Flipkart Loan : ಕೇವಲ 30 ಸೆಕೆಂಡ್‌ಗಳಲ್ಲಿ ʼಫ್ಲಿಪ್‌ಕಾರ್ಟ್‌ʼನಿಂದ ಸಾಲ ಪಡೆಯಿರಿ..! ಹೇಗೆ ಗೊತ್ತಾ..?

Flipkart Loan : ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಈಗಿನಿಂದ ಹೊಸ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಈ ವೇದಿಕೆಯು ಇನ್ನು ಮುಂದೆ ವೈಯಕ್ತಿಕ ಸಾಲಗಳನ್ನು ಸಹ ಒದಗಿಸುತ್ತದೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.

Written by - Krishna N K | Last Updated : Jul 8, 2023, 09:28 PM IST
  • ಫ್ಲಿಪ್‌ಕಾರ್ಟ್ ಬಳಕೆದಾರರಿಗೆ ಗುಡ್ ನ್ಯೂಸ್.
  • ಫ್ಲಿಪ್‌ಕಾರ್ಟ್ ಹೊಸ ಸೇವೆಗಳನ್ನು ಪ್ರಾರಂಭಿಸುತ್ತಿದೆ.
  • ವೈಯಕ್ತಿಕ ಸಾಲಗಳನ್ನು ಸಹ ಒದಗಿಸುತ್ತದೆ.
Flipkart Loan : ಕೇವಲ 30 ಸೆಕೆಂಡ್‌ಗಳಲ್ಲಿ ʼಫ್ಲಿಪ್‌ಕಾರ್ಟ್‌ʼನಿಂದ ಸಾಲ ಪಡೆಯಿರಿ..! ಹೇಗೆ ಗೊತ್ತಾ..? title=

Flipkart personal loans : ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗಾಗಿ ಹೊಸ ಸೇವೆಗಳನ್ನು ಪ್ರಾರಂಭಿಸಲಿದೆ. ವೈಯಕ್ತಿಕ ಸಾಲಕ್ಕಾಗಿ ಕಾಯುತ್ತಿರುವವರು ಇನ್ನು ಮುಂದೆ ಯಾವುದೇ ಸುದೀರ್ಘ ಬ್ಯಾಂಕಿಂಗ್ ಪ್ರಕ್ರಿಯೆಯಿಲ್ಲದೆ ಸಾಲ ಪಡೆಯುವ ಅವಕಾಶವನ್ನು ಒದಗಿಸಿದೆ. ಫ್ಲಿಪ್‌ಕಾರ್ಟ್ ಪರ್ಸನಲ್ ಲೋನ್‌ ಲಭ್ಯವಿದೆ.

ಇತ್ತೀಚಿನ ದಿನಗಳಲ್ಲಿ, ವೈಯಕ್ತಿಕ ಸಾಲ ಸೌಲಭ್ಯ ಹೆಚ್ಚಾಗಿದೆ. ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಸಾಲದ ಅಪ್ಲಿಕೇಶನ್‌ಗಳು ಲಭ್ಯವಿದೆ. ವೈಯಕ್ತಿಕ ಸಾಲಗಳನ್ನು ಜನ ಹೆಚ್ಚಾಗಿ ಪಡೆಯುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲ ಪಡೆಯುವುದೇ ದೊಡ್ಡ ಪ್ರಹಸನ. ಬ್ಯಾಂಕ್‌ಗಳು ವಿಧಿಸಿರುವ ಷರತ್ತುಗಳು, ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಸಾಕಷ್ಟು ವಿಳಂಬವಾಗಲಿದೆ. ಈ ಕ್ರಮದಲ್ಲಿ, ತ್ವರಿತ ವೈಯಕ್ತಿಕ ಸಾಲಗಳ ಜನಪ್ರಿಯತೆ ಹೆಚ್ಚುತ್ತಿದೆ. 

ಇದನ್ನೂ ಓದಿ : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಟಿಕೆಟ್ ದರದಲ್ಲಿ ಶೇ.25ರಷ್ಟು ಇಳಿಕೆ!

ಇದರ ಭಾಗವಾಗಿ, ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಮೂರು ವರ್ಷಗಳವರೆಗೆ ವೈಯಕ್ತಿಕ ಸಾಲವನ್ನು ನೀಡುವುದಾಗಿ ಘೋಷಿಸಿದೆ. ಆಕ್ಸಿಸ್ ಬ್ಯಾಂಕ್ ಕೇವಲ 30 ಸೆಕೆಂಡುಗಳಲ್ಲಿ 5 ಲಕ್ಷದವರೆಗಿನ ವೈಯಕ್ತಿಕ ಸಾಲಗಳನ್ನು ಅನುಮೋದಿಸುತ್ತದೆ. ಫ್ಲಿಪ್‌ಕಾರ್ಟ್ ಸುಮಾರು 45 ಕೋಟಿ ನೋಂದಾಯಿತ ಗ್ರಾಹಕರನ್ನು ಹೊಂದಿದೆ. ಈ 45 ಕೋಟಿಗಳಲ್ಲಿ ನೀವು ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸಿದರೆ, ನೀವು ಕೇವಲ 30 ಸೆಕೆಂಡುಗಳಲ್ಲಿ ಅನುಮೋದನೆ ಪಡೆಯುತ್ತೀರಿ. 

ಫ್ಲಿಪ್‌ಕಾರ್ಟ್ ಈಗಾಗಲೇ ಬೈ ನೌ ಪೇ ಲೇಟರ್, ಇಎಂಐ ಮತ್ತು ಕ್ರೆಡಿಟ್ ಕಾರ್ಡ್‌ನಂತಹ ಸೇವೆಗಳನ್ನು ನೀಡುತ್ತಿದೆ. ಇನ್ನು ವೈಯಕ್ತಿಕ ಸಾಲ ನೀಡುವ ಸೌಲಭ್ಯವೂ ಆರಂಭವಾಗಿದೆ. 5 ಲಕ್ಷದವರೆಗೆ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳಬಹುದು. ಸಾಲವನ್ನು 6 ತಿಂಗಳಿಂದ 36 ತಿಂಗಳೊಳಗೆ ಮರುಪಾವತಿ ಮಾಡಬಹುದು. ಸಾಲದ ಅರ್ಜಿಗಾಗಿ ಗ್ರಾಹಕರು ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಉದ್ಯೋಗದ ವಿವರಗಳನ್ನು ಒದಗಿಸಬೇಕಾಗುತ್ತದೆ. ಸಾಲ ಮಂಜೂರಾತಿಯು ನಿಮ್ಮ CIBIL ಸ್ಕೋರ್ ಮತ್ತು ಆದಾಯವನ್ನು ಅವಲಂಬಿಸಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News