ಆಗಸ್ಟ್ 28 ರ ಪೆಟ್ರೋಲ್-ಡೀಸೆಲ್ ಬೆಲೆ : ಇಲ್ಲಿದೆ ನಿಮ್ಮ ನಗರದ ಇಂಧನ ಬೆಲೆ

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 104.98 ರೂ. ಇದ್ದು ಮತ್ತೆ ಡೀಸೆಲ್ ಪ್ರತಿ ಲೀಟರ್‌ಗೆ 94.34 ರೂ. ಇದೆ.

Written by - Channabasava A Kashinakunti | Last Updated : Aug 28, 2021, 09:18 AM IST
  • ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
  • ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 104.98 ರೂ.
  • ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು 101.49 ರೂ.
ಆಗಸ್ಟ್ 28 ರ ಪೆಟ್ರೋಲ್-ಡೀಸೆಲ್ ಬೆಲೆ : ಇಲ್ಲಿದೆ ನಿಮ್ಮ ನಗರದ ಇಂಧನ ಬೆಲೆ title=

ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ ಆಗಸ್ಟ್ 28 ರಂದು ಸತತ ನಾಲ್ಕನೇ ದಿನವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಆಗಸ್ಟ್ 24 ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ(Petrol Prices)ಯನ್ನು 101.49 ರೂ. ಮತ್ತು ಡೀಸೆಲ್ ದರ 88.92 ರೂ.ಗೆ ಇಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಆಗಸ್ಟ್ 28 ರಂದು ಬೆಲೆಗಳು ಹಾಗೆಯೇ ಉಳಿದಿವೆ.

ಇದನ್ನೂ ಓದಿ : Bank Holidays List: ಸೆಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್‌ಗಗಳಿಗೆ ರಜೆ, ಮನೆಯಿಂದ ಹೊರಡುವ ಮುನ್ನ ಈ ಪಟ್ಟಿಯನ್ನು ಪರಿಶೀಲಿಸಿ

ಮುಂಬೈ(Mumbai)ನಲ್ಲಿ, ಇಂಧನ ಬೆಲೆಗಳು ಇದೇ ರೀತಿಯ ಪ್ರವೃತ್ತಿಯಲ್ಲಿ ಉಳಿದುಕೊಂಡಿವೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಚಿಲ್ಲರೆ ಬೆಲೆ ಲೀಟರ್‌ಗೆ 107.52 ರೂ. ಮುಂಬೈನಲ್ಲಿ  ಮೇ 29 ರಂದು, ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ.ಗಿಂತ ಹೆಚ್ಚಿನ ಬೆಲೆಗೆ  ಮಾರಾಟವಾಗುತ್ತಿರುವ ದೇಶದ ಮೊದಲ ಮೆಟ್ರೋ ನಗರ ಎನಿಸಿಕೊಂಡಿದ್ದೆ. ಇಂದು ಮಂಬೈ ನಲ್ಲಿ ಡೀಸೆಲ್ ಬೆಲೆ 96.48 ರೂ.ಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 104.98 ರೂ. ಇದ್ದು ಮತ್ತೆ ಡೀಸೆಲ್(Diesel prices) ಪ್ರತಿ ಲೀಟರ್‌ಗೆ 94.34 ರೂ. ಇದೆ. ಕೋಲ್ಕತ್ತಾದಲ್ಲೂ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಇಲ್ಲಿ ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 101.82 ಮತ್ತು 91.98 ರೂ. ಇದೆ.

ಇದನ್ನೂ ಓದಿ : Aadhaar Update : NRIsಗೂ ಕೂಡಾ ಸುಲಭವಾಗಿ ಮಾಡಿಸಬಹುದು Aadhaar Card, 6 ತಿಂಗಳು ಕಾಯುವ ಅಗತ್ಯವಿಲ್ಲ

ಚೆನ್ನೈ(Chennai) ಕೂಡ ಒಂದು ಲೀಟರ್ ಪೆಟ್ರೋಲ್ ಬೆಲೆ 99.20 ರೂ. ತಮಿಳುನಾಡಿನ ಡಿಎಂಕೆ ಸರ್ಕಾರ ಈ ಹಿಂದೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3 ರೂಪಾಯಿಗಳ ತೆರಿಗೆ ಕಡಿತವನ್ನು ಘೋಷಿಸಿತ್ತು. ಚೆನ್ನೈನಲ್ಲಿ ಡೀಸೆಲ್ ಬೆಲೆಯೂ ಬದಲಾಗದೆ ಉಳಿದಿದ್ದು ಸಧ್ಯ 93.52 ರೂ. ಇದೆ.

ಭಾರತವು ತನ್ನ ತೈಲ ಅಗತ್ಯಗಳನ್ನು ಪೂರೈಸಲು ಆಮದುಗಳ ಮೇಲೆ ಶೇ.85 ರಷ್ಟು ಅವಲಂಬಿತವಾಗಿದೆ ಮತ್ತು ಆದ್ದರಿಂದ ಸ್ಥಳೀಯ ಇಂಧನ ದರಗಳನ್ನು ಅಂತರರಾಷ್ಟ್ರೀಯ ತೈಲ ಬೆಲೆಗಳಿಗೆ ಬೆಂಚ್ಮಾರ್ಕ್ ಮಾಡುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel prices)ಯನ್ನು ಕೊನೆಯದಾಗಿ ಜುಲೈ 17 ರಂದು ಏರಿಸಲಾಗಿತ್ತು. ಅದಕ್ಕೂ ಮೊದಲು ಮೇ 4 ರಿಂದ ಜುಲೈ 17 ರ ನಡುವೆ ಪೆಟ್ರೋಲ್ ಬೆಲೆಯನ್ನು 11.44 ರೂ. ರಷ್ಟು ಹೆಚ್ಚಿಸಲಾಗಿತ್ತು.

ಮೇ 24 ರಿಂದ ಅಂತರರಾಷ್ಟ್ರೀಯ ತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರಿಂದ ಆಗಸ್ಟ್ 24 ರಂದು ಇಳಿಕೆ ಕಂಡು ಬಂದಿತ್ತು.

ಈ ಅವಧಿಯಲ್ಲಿ ಡೀಸೆಲ್ ದರಗಳು 9.14 ರೂ. ಈ ಅವಧಿಯಲ್ಲಿ ಬೆಲೆ ಏರಿಕೆಯು ದೇಶದ ಅರ್ಧಕ್ಕಿಂತ ಹೆಚ್ಚು ಪೆಟ್ರೋಲ್ ಬೆಲೆಯನ್ನು 100 ರೂ. ಕ್ಕಿಂತ ಹೆಚ್ಚಿಸಿದೆ ಆದರೆ ಡೀಸೆಲ್ ಕನಿಷ್ಠ ಮೂರು ರಾಜ್ಯಗಳಲ್ಲಿ ಆ ಮಟ್ಟವನ್ನು ದಾಟಿದೆ.

ಇದನ್ನೂ ಓದಿ : Post Office Schemes : ಅತ್ಯುತ್ತಮ ಬಡ್ಡಿ ನೀಡುವ ಟಾಪ್ 5 Post Office ಯೋಜನೆಗಳಿವು

ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ :

1. ಮುಂಬೈ

ಪೆಟ್ರೋಲ್ - ಪ್ರತಿ ಲೀಟರ್‌ಗೆ 107.52 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.48 ರೂ.

2. ದೆಹಲಿ

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.49 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 88.92 ರೂ.

3. ಚೆನ್ನೈ

ಪೆಟ್ರೋಲ್ - ಪ್ರತಿ ಲೀಟರ್‌ಗೆ 99.20 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 93.52 ರೂ.

4. ಕೋಲ್ಕತಾ

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.82 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 91.98 ರೂ.

5. ಭೋಪಾಲ್

ಪೆಟ್ರೋಲ್ - ಪ್ರತಿ ಲೀಟರ್‌ಗೆ 109.91 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 97.72 ರೂ.

6. ಹೈದರಾಬಾದ್

ಪೆಟ್ರೋಲ್ - ಪ್ರತಿ ಲೀಟರ್‌ಗೆ 105.54 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.99 ರೂ.

7. ಬೆಂಗಳೂರು

ಪೆಟ್ರೋಲ್ - ಪ್ರತಿ ಲೀಟರ್‌ಗೆ 104.98 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 94.34 ರೂ.

8. ಗುವಾಹಟಿ

ಪೆಟ್ರೋಲ್ - ಪ್ರತಿ ಲೀಟರ್‌ಗೆ 97.33 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 88.29 ರೂ.

9. ಲಕ್ನೋ

ಪೆಟ್ರೋಲ್ - ಪ್ರತಿ ಲೀಟರ್‌ಗೆ 98.56 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 89.29 ರೂ.

10. ಗಾಂಧಿನಗರ

ಪೆಟ್ರೋಲ್ - ಪ್ರತಿ ಲೀಟರ್‌ಗೆ 98.52 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.00 ರೂ.

11. ತಿರುವನಂತಪುರಂ

ಪೆಟ್ರೋಲ್ - ಪ್ರತಿ ಲೀಟರ್‌ಗೆ 103.69 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.68 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News