PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ.

PM Kisan 11th installment: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ ಸಂತಸದ ಸುದ್ದಿ ಇದೆ.  ಇಂದು ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ನೀವು ಇದರ ಪ್ರಯೋಜನವನ್ನು ಪಡೆಯಲು ಬಯಸಿದರೆ, ನೀವು ಕೆವೈಸಿ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ.

Written by - Yashaswini V | Last Updated : May 31, 2022, 07:46 AM IST
  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಂದರೆ ಮೇ 31 ರಂದು ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.
  • ಪ್ರಧಾನಿ ಮೋದಿ ಇಂದು ರೈತರಿಗೆ 21,000 ಕೋಟಿ ರೂಪಾಯಿ ಕಂತು ಬಿಡುಗಡೆ ಮಾಡಲಿದ್ದಾರೆ.
  • ಇದರಿಂದ 10 ಕೋಟಿ ರೈತರಿಗೆ ಅನುಕೂಲವಾಗಲಿದೆ.
PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ.  title=
PM Kisan Yojana 11th installment

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 11ನೇ ಕಂತು :  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಸಂತಸದ ಸುದ್ದಿಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಂದರೆ ಮೇ 31 ರಂದು ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಈ ಆರ್ಥಿಕ ವರ್ಷದ ಮೊದಲ ಕಂತು ಇದಾಗಿದ್ದು, ರೈತರು ಕಾತರದಿಂದ ಕಾಯುತ್ತಿದ್ದರು. ಪ್ರಧಾನಿ ಮೋದಿ ಇಂದು ರೈತರಿಗೆ 21,000 ಕೋಟಿ ರೂಪಾಯಿ ಕಂತು ಬಿಡುಗಡೆ ಮಾಡಲಿದ್ದಾರೆ. ಇದರಿಂದ 10 ಕೋಟಿ ರೈತರಿಗೆ ಅನುಕೂಲವಾಗಲಿದೆ.

ಕೃಷಿ ಸಚಿವಾಲಯದ ಹೇಳಿಕೆಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಶಿಮ್ಲಾದಲ್ಲಿ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತು ಬಿಡುಗಡೆ ಮಾಡಲಿದ್ದಾರೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮದಲ್ಲಿ ಎಲ್ಲಾ ರಾಜ್ಯಗಳ ಸಿಎಂಗಳು ವರ್ಚುವಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ಕೇಂದ್ರದ 16 ಮುಖ್ಯ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸುಮಾರು 17 ಲಕ್ಷ ಜನರು ಈ ಕಾರ್ಯಕ್ರಮಕ್ಕೆ ವರ್ಚುವಲಿ ಸೇರುತ್ತಾರೆ. ಹಿಮಾಚಲದ 50 ಸಾವಿರ ಜನರು ಈ ಕಾರ್ಯಕ್ರಮಕ್ಕೆ ಸೇರುತ್ತಾರೆ. 'ಆಜಾದಿ ಕಾ ಅಮೃತ್ ಮಹೋತ್ಸವ' ಅಡಿಯಲ್ಲಿ ಗರೀಬ್ ಕಲ್ಯಾಣ್ ಸಮ್ಮೇಳನ ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ- Aadhaar Card: ಆಧಾರ್ ಕಾರ್ಡ್ ಧಾರಕರಿಗೊಂದು ಮಹತ್ವದ ಮಾಹಿತಿ, ಹೊಸ ಅಡ್ವೈಸರಿ ಹಿಂಪಡೆದ ಕೇಂದ್ರ ಸರ್ಕಾರ, ಕಾರಣ ಇಲ್ಲಿದೆ

ರೈತರ ಖಾತೆಗೆ ಪ್ರತಿ ವರ್ಷ 6000 ರೂ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ ರೂ 6,000 ಮೊತ್ತವನ್ನು ನೀಡಲಾಗುತ್ತದೆ. ಇದನ್ನು  2,000  ರೂ.ರ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಜನವರಿ 1ರಂದು ಪ್ರಧಾನಿಯವರು 10ನೇ ಕಂತಿನ 20 ಸಾವಿರ ಕೋಟಿ ರೂ.ಗೂ ಅಧಿಕ ಹಣ ಬಿಡುಗಡೆ ಮಾಡಿದ್ದು, ಇದರಿಂದ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಅನುಕೂಲವಾಗಿದೆ.  ಇಂದು ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ನೀವು ಇದರ ಪ್ರಯೋಜನವನ್ನು ಪಡೆಯಲು ಬಯಸಿದರೆ, ನೀವು ಕೆವೈಸಿ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ- PM Kisan 11ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ? ಈಗಲೇ ಈ ಸಂಖ್ಯೆಗೆ ಕರೆ ಮಾಡಿ

ಕೆವೈಸಿ ಕಡ್ಡಾಯ:
ನೀವೂ ಸಹ ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಆಗಿದ್ದರೆ ನೀವು ಪಿಎಂ ಕಿಸಾನ್‌ನ 11 ನೇ ಕಂತಿನ ಲಾಭವನ್ನು ಪಡೆಯಲು ಬಯಸಿದರೆ, ಅದಕ್ಕಾಗಿ ಕೆವೈಸಿ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಕೆವೈಸಿ  ಅನ್ನು ನವೀಕರಿಸಲು ಕೊನೆಯ ದಿನಾಂಕವು ಮೇ 31 ಆಗಿದೆ. ನಿಮ್ಮ ಕೆವೈಸಿ  ಅನ್ನು ನವೀಕರಿಸದಿದ್ದರೆ, ನೀವು ಪಿಎಂ ಕಿಸಾನ್ ಯೋಜನೆಯ 2000 ರೂಪಾಯಿಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. 

ನೀವು ಇನ್ನು ಕೆವೈಸಿ ಪೂರ್ಣಗೊಳಿಸದಿದ್ದರೆ ಅದನ್ನು ಈ ರೀತಿ ಅಪ್‌ಡೇಟ್ ಮಾಡಿ:
1. ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ. 
2. ಫಾರ್ಮರ್ ಕಾರ್ನರ್ ಆಯ್ಕೆಯಲ್ಲಿ ಇ-ಕೆವೈಸಿ ಲಿಂಕ್ ಕಾಣಿಸುತ್ತದೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಾಟ ಬಟನ್ ಮೇಲೆ ಕ್ಲಿಕ್ ಮಾಡಿ.
4. ಅಗತ್ಯವಿರುವ ಮಾಹಿತಿಯನ್ನು ಇಲ್ಲಿ ನಮೂದಿಸಿ.
5. ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿದಾಗ, ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News