ಪಿಎಫ್ ಚಂದಾದಾರರಿಗೊಂದು ಗುಡ್ ನ್ಯೂಸ್, ಖಾತೆಗೆ ಬಡ್ಡಿ ಬಂತು, ಮನೆಯಲ್ಲಿಯೇ ಕುಳಿತು ಈ ರೀತಿ ಪರಿಶೀಲಿಸಿ

PF Account Update: ಸರ್ಕಾರವು 2022-23ರ ಹಣಕಾಸು ವರ್ಷದ ಬಡ್ಡಿಯನ್ನು ಪಿಎಫ್ ಖಾತೆಗಳಲ್ಲಿ ಠೇವಣಿ ಮಾಡಲು ಪ್ರಾರಂಭಿಸಿದೆ. ಈ ಬಾರಿ ಪಿಎಫ್ ಬ್ಯಾಲೆನ್ಸ್ ಮೇಲೆ ಶೇ.8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಬಡ್ಡಿ ಮೊತ್ತವನ್ನು 24 ಕೋಟಿ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.  ಆದರೆ ಅದು ನಿಮ್ಮ ಖಾತೆಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. (Business News In Kannada)  

Written by - Nitin Tabib | Last Updated : Nov 10, 2023, 06:35 PM IST
  • ಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿ ಬರಲಾರಂಭಿಸಿದೆ
  • 2022-23 ರ ಬಡ್ಡಿ ದರವು ಶೇಕಡಾ 8.15 ಆಗಿದೆ
  • ಇಪಿಎಫ್‌ಒದ ಏಳು ಕೋಟಿ ಸದಸ್ಯರು ಪ್ರಯೋಜನ ಪಡೆಯಲಿದ್ದಾರೆ
ಪಿಎಫ್ ಚಂದಾದಾರರಿಗೊಂದು ಗುಡ್ ನ್ಯೂಸ್, ಖಾತೆಗೆ ಬಡ್ಡಿ ಬಂತು, ಮನೆಯಲ್ಲಿಯೇ ಕುಳಿತು ಈ ರೀತಿ ಪರಿಶೀಲಿಸಿ  title=

ನವದೆಹಲಿ: ಹಬ್ಬ ಹರಿದಿನಗಳಲ್ಲಿ ಪಿಎಫ್ ಖಾತೆದಾರರಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ತನ್ನ ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಪಾವತಿಸುವ ಕೆಲಸ ಆರಂಭಿಸಿದೆ. 2022-23 ರ ಹಣಕಾಸು ವರ್ಷದ ಬಡ್ಡಿ ದರವು 8.15% ಆಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು ಈಗಾಗಲೇ 24 ಕೋಟಿಗೂ ಹೆಚ್ಚು ಖಾತೆಗಳಲ್ಲಿ ಬಡ್ಡಿಯನ್ನು ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಬಡ್ಡಿ ಮೊತ್ತವು ಖಾತೆಗಳಲ್ಲಿ ಕಾಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಪಿಎಫ್ ಖಾತೆದಾರರ ಖಾತೆಯಲ್ಲಿ ಠೇವಣಿ ಇಡಲಾದ ಮೊತ್ತವನ್ನು ಇಪಿಎಫ್‌ಒ ಹಲವು ಕಡೆ ಹೂಡಿಕೆ ಮಾಡುತ್ತದೆ. ಈ ಹೂಡಿಕೆಯಿಂದ ಗಳಿಕೆಯ ಒಂದು ಭಾಗವನ್ನು ಖಾತೆದಾರರಿಗೆ ಬಡ್ಡಿಯ ರೂಪದಲ್ಲಿ ನೀಡಲಾಗುತ್ತದೆ. ಇದು EPFO ​​ನ ಏಳು ಕೋಟಿಗೂ ಹೆಚ್ಚು ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ. (Business News In Kannada)

ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಯ ಮೂಲ ವೇತನದಲ್ಲಿ 12% ರಷ್ಟು ಕಡಿತವನ್ನು ಇಪಿಎಫ್ ಖಾತೆಗೆ ಮಾಡಲಾಗುತ್ತದೆ. ಉದ್ಯೋಗದಾತರು ಮಾಡಿದ 12% ಕಡಿತದಲ್ಲಿ, 8.33% ಇಪಿಎಸ್ (ನೌಕರ ಪಿಂಚಣಿ ಯೋಜನೆ) ಗೆ ಹೋಗುತ್ತದೆ, ಆದರೆ ಉಳಿದ 3.67% ಇಪಿಎಫ್‌ಗೆ ಹೋಗುತ್ತದೆ. ಕಳೆದ ವರ್ಷ ಸಾಫ್ಟ್ ವೇರ್ ಉನ್ನತೀಕರಣದಿಂದಾಗಿ ಪಿಎಫ್ ಸದಸ್ಯರ ಖಾತೆಗಳಿಗೆ ತಡವಾಗಿ ಬಡ್ಡಿ ಹಣ ಬಂದಿತ್ತು. ನಿಮ್ಮ ಖಾತೆಯಲ್ಲಿ 1 ಲಕ್ಷ ರೂಪಾಯಿ ಠೇವಣಿ ಇದ್ದರೆ, ಈ ಬಾರಿ ನಿಮಗೆ 8,150 ರೂಪಾಯಿ ಬಡ್ಡಿ ಸಿಗಲಿದೆ. ಕಳೆದ ಬಾರಿ ಶೇ.8.1ರಷ್ಟು ಬಡ್ಡಿ ನೀಡಲಾಗಿತ್ತು. ಅಂದರೆ ಈ ಬಾರಿ ಪ್ರತಿ ಲಕ್ಷಕ್ಕೆ 50 ರೂಪಾಯಿ ಹೆಚ್ಚು ಬಡ್ಡಿ ಸಿಗಲಿದೆ.

ಈ ರೀತಿ ಪರಿಶೀಲಿಸಿ
ನಿಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿಯಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ನಿಮ್ಮ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಇದಕ್ಕಾಗಿ, EPFO ​​ನ ಅಧಿಕೃತ ವೆಬ್‌ಸೈಟ್ epfindia.gov.in ಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ನೀವು ತಿಳಿದುಕೊಳ್ಳಬಹುದು. ಈ ಸೈಟ್‌ಗೆ ಭೇಟಿ ನೀಡಿದ ನಂತರ, ಇ-ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿ. ಇದನ್ನು ಕ್ಲಿಕ್ ಮಾಡಿದ ನಂತರ, ನೀವು ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ PF ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೋಡಬಹುದು. ಇಲ್ಲಿ ನೀವು ಸದಸ್ಯರ ಐಡಿಯನ್ನು ಕಾಣುವಿರಿ. ನೀವು ಅದನ್ನು ಕ್ಲಿಕ್ಕ್ ಮಾಡಿದಾಗ, ಇ-ಪಾಸ್‌ಬುಕ್‌ನಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ನೀವು ನೋಡಬಹುದು.

ಇದನ್ನೂ ಓದಿ-Dhanatrayodashi 2023 ದಿನ ಚಿನ್ನ ಖರೀದಿಸಬೇಕೆ. ಇಲ್ಲಿ ಕೇವಲ 5 ರೂ.ಗಳಿಗೆ ಸಿಗುತ್ತಿದೆ ಪರಿಶುದ್ಧ ಚಿನ್ನ!

ಮಿಸ್ ಕಾಲ್ ಮತ್ತು SMS ನಿಂದ ಈ ರೀತಿ ಪರಿಶೀಲಿಸಿ
ನಿಮ್ಮ PF ಖಾತೆಗೆ ಲಿಂಕ್ ಆಗಿರುವ ಸಂಖ್ಯೆಯಿಂದ ನೀವು 011-22901406 ಗೆ ಮಿಸ್ಡ್ ಕಾಲ್ ಮಾಡಬೇಕಾಗುತ್ತದೆ. ಮಿಸ್ಡ್ ಕಾಲ್ ಮಾಡಿದ ತಕ್ಷಣ, ನಿಮ್ಮ ನೋಂದಾಯಿತ ಸಂಖ್ಯೆಗೆ ಒಂದು ಸಂದೇಶ ಬರುತ್ತದೆ, ಅದರಲ್ಲಿ ನೀವು ಪಿಎಫ್ ಬ್ಯಾಲೆನ್ಸ್ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬಹುದು. ನೀವು ಎಸ್‌ಎಂಎಸ್ ಮೂಲಕ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಕ್ಕಾಗಿ, ನಿಮ್ಮ UAN ಸಂಖ್ಯೆಯನ್ನು EPFO ​​ನಲ್ಲಿ ನೋಂದಾಯಿಸಿಕೊಳ್ಳಬೇಕು. ಮೊದಲನೆಯದಾಗಿ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ EPFOHO UAN ಅನ್ನು 7738299899 ಗೆ SMS ಮಾಡಿ. ಖಾತೆಗೆ ಸಂಬಂಧಿತ ಮಾಹಿತಿಯನ್ನು ನೀವು ಬಯಸುವ ಭಾಷೆಯನ್ನು ನೀವು ಆರಿಸಬೇಕಾಗುತ್ತದೆ. ಉದಾಹರಣೆಗೆ, ಹಿಂದಿಗಾಗಿ, ನೀವು EPFOHO UAN HIN ಅನ್ನು ಬರೆಯುವ ಮೂಲಕ ಸಂದೇಶವನ್ನು ಕಳುಹಿಸಬೇಕಾಗುತ್ತದೆ.

ಇದನ್ನೂ ಓದಿ-Diwali 2023 ಗೂ ಮುನ್ನವೇ ಹೊಸ ಪ್ರಿಪೈಡ್ ಯೋಜನೆ ಬಿಡುಗಡೆಗೊಳಿಸಿದ ಜಿಯೋ, ಸಿಗಲಿದೆ 150 ಜಿಬಿಗೂ ಅಧಿಕ ಡೇಟಾ!

ಅಪ್ಲಿಕೇಶನ್ ಮೂಲಕ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬೇಕು
ಇದಕ್ಕಾಗಿ ನೀವು ಮೊದಲು ಉಮಾಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ನಂತರ ನಿಮ್ಮ ಫೋನ್ ಸಂಖ್ಯೆಯನ್ನು ನೋಂದಾಯಿಸಿ ಮತ್ತು ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ಮೇಲಿನ ಎಡ ಮೂಲೆಯಲ್ಲಿ ನೀಡಲಾದ ಮೆನುಗೆ ಹೋಗಿ ಮತ್ತು 'ಸೇವಾ ಡೈರೆಕ್ಟರಿ' ಗೆ ಹೋಗಿ. ಇಲ್ಲಿ EPFO ​​ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ. ಅಲ್ಲಿ ಪಾಸ್ ಬುಕ್ ವೀಕ್ಷಿಸಿ ಆಯ್ಕೆಗೆ ಹೋದ ನಂತರ, ನಿಮ್ಮ UAN ಸಂಖ್ಯೆ ಮತ್ತು OTP ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News