ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಹಿಂದಿನ ದಿನಗಳ ಕುಸಿತದಿಂದ ಚೇತರಿಸಿಕೊಂಡ ನಂತರವೂ ಕಚ್ಚಾ ತೈಲವು ಮತ್ತೊಮ್ಮೆ 100 ಅಮೆರಿಕನ್ ಡಾಲರ್ ಸಮೀಪದಲ್ಲಿ ವಹಿವಾಟು ನಡೆಸುತ್ತಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಹಳೆಯ ಮಟ್ಟದಲ್ಲಿಯೇ ಇವೆ. ಮತ್ತೊಂದೆಡೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಅಡುಗೆ ಅನಿಲದ ವೆಚ್ಚವನ್ನು ಸರಿದೂಗಿಸುವ ಸ್ಥಿತಿಯನ್ನು ತಲುಪಿವೆ. ಆದರೆ ಡೀಸೆಲ್ ಮಾರಾಟದಲ್ಲಿ ಕಂಪನಿಗಳು ಇನ್ನೂ ನಷ್ಟವನ್ನು ಎದುರಿಸುತ್ತಿವೆ.
ಅಬಕಾರಿ ಸುಂಕ ಕಡಿತ
ಮೇಘಾಲಯ ಮತ್ತು ಮಹಾರಾಷ್ಟ್ರ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಯನ್ನು 3 ತಿಂಗಳ ಹಿಂದೆ ಬದಲಾಯಿಸಲಾಗಿತ್ತು. ಮೇ 22ರಂದು ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಕೇಂದ್ರವು ದೊಡ್ಡ ಪರಿಹಾರ ನೀಡಿತ್ತು. ಬುಧವಾರ ಬೆಳಿಗ್ಗೆ WTI ಕಚ್ಚಾ ಬೆಲೆ ಪ್ರತಿ ಬ್ಯಾರೆಲ್ಗೆ 92.21 ಅಮೆರಿಕನ್ ಡಾಲರ್ ತಲುಪಿದೆ. ಅದೇ ರೀತಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 99.79 ಅಮೆರಿಕನ್ ಡಾಲರ್‍ನಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ವಾರ ಮೇಘಾಲಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 1.5 ರೂ. ಕಡಿಮೆ ಮಾಡಿತ್ತು.
ಇದನ್ನೂ ಓದಿ: UPI Payment Limit: UPI ನಿಂದ ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು?
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಸರ್ಕಾರ ರಚನೆಯಾದ ನಂತರ ರಾಜ್ಯದಲ್ಲಿ ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಇಳಿಕೆ ಮಾಡಲಾಗಿತ್ತು. ಮೇ 22ರಂದು ಮೋದಿ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ್ದರಿಂದ ಪೆಟ್ರೋಲ್ 8 ರೂ. ಮತ್ತು ಡೀಸೆಲ್ 6 ರೂ.ನಷ್ಟು ಕಡಿಮೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಕೆಲವು ರಾಜ್ಯ ಸರ್ಕಾರಗಳು ವ್ಯಾಟ್ ಕಡಿತಗೊಳಿಸಿ ಜನರಿಗೆ ತುಸು ನೆಮ್ಮಿದಿ ನೀಡಿದ್ದವು.
ನಿಮ್ಮ ನಗರದಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
- ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ. & ಡೀಸೆಲ್ 89.62 ರೂ. ಇದೆ.
- ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 111.35 ರೂ. & ಡೀಸೆಲ್ 97.28 ರೂ. ಇದೆ.
- ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ 94.24 ರೂ.ನಂತೆ ಮಾರಾಟವಾಗುತ್ತಿದೆ.
- ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಇದೆ.
- ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.96 ರೂ. ಇದೆ.
- ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.76 ರೂ. ಇದೆ.
- ಪಾಟ್ನಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ 107.24 ರೂ. ಮತ್ತು ಡೀಸೆಲ್ 94.04 ರೂ. ಇದೆ.
- ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ ಲೀಟರ್‌ಗೆ 87.89 ರೂ. ಇದೆ.
- ಹೈದ್ರಾಬಾದ್‍ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100.66 ರೂ. ಇದ್ದರೆ, ಡೀಸೆಲ್ 97.82 ರೂ. ಇದೆ.
- ಭುವನೇಶ್ವರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.19 ರೂ. ಇದ್ದರೆ, ಡೀಸೆಲ್ 94.76 ರೂ. ಇದೆ.
ಇದನ್ನೂ ಓದಿ: ಸದ್ದಿಲ್ಲದೇ Harley Davidson ಲುಕ್ ಹೊಂದಿರುವ ಬೈಕ್ ಬಿಡುಗಡೆ ಮಾಡಿದೆ ಈ ಕಂಪನಿ, 10 ಸಾವಿರ ಪಾವತಿಸಿ ಬುಕ್ ಮಾಡಿ
ನಿಮ್ಮ ನಗರದ ದರಗಳನ್ನು ಪರಿಶೀಲಿಸಿ
ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ತಿಳಿದುಕೊಳ್ಳಲು ತೈಲ ಕಂಪನಿಗಳು SMS ಮೂಲಕ ದರ ಪರಿಶೀಲಿಸುವ ಸೌಲಭ್ಯ ಒದಗಿಸುತ್ತವೆ. ದರವನ್ನು ಪರಿಶೀಲಿಸಲು ಇಂಡಿಯನ್ ಆಯಿಲ್ (IOC) ಗ್ರಾಹಕರು RSP<ಡೀಲರ್ ಕೋಡ್> ಅನ್ನು ಬರೆದು 9224992249ಗೆ ಕಳುಹಿಸಬೇಕು. HPCL ಗ್ರಾಹಕರು HPPRICE <ಡೀಲರ್ ಕೋಡ್> ಅನ್ನು 9222201122ಗೆ ಮತ್ತು BPCL ಗ್ರಾಹಕರು RSP<ಡೀಲರ್ ಕೋಡ್> 9223112222ಗೆ SMS ಮಾಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.