OnePlus 7th Anniversary Sale: ಸ್ಮಾರ್ಟ್‌ಫೋನ್‌, ಟಿವಿಗಳ ಮೇಲೆ ಭಾರೀ ರಿಯಾಯಿತಿ

OnePlus 8T ಮತ್ತು OnePlus 8 ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಉತ್ತಮ ಅವಕಾಶವಿದೆ.

Last Updated : Dec 17, 2020, 02:30 PM IST
  • OnePlus 8T ಮತ್ತು OnePlus 8 ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಉತ್ತಮ ಅವಕಾಶ
  • ಸ್ಮಾರ್ಟ್‌ಫೋನ್‌ಗಳಲ್ಲದೆ, ಒನ್‌ಪ್ಲಸ್ ತನ್ನ ಪವರ್ ಬ್ಯಾಂಕ್, ಆಡಿಯೊ ಉತ್ಪನ್ನಗಳು ಮತ್ತು ಟಿವಿಗಳ ಮೇಲೂ ಉತ್ತಮ ರಿಯಾಯಿತಿ ನೀಡುತ್ತಿದೆ
OnePlus 7th Anniversary Sale: ಸ್ಮಾರ್ಟ್‌ಫೋನ್‌, ಟಿವಿಗಳ ಮೇಲೆ ಭಾರೀ ರಿಯಾಯಿತಿ title=

OnePlus 7th Anniversary Sale: OnePlus 8T ಮತ್ತು OnePlus 8 ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಉತ್ತಮ ಅವಕಾಶವಿದೆ. ಕಂಪನಿಯು '7 ನೇ ವಾರ್ಷಿಕೋತ್ಸವ ಮಾರಾಟ'ವನ್ನು ಘೋಷಿಸಿದೆ. ಅದರ ಅಡಿಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಯೊಂದಿಗೆ ಲಭ್ಯವಿದೆ. ಸ್ಮಾರ್ಟ್‌ಫೋನ್‌ಗಳಲ್ಲದೆ, ಒನ್‌ಪ್ಲಸ್ ತನ್ನ ಪವರ್ ಬ್ಯಾಂಕ್, ಆಡಿಯೊ ಉತ್ಪನ್ನಗಳು ಮತ್ತು ಟಿವಿಗಳ ಮೇಲೂ ಉತ್ತಮ ರಿಯಾಯಿತಿ ನೀಡುತ್ತಿದೆ. ಕಂಪನಿಯ 7 ನೇ ವಾರ್ಷಿಕೋತ್ಸವದ ಮಾರಾಟದಲ್ಲಿ ತ್ವರಿತ ರಿಯಾಯಿತಿಯೊಂದಿಗೆ ನೋ ಕಾಸ್ಟ್ ಇಎಂಐ ಮತ್ತು ಕ್ಯಾಶ್‌ಬ್ಯಾಕ್‌ನಂತಹ ಕೊಡುಗೆಗಳು ಲಭ್ಯವಿದೆ.  

Discounts on OnePlus 8T, OnePlus 8 series: 
ಒನ್‌ಪ್ಲಸ್‌ನ (OnePlus) 7 ನೇ ವಾರ್ಷಿಕೋತ್ಸವದ ಮಾರಾಟದ ಸಮಯದಲ್ಲಿ ಒನ್‌ಪ್ಲಸ್ 8 ಟಿ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು HDFC ಬ್ಯಾಂಕ್ ಕಾರ್ಡ್‌ನಲ್ಲಿ ಪಾವತಿಸುವ ಮೂಲಕ ಖರೀದಿಸುವುದರಿಂದ ನಿಮಗೆ 3 ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ. ಅದೇ ಸಮಯದಲ್ಲಿ ಒನ್‌ಪ್ಲಸ್‌ನ ಆಯ್ದ ಆಡಿಯೊ ಉತ್ಪನ್ನಗಳನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಡಿಸೆಂಬರ್ 17 ಮತ್ತು 18 ರಂದು 10% ರಿಯಾಯಿತಿಯೊಂದಿಗೆ ಖರೀದಿಸಬಹುದು.

Discounts offers on OnePlus TV :
ಒನ್‌ಪ್ಲಸ್ ತನ್ನ 7 ನೇ ವಾರ್ಷಿಕೋತ್ಸವದ ಮಾರಾಟದಲ್ಲಿ ಒನ್‌ಪ್ಲಸ್ ವೈ (OnePlus Y) ಸರಣಿ ಟಿವಿಯಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಮಾರಾಟದ ಸಮಯದಲ್ಲಿ  32 ಇಂಚು ಮತ್ತು 43 ಇಂಚಿನ ಒನ್‌ಪ್ಲಸ್ ವೈ ಸರಣಿ ಟಿವಿಗಳಲ್ಲಿ 1 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಿದೆ. ಇದಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಇಎಂಐ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟುಗಳಲ್ಲಿ 4 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಲಭ್ಯವಿರುತ್ತದೆ.

Flipkart Big Saving Days Sale: ಈ ಸ್ಮಾರ್ಟ್‌ಫೋನ್‌ಗಳ ಮೇಲೆ 10,000 ರೂ.ವರೆಗೆ ಡಿಸ್ಕೌಂಟ್

Discounts offers on OnePlus Store app :
ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್‌ನಿಂದ ಸ್ಮಾರ್ಟ್‌ಫೋನ್‌ಗಳನ್ನು (Smartphones) ಖರೀದಿಸುವ ಬಳಕೆದಾರರಿಗೆ ಕಂಪನಿಯು 500 ರೂಪಾಯಿಗಳ ಕಾಂಪ್ಲಿಮೆಂಟರಿ ಡಿಸ್ಕೌಂಟ್ ವೋಚರ್ ನೀಡುತ್ತಿದೆ. ಒನ್‌ಪ್ಲಸ್‌ನ ಪವರ್ ಬ್ಯಾಂಕ್ 777 ರೂ.ಗಳಿಗೆ ಲಭ್ಯವಿದೆ. ಇದಲ್ಲದೆ ಒನೆಪ್ಲಸ್ ಆಡಿಯೊ ಉತ್ಪನ್ನಗಳಿಗೆ 10 ಪ್ರತಿಶತ ರಿಯಾಯಿತಿ ಸಿಗುತ್ತದೆ.

Jio 5G: ಜಿಯೋ ಮೂಲಕ ನಾವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುತ್ತೇವೆ- ಮುಖೇಶ್ ಅಂಬಾನಿ

ಒನ್‌ಪ್ಲಸ್ ಆಫ್‌ಲೈನ್ ಮಳಿಗೆಗಳಲ್ಲಿ ರಿಯಾಯಿತಿಗಳು ನೀಡುತ್ತದೆ
ಇಂದು ಅಂದರೆ ಡಿಸೆಂಬರ್ 17 ರಂದು ಕಂಪನಿಯು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್ ತಲುಪಿದ ಮೊದಲ 10 ಗ್ರಾಹಕರಿಗೆ 3 ಸಾವಿರ ರೂಪಾಯಿಗಳ ಪರಿಕರಗಳ ಕೂಪನ್ ನೀಡಲಿದೆ. ಅಂತೆಯೇ 11 ರಿಂದ 30 ಸಂಖ್ಯೆಯ ಗ್ರಾಹಕರಿಗೆ 2 ಸಾವಿರ ರೂಪಾಯಿ ಮತ್ತು 31 ರಿಂದ 70 ಸಂಖ್ಯೆಯ ಗ್ರಾಹಕರಿಗೆ 500 ರೂಪಾಯಿಗಳ ಕಂಪ್ಲಿಮೆಂಟರಿ ಪರಿಕರಗಳ ಕೂಪನ್ ಸಿಗುತ್ತದೆ. ಈ ಕೂಪನ್‌ಗಳು ಒಂದು ತಿಂಗಳವರೆಗೆ ಮಾನ್ಯವಾಗಿರುತ್ತವೆ.
 

Trending News