ಸ್ಥಿರವಾಗಿದೆ ಇಂಧನ ಬೆಲೆ: ಸಾರ್ವಜನಿಕರಿಗೆ ಕೊಂಚ ರಿಲೀಫ್‌

ಸದ್ಯ ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ದರವಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ. 

Written by - Bhavishya Shetty | Last Updated : Apr 27, 2022, 08:12 AM IST
  • ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಬದಲಾವಣೆಯಾಗಿಲ್ಲ
  • ಸಾರ್ವಜನಿಕರಿಗೆ ಕೊಂಚ ರಿಲೀಫ್‌
  • ಏಪ್ರಿಲ್ 6 ರಂದು ಕೊನೆಯದಾಗಿ ಲೀಟರ್‌ಗೆ 80 ಪೈಸೆ ಹೆಚ್ಚಳ
ಸ್ಥಿರವಾಗಿದೆ ಇಂಧನ ಬೆಲೆ: ಸಾರ್ವಜನಿಕರಿಗೆ ಕೊಂಚ ರಿಲೀಫ್‌ title=
Petrol price

ಬೆಂಗಳೂರು : ಕಳೆದ 22 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಮೂಲಕ ಸಾರ್ವಜನಿಕರಿಗೆ ತೈಲ ಕಂಪನಿಗಳು ಕೊಂಚ ರಿಲೀಫ್‌ ನೀಡಿದೆ. ಕಂಪನಿಗಳು ಏಪ್ರಿಲ್ 6 ರಂದು ಕೊನೆಯದಾಗಿ ಲೀಟರ್‌ಗೆ 80 ಪೈಸೆ ಹೆಚ್ಚಿಸಿದ್ದವು. ಆದರೆ ಸದ್ಯ ಇರುವ ತೈಲ ಬೆಲೆಯು ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿರುವುದು ಮಾತ್ರ ನಿಜ. 

ಇದನ್ನು ಓದಿ: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಭಾರೀ ಇಳಿಕೆ ಕಂಡ ಬಂಗಾರದ ಬೆಲೆ

ಸದ್ಯ ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ದರವಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.03 ರೂಪಾಯಿಯಿದೆ. 

ಇದನ್ನು ಓದಿ: ಮತ್ತೆ ಹುಳಿ ಅನಿಸುತ್ತಿದೆ ನಿಂಬೆ ದರ ಏರಿಕೆ: ಇಲ್ಲಿದೆ ಇಂದಿನ ತರಕಾರಿಗಳ ಬೆಲೆ

ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 112.74 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 113.09 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.46 ರೂಪಾಯಿ ಇದೆ. ಮೈಸೂರು, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಕಳೆದ ದಿನಕ್ಕಿಂತ ತೈಲಬೆಲೆಯಲ್ಲಿ ಕೊಂಚ ದರ ಏರಿಕೆ ಕಂಡುಬಂದಿದೆ.      

ಮಹಾನಗರಗಳು ಪೆಟ್ರೋಲ್ ದರ   ಡೀಸೆಲ್ ದರ
ನವದೆಹಲಿ  105.41 ರೂ 96.67 ರೂ.
ಮುಂಬೈ 120.51 ರೂ 104.77 ರೂ. 
ಕೋಲ್ಕತ್ತಾ 115.12 ರೂ 99.83 ರೂ. 
ಚೆನ್ನೈ 110.85 ರೂ.    100.94 ರೂ. 
ಭೋಪಾಲ್ 118.14 ರೂ. 101.16 ರೂ.
ಹೈದರಾಬಾದ್ 119.49 ರೂ 105. 49 ರೂ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News