ್ಜಿ ಸಲ್ಲಿಸಿ title=
How To Apply For KCC

PM Kisan: ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಕೇಂದ್ರ ಸರ್ಕಾರದ ಇಂತಹ ಯೋಜನೆಯಾಗಿದ್ದು, ಇದರ ಮೂಲಕ ರೈತರು ಸಕಾಲಕ್ಕೆ ಸಾಲ ಪಡೆಯುತ್ತಾರೆ. ಈ ಯೋಜನೆಯನ್ನು 1998 ರಲ್ಲಿ ಆರಂಭಿಸಲಾಯಿತು. ರೈತರಿಗೆ ಅಲ್ಪಾವಧಿಯ ಸಾಲವನ್ನು ಸಕಾಲಕ್ಕೆ ಒದಗಿಸುವುದು ಇದರ ಉದ್ದೇಶವಾಗಿತ್ತು. ಇದನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD) ಆರಂಭಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಈಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ಯೊಂದಿಗೆ ಲಿಂಕ್ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ರೈತರು ಶೇಕಡಾ 4 ರಷ್ಟು ಬಡ್ಡಿದರಲ್ಲಿ 3 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಪಿಎಂ ಕಿಸಾನ್ ನ ಫಲಾನುಭವಿಯು ಕೆಸಿಸಿಗೆ ಅರ್ಜಿ ಸಲ್ಲಿಸುವುದು ಸುಲಭವಾಗಿದೆ. 

ಕೊರೊನಾ ಅವಧಿಯಲ್ಲಿ 2 ಕೋಟಿಗೂ ಹೆಚ್ಚು ಕೆಸಿಸಿ ನೀಡಲಾಗಿದೆ: 
ಪಿಐಬಿ ಪ್ರಕಾರ, ಕರೋನಾ ಅವಧಿಯಲ್ಲಿ 2 ಕೋಟಿಗೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು (Kisan Credit Card) ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನ ಕಾರ್ಡುಗಳನ್ನು ಸಣ್ಣ ರೈತರಿಗೆ ನೀಡಲಾಗಿದೆ. ಇಂತಹ ರೈತರು ದೇಶದಲ್ಲಿ ಬರುವ ಕೃಷಿ ಮತ್ತು ಸಂಪರ್ಕ ಮೂಲಸೌಕರ್ಯದಿಂದ ಪ್ರಯೋಜನ ಪಡೆಯುತ್ತಾರೆ. ಕೃಷಿ, ಮೀನುಗಾರಿಕೆ ಮತ್ತು ಪಶು ಸಂಗೋಪನೆಯಲ್ಲಿ ತೊಡಗಿರುವ ರೈತರ ಅಗತ್ಯಗಳನ್ನು ಪೂರೈಸಲು ಕೆಸಿಸಿ ಯೋಜನೆಯನ್ನು ಆರಂಭಿಸಲಾಯಿತು. ಅಲ್ಪಾವಧಿಗೆ ಅವರಿಗೆ ಸಾಲ ಮಿತಿಯನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು. ಇದರಿಂದ ಅವರು ತಮ್ಮ ಇತರ ವೆಚ್ಚಗಳನ್ನು ಪೂರೈಸಬಹುದು. 

ಇದನ್ನೂ ಓದಿ- PM Kisan ಫಲಾನುಭವಿಗಳು ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡಿಯಬಹುದು : ಈ ರೀತಿ ಸುಲಭವಾಗಿ ಅರ್ಜಿ ಸಲ್ಲಿಸಿ

ಕಡಿಮೆ ಬಡ್ಡಿದರದಿಂದ ದೊಡ್ಡ ಪರಿಹಾರ:
ಇದು ಮಾತ್ರವಲ್ಲ, ಕೆಸಿಸಿಯ (KCC) ಸಹಾಯದಿಂದ ಸಾಲ ಪಡೆಯುವುದರಿಂದ ರೈತರು ಹೆಚ್ಚಿನ ಬಡ್ಡಿದರವನ್ನು ಬ್ಯಾಂಕುಗಳಿಗೆ ಪಾವತಿಸಬೇಕಾಗಿಲ್ಲ. ಏಕೆಂದರೆ ಅದರ ಬಡ್ಡಿ ದರವು 2 ಶೇಕಡಾ ಮತ್ತು ಸರಾಸರಿ 4 ಪ್ರತಿಶತದಿಂದ ಆರಂಭವಾಗುತ್ತದೆ. ಈ ಯೋಜನೆಯ ಸಹಾಯದಿಂದ ರೈತರು ಕಟಾವಿನ ನಂತರ ಸಾಲವನ್ನು ಮರುಪಾವತಿಸಬಹುದು. 

ಕೆಸಿಸಿಗಾಗಿ ನೀವು ಎಸ್‌ಬಿಐ ಮೂಲಕ ಅರ್ಜಿ ಸಲ್ಲಿಸಬಹುದು :
ದೇಶದ ರೈತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಮೂಲಕವೂ ಸಹ ಕೆಸಿಸಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಎಸ್‌ಬಿಐ ಆನ್ ಲೈನ್ ಸೇವೆಯನ್ನೂ ಆರಂಭಿಸಿದೆ. ಈ ಕುರಿತಂತೆ ಇತ್ತೀಚಿಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಎಸ್‌ಬಿಐ, ಯೋನೊ ಕೃಷಿ ವೇದಿಕೆಯಲ್ಲಿ ಕೆಸಿಸಿ ಪರಿಶೀಲನೆಗೆ ಅನುಕೂಲವಾಗುವಂತೆ ರೈತರಿಗೆ ಅನುವು ಮಾಡಿಕೊಡಲಾಗುವುದು! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೈತ ಗ್ರಾಹಕರು ಈಗ ಶಾಖೆಗೆ ಭೇಟಿ ನೀಡದೆ ಕೆಸಿಸಿ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ಅವರು ಎಸ್‌ಬಿಐ ಯೋನೋ ಆಪ್ (SBI YONO) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಇದನ್ನೂ ಓದಿ- PM Kisan Yojana: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಸಿಗಲಿದೆ Loan, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ ?
>> ಮೊದಲು SBI YONO ಆಪ್ ಡೌನ್‌ಲೋಡ್ ಮಾಡಿ

>> Https://www.sbiyono.sbi/index.html ಗೆ ಲಾಗಿನ್ ಮಾಡಿ

>> ಯೋನೊ ಕೃಷಿಗೆ ಭೇಟಿ ನೀಡಿ

>> ನಂತರ ಖಾತೆಗೆ ಹೋಗಿ

>> ಈಗ ಕೆಸಿಸಿ ರಿವ್ಯೂ ವಿಭಾಗಕ್ಕೆ ಹೋಗಿ

>> ಅನ್ವಯಿಸು ಮೇಲೆ ಕ್ಲಿಕ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News