Petrol-Diesel Price Drop: ಕೇಳಲು ವಿಚಿತ್ರ ಎನಿಸಬಹುದು ಆದರೆ... Omicronನಿಂದ Petrol-Diesel ಬೆಲೆ ಇಳಿಕೆ ಸಾಧ್ಯತೆ!

Petrol-Diesel Price Drop - ಒಂದು ವೇಳೆ ಭವಿಷ್ಯದಲ್ಲಿ ಕೊರೊನಾ ವೈರಸ್ ನ ಹೊಸ ರೂಪಾಂತರಿ Omicron ನ ಪ್ರಭಾವ ಮತ್ತಷ್ಟು ಹೆಚ್ಚಾದರೆ, ನಂತರ ವಿಶ್ವಾದ್ಯಂತ ನಿರ್ಬಂಧನೆಗಳು ಹೆಚ್ಚಾಗಲಿವೆ. ಇದರಿಂದ ಕಚ್ಚಾ ತೈಲ ಬೇಡಿಕೆಯ ಮೇಲೂ ಕೂಡ ಪರಿಣಾಮ ಉಂಟಾಗಿ ಅವು ಇಳಿಕೆಯಾಗುವ ಸಾಧ್ಯತೆ ಇದೆ. 

Written by - Nitin Tabib | Last Updated : Nov 29, 2021, 06:55 PM IST
  • ಕಚ್ಚಾ ತೈಲ ಬೆಲೆ ಇಳಿಕೆ
  • ಕೊರೊನಾ ಭೀತಿಯಿಂದ ನಿರ್ಬಂಧಗಳು ಹೆಚ್ಚಿವೆ
  • ಪೆಟ್ರೋಲ್ ಐದು ರೂಪಾಯಿ ಕಡಿಮೆ ಆಗುವ ನಿರೀಕ್ಷೆ.
Petrol-Diesel Price Drop: ಕೇಳಲು ವಿಚಿತ್ರ ಎನಿಸಬಹುದು ಆದರೆ... Omicronನಿಂದ Petrol-Diesel ಬೆಲೆ ಇಳಿಕೆ ಸಾಧ್ಯತೆ! title=
Petrol-Diesel-LPG Price Drop (File Photo)

ನವದೆಹಲಿ:  Petrol-Diesel Price Drop - ಕೊರೊನಾ ವೈರಸ್‌ನ (Coronavirus) ಹೊಸ ರೂಪಾಂತರಿ (New Variant) ಓಮಿಕ್ರಾನ್‌ನಿಂದ (Omicron) ಇಡೀ ವಿಶ್ವವೇ ಭೀತಿಗೋಳಗಗಿದೆ  ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೈರಸ್ ಪ್ರಕರಣಗಳು ವರದಿಯಾದ ನಂತರ ಭಾರತ ಸೇರಿದಂತೆ ಹಲವು ದೇಶಗಳು ಅಲರ್ಟ್ ಆಗಿವೆ. ಆದರೆ ಒಂದೆಡೆ ವೈರಸ್‌ (Covid-18) ಭೀತಿ ಎದುರಾಗಿದ್ದರೆ ಮತ್ತೊಂದೆಡೆ ನೆಮ್ಮದಿಯ ಸುದ್ದಿಯೊಂದು ಕೂಡ ಪ್ರಕಟವಾಗಿದೆ. ವೈರಸ್‌ನಿಂದಾಗಿ ವಿಶ್ವಾದ್ಯಂತ ಹೆಚ್ಚುತ್ತಿರುವ ನಿರ್ಬಂಧನೆಗಳ ಕಾರಣ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೀಗ ವ್ಯಕ್ತವಾಗತೊಡಗಿದೆ. 

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?
'ಹಿಂದೂಸ್ತಾನ'ನಲ್ಲಿ ಪ್ರಕಟಗೊಂಡ ಸುದ್ದಿ ಪ್ರಕಾರ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 5 ರೂ.ವರೆಗೆ ಕಡಿಮೆಯಾಗಬಹುದು ಎನ್ನಲಾಗಿದೆ. ಜಾಗತಿಕವಾಗಿ, ವೈರಸ್‌ನ ಭಯವು ಕಚ್ಚಾ ತೈಲದ ಬೆಲೆಯಲ್ಲಿ  (Crude Oil Price Drop) ಇಳಿಕೆಗೆ  ಕಾರಣವಾಗಲಿದೆ ಎಂದು ಇಂಧನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಆಧಾರದ ಮೇಲೆ ಡಿಸೆಂಬರ್ 1 ರಿಂದ ಬಿಡುಗಡೆಯಾಗುವ ಹೊಸ ದರದಲ್ಲಿ ಕಡಿತ ನಿರೀಕ್ಷಿಸಬಹುದು ಎನ್ನಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗಿದ್ದು,  ಇನ್ಮುಂದೆ ಭಾರತದಲ್ಲೂ ವಾಣಿಜ್ಯ ಹಾಗೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (LPG Price Drop) ಬೆಲೆ ಕಡಿಮೆಯಾಗಬಹುದು.

IIFL ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳುವ ಪ್ರಕಾರ, ಕರೋನಾ ಹೊಸ ರೂಪಾಂತರವು ಹೊರಬಂದ ನಂತರ, ಪ್ರಪಂಚದ ಎಲ್ಲಾ ದೇಶಗಳು ಎಚ್ಚೆತ್ತುಕೊಂಡಿವೆ . ಈ ಕಾರಣದಿಂದಾಗಿ ವಿಮಾನ ಸೇವೆಗಳ ಮೇಲೆ ಮತ್ತೆ ನಿರ್ಬಂಧಗಳು ಮತ್ತು ಲಾಕ್‌ಡೌನ್ ಹೇರಲಾಗುತ್ತಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೂ ಕಂಡು ಬರುತ್ತಿದ್ದು, ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇ.12ರಷ್ಟು ಕುಸಿದು 72 ಡಾಲರ್‌ಗೆ ತಲುಪಿದೆ.

ಜಾಗತಿಕ ನಿರ್ಬಂಧಗಳು ಪರಿಣಾಮ ಬೀರಲಿವೆ
ಹೊಸ ರೂಪಾಂತರಿ Omicron ಪರಿಣಾಮವು ಭವಿಷ್ಯದಲ್ಲಿ ಹೆಚ್ಚಾದರೆ, ನಂತರ ನಿರ್ಬಂಧಗಳು ವಿಶ್ವಾದ್ಯಂತ ಹೆಚ್ಚಾಗಲಿವೆ. ಇದು ಕಚ್ಚಾ ತೈಲದ ಬೇಡಿಕೆಯ ಮೇಲೂ ಪರಿಣಾಮ ಬೀರಲಿದೆ ಮತ್ತು ಅವುಗಳ ದರಗಳನ್ನು ಇಳಿಸಲಿದೆ. ಅಲ್ಲದೆ ಡಿಸೆಂಬರ್ 2ರಂದು ನಡೆಯಲಿರುವ OPEC ರಾಷ್ಟ್ರಗಳ ಉದ್ದೇಶಿತ ಸಭೆಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ನಿರ್ಧಾರ ಹೊರಬೀಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಪೂರೈಕೆಯು ಹೆಚ್ಚು ಮತ್ತು ಬೇಡಿಕೆಯು ಕಡಿಮೆಯಾಗಿರುತ್ತದೆ, ಇದರಿಂದಾಗಿ ಬೆಲೆಗಳು ಕುಸಿಯಲಿವೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 72 ರಷ್ಟಿದ್ದರೂ ಸಹ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಸುಮಾರು 5 ರೂಪಾಯಿಗಳಷ್ಟು ಅಗ್ಗವಾಗಬಹುದು.

ಇದನ್ನೂ ಓದಿ-Earn Money : ನಿಮ್ಮ ಬಳಿ ಈ 2 ರೂ. ನಾಣ್ಯವಿದ್ದರೆ ನೀವು ಗಳಿಸಬಹುದು 5 ಲಕ್ಷ! ಹೇಗೆ? ಇಲ್ಲಿದೆ ನೋಡಿ

ಈ ಕುರಿತು ಮಾತನಾಡಿರುವ ಇಂಧನ ತಜ್ಞ ನರೇಂದ್ರ ತನೇಜಾ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಶೇಕಡಾ 10 ರಷ್ಟು ಕಡಿಮೆಯಾಗಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಈ ರೀತಿಯ ಕುಸಿತದ ಭರವಸೆ ಸ್ವಲ್ಪ ಕಡಿಮೆಯೇ ಎನ್ನಬಹುದು ಎಂದಿದ್ದಾರೆ. ಶೇ.5-ಶೇ.7 ರಷ್ಟು ಇಲಿಕೆಯಾದರು ಕೂಡ ತೈಲ ಕಂಪನಿಗಳು 15 ದಿನಗಳಲ್ಲಿ ತಮ್ಮ ಒಂದು ಸೈಕಲ್ ಅನ್ನು ಪೂರೈಸಲಿವೆ. ಶೇ.5 ರಷ್ಟು ಇಳಿಕೆಯಾದರೂ ಪೆಟ್ರೋಲ್ ಬೆಲೆ ಲೀಟರ್‌ಗೆ 5 ರೂ.ವರೆಗೆ ಇಳಿಕೆಯಾಗಬಹುದು.

ಇದನ್ನೂ ಓದಿ-LIC ಈ ಯೋಜನೆಯಲ್ಲಿ 4 ವರ್ಷ ಪ್ರೀಮಿಯಂ ಪಾವತಿಸಿ 1 ಕೋಟಿ ಲಾಭ ಪಡೆಯಿರಿ!

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಕುಸಿತದ ಪರಿಣಾಮ ಕೆಲವೇ ದಿನಗಳ ನಂತರ ಗೋಚರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಜಪಾನ್, ಅಮೆರಿಕ ಸೇರಿದಂತೆ ಭಾರತದಂತಹ ರಾಷ್ಟ್ರಗಳು ಕಚ್ಚಾ ತೈಲದ ಬೆಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿವೆ. ಆದರೆ ಇದರ ಪರಿಣಾಮ ಕೆಲವು ದಿನಗಳ ನಂತರ ಗೋಚರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ-ATM New Rule: ATMಗಳಿಂದ ಕ್ಯಾಶ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ನೀವೂ ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News