PAN-Aadhaar Link: ಪ್ಯಾನ್-ಆಧಾರ್ ಲಿಂಕ್ ಗಡುವು ವಿಸ್ತರಣೆ, ಆದರೆ ಫ್ರೀ ಅಲ್ಲ

PAN-Aadhaar Link: ಆದಾಯ ತೆರಿಗೆ ಇಲಾಖೆಗೆ ನೀತಿಯನ್ನು ಸಿದ್ಧಪಡಿಸುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT), ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿದೆ.

Written by - Yashaswini V | Last Updated : Apr 1, 2022, 10:45 AM IST
  • ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿದೆ.
  • ಆದರೆ, ಉಚಿತ ಸೇವೆಯನ್ನು ರದ್ದುಗೊಳಿಸಲಾಗಿದೆ.
  • ಪ್ಯಾನ್-ಆಧಾರ್ ಲಿಂಕ್ ಮಾಡಲು ಯಾವ ತಿಂಗಳಲ್ಲಿ ಎಷ್ಟು ದಂಡ ಪಾವತಿಸಬೇಕಾಗುತ್ತದೆ!
PAN-Aadhaar Link: ಪ್ಯಾನ್-ಆಧಾರ್ ಲಿಂಕ್ ಗಡುವು ವಿಸ್ತರಣೆ, ಆದರೆ ಫ್ರೀ ಅಲ್ಲ title=
Aadhaar PAN Link

PAN-Aadhaar Link: ಆದಾಯ ತೆರಿಗೆ ಇಲಾಖೆಯು ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದೆ. ಆದರೆ, ಈಗ ಉಚಿತ ಸೇವೆ ಇರುವುದಿಲ್ಲ. ದಂಡವನ್ನು ಪಾವತಿಸಿ ನಂತರ ಆಧಾರ್-ಪ್ಯಾನ್ ಲಿಂಕ್ (PAN-Aadhaar Link) ಅನ್ನು ಪೂರ್ಣಗೊಳಿಸಬೇಕಾಗುತ್ತದೆ. 

ಆದಾಯ ತೆರಿಗೆ ಇಲಾಖೆಗೆ (Income Tax Department) ನೀತಿಯನ್ನು ಸಿದ್ಧಪಡಿಸುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT), ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಿದೆ. ಆದರೆ, ಉಚಿತ ಸೇವೆಯನ್ನು ರದ್ದುಗೊಳಿಸಲಾಗಿದೆ. ಅಂದರೆ ಇಲ್ಲಿಯವರೆಗೆ ಪ್ಯಾನ್- ಆಧಾರ್ ಅನ್ನು ಉಚಿತವಾಗಿ ಲಿಂಕ್ ಮಾಡಲಾಗುತ್ತಿತ್ತು. ಆದರೀಗ ಇದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ- Changes From 1 April 2022: ಒಮ್ಮೆಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 250 ರೂ. ಹೆಚ್ಚಳ!

ಯಾವ ತಿಂಗಳಲ್ಲಿ ಎಷ್ಟು ದಂಡ?
ಸರಳವಾಗಿ ಹೇಳುವುದಾದರೆ, ಈಗ ಏಪ್ರಿಲ್ 1, 2022 ರಿಂದ, ನೀವು ಪ್ಯಾನ್-ಆಧಾರ್ ಲಿಂಕ್‌ಗಾಗಿ (PAN-Aadhaar Link) ದಂಡವನ್ನು ಪಾವತಿಸಬೇಕಾಗುತ್ತದೆ. ನೀವು 500 ರೂ. ಮತ್ತು ನಂತರ ರೂ. 1,000 ದಂಡವನ್ನು ಪಾವತಿಸುವ ಮೂಲಕ ಪ್ಯಾನ್-ಆಧಾರ್ ಲಿಂಕ್ ಮಾಡಬಹುದು. ಮಾರ್ಚ್ 2023 ರ ನಂತರ, ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ವಿಷಯವಿದೆ. ಮೊದಲ ಮೂರು ತಿಂಗಳಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ. ಇದರರ್ಥ ನೀವು ಏಪ್ರಿಲ್, ಮೇ ಮತ್ತು ಜೂನ್‌ವರೆಗೆ ಆಧಾರ್ ಪ್ಯಾನ್ ಲಿಂಕ್ (Aadhaar - PAN Link) ಮಾಡಲು ರೂ. 500 ಪಾವತಿಸಬೇಕಾಗುತ್ತದೆ.  ಅದೇ ಸಮಯದಲ್ಲಿ, ಮುಂದಿನ 9 ತಿಂಗಳವರೆಗೆ ಅಂದರೆ ಜುಲೈ 2022 ರಿಂದ ಮಾರ್ಚ್ 2023 ರವರೆಗೆ ಆಧಾರ್-ಪ್ಯಾನ್  ಲಿಂಕ್ ಮಾಡುವ ಸೌಲಭ್ಯವನ್ನು ಪಡೆಯಲು ರೂ. 1000 ದಂಡವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ- ಗಗನ ಮುಖಿಯಾಯಿತು ಅಗತ್ಯ ವಸ್ತುಗಳ ಬೆಲೆ ; ಇಂದಿನಿಂದ ಔಷಧಿಗಳ ಬೆಲೆಯಲ್ಲಿಯೂ ಹೆಚ್ಚಳ

PAN ಅನ್ನು ಈಗ ರದ್ದುಗೊಳಿಸಲಾಗುವುದಿಲ್ಲ:
CBDT ಯ ಅಧಿಸೂಚನೆಯ ಪ್ರಕಾರ, ಹೊಸ ವ್ಯವಸ್ಥೆಯಲ್ಲಿ, ನಿಮ್ಮ ಪ್ಯಾನ್ ಮಾರ್ಚ್ 2023 ರವರೆಗೆ ಅಮಾನ್ಯವಾಗುವುದಿಲ್ಲ ಅಥವಾ ರದ್ದುಗೊಳ್ಳುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ಯಾವುದೇ ಹಣಕಾಸಿನ ವಹಿವಾಟಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಆದಾಯ ತೆರಿಗೆ ರಿಟರ್ನ್‌ನಿಂದ ಐಟಿಆರ್ ಮರುಪಾವತಿವರೆಗೆ, ಪ್ಯಾನ್ ಅನ್ನು ಬಳಸುವುದನ್ನು ಮುಂದುವರಿಸಲಾಗುತ್ತದೆ. ಪ್ರಸ್ತುತ ವ್ಯವಸ್ಥೆ ಪ್ರಕಾರ, ಮಾರ್ಚ್ 2023 ರ ನಂತರ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಡೇಟಾ ಪ್ರಕಾರ, ಜನವರಿ 24, 2022 ರವರೆಗೆ 43.34 ಕೋಟಿ ಪ್ಯಾನ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ. ಇದುವರೆಗೆ 131 ಕೋಟಿ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಪ್ಯಾನ್-ಆಧಾರ್ ಲಿಂಕ್ ಮಾಡುವುದರಿಂದ 'ನಕಲಿ' ಪ್ಯಾನ್ ಹಾವಳಿಯನ್ನು ತಡೆಗಟ್ಟಲು ಮತ್ತು ತೆರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News