ಚಿಟಿಕೆ ಹೊಡೆಯೋದ್ರಲ್ಲಿ ITR ಫೈಲ್ ಮಾಡಿ, IT ವಿಭಾಗದ 'Jhatpat Processing' ಬಿಡುಗಡೆ

ITR FILING FY 2019-20: ನೇರ ತೆರಿಗೆ ಪರಿಶೀಲನೆಯ ಅವಧಿಯನ್ನು ವಿಸ್ತರಿಸಲಾಗಿದೆ. ಇದನ್ನು ಸೆಪ್ಟೆಂಬರ್ 31 ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದ್ದು, TDS, TCS ದರಗಳಲ್ಲಿಯೂ ಕೂಡ ಶೇ.25ರಷ್ಟು ಇಳಿಕೆ ಮಾಡಲಾಗಿದೆ. ಇಲಾಖೆಯ ಈ ನಿರ್ಧಾರದಿಂದ TDS, TCS ಪಾವತಿಸುವವರಿಗೆ 50,000 ಕೋಟಿ.ರೂ.ಗಳ ನೆಮ್ಮದಿ ಸಿಗಲಿದೆ.

Written by - Nitin Tabib | Last Updated : Dec 22, 2020, 06:10 PM IST
  • ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ.
  • ಚಿಟಿಕೆ ಹೊಡೆಯೋದ್ರಲ್ಲಿ ITR ದಾಖಲಿಸಿ
  • ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಟಿಕೆ ಹೊಡೆಯೋದ್ರಲ್ಲಿ ITR ಫೈಲ್ ಮಾಡಿ, IT ವಿಭಾಗದ 'Jhatpat Processing' ಬಿಡುಗಡೆ title=
ITR FILING FY 2019-20 (File Photo)

ನವದೆಹಲಿ:ITR FILING FY 2019-20 - ಒಂದು ವೇಳೆ ನೀವೂ ಕೂಡ ನಿಮ್ಮ Income Tax Return ಪಾವತಿಸದೇ ಇದ್ದಲ್ಲಿ ಆದಷ್ಟು ಬೇಗ ಪಾವತಿಸಿ. ಏಕೆಂದರೆ ಇನ್ಮುಂದೆ ನೀವು ಕೇವಲ ಚಿಟಿಕೆ ಹೊಡೆಯೋದ್ರಲ್ಲಿ ITR ದಾಖಲಿಸಬಹುದು. ITR ದಾಖಲಿಸಲು ಆದಾಯ ತೆರಿಗೆ ಇಲಾಖೆ 'Jhatpat Processing' ಸೇವೆಯನ್ನು ಆರಂಭಿಸಿದೆ. ಹೀಗಾಗಿ ಇನ್ಮುಂದೆ ಕೆಲವೇ ಸೆಕೆಂಡ್ ಗಳಲ್ಲಿ ನೀವು ಈ ಮಹತ್ವದ ಕೆಲಸವನ್ನು ಪೂರ್ಣಗೊಳಿಸಬಹುದು.

ಇದನ್ನು ಓದಿ-ನೀವು ಇನ್ನೂ ಐಟಿ ರಿಟರ್ನ್ಸ ಸಲ್ಲಿಸಿಲ್ಲವೇ? ಹಾಗಿದ್ದಲ್ಲಿ ಇಲ್ಲಿದೆ ಮಹತ್ವದ ಮಾಹಿತಿ

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಆದಾಯ ತೆರಿಗೆ ಇಲಾಖೆ ITR-1 ಹಾಗೂ 4ಕಾಗಿ 'JHATPAT PROCESSING' ಸೇವೆ ಆರಂಭಿಸಿದೆ. ಈ ಸೇವೆಯ ಲಾಭ ಪಡೆದು ನೀವು AY-2020-21ರ ITR ದಾಖಲಿಸಬಹುದು. ಈ ಕುರಿತು ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆ ಡಿಸೆಂಬರ್ 20ರವರೆಗೆ ಸುಮಾರು 3.69 ಕೋಟಿ ಜನರು ತಮ್ಮ ಆದಾಯ ತೆರಿಗೆ ಮರುಪಾವತಿ (AY 2020-21) ದಾಖಲಿಸಿದ್ದಾರೆ ಎಂದಿದೆ.

ಡಿಸೆಂಬರ್ 31 ಕೊನೆಯ ದಿನಾಂಕ
ಈ ವರ್ಷ ಕೊರೊನಾ ವೈರಸ್ ಮಹಾಮಾರಿ ಹಾಗೂ ಲಾಕ್ ಡೌನ್  ಹಿನ್ನೆಲೆ ಆದಾಯ ತೆರಿಗೆ ಇಲಾಖೆ ITR ದಾಖಲಿಸುವ ಅಂತಿಮ ಗಡುವನ್ನು ಹಲವು ಬಾರಿ ವಿಸ್ತರಿಸಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈಗ ನೀವು ನಿಮ್ಮ ಆರ್ಥಿಕ ವರ್ಷ 2019-20 ರ ITR ಅನ್ನು ಡಿಸೆಂಬರ್ 31ರವರೆಗೆ ಪಾವತಿಸಬಹುದಾಗಿದೆ.

ಇದನ್ನು ಓದಿ-Income tax return ಸಲ್ಲಿಸುವಲ್ಲಿ ತಪ್ಪಾಗಿದ್ದರೆ ಅದನ್ನು ಕೇವಲ 5 ನಿಮಿಷಗಳಲ್ಲಿ ಸರಿಪಡಿಸಿ

ತೆರಿಗೆ ಪಾವತಿಯಲ್ಲಿ ನೆಮ್ಮದಿ
ಇತ್ತೀಚೆಗಷ್ಟೇ ಈ ಕುರಿತು ಘೋಷಣೆ ಮಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನೇರ ತೆರಿಗೆಯ ಅಸೆಸ್ಮೆಂಟ್ ಅವಧಿಯನ್ನು ವಿಸ್ತರಿಸಲಾಗುವುದು. ಇದೀಗ ಈ ಗಡುವನ್ನು ಸೆಪ್ಟೆಂಬರ್ 30 ರಿಂದ 31 ಡಿಸೆಂಬರ್ ವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ TDS, TCS ದರಗಳಲ್ಲಿಯೂ ಕೂಡ ಶೇ.25ರಷ್ಟು ಇಳಿಕೆ ಮಾಡಲಾಗಿದೆ ಎಂದಿದ್ದರು. ಇದರಿಂದ ತೆರಿಗೆ ಪಾವತಿದಾರರಿಗೆ 50,000 ಕೋಟಿ. ರೂ.ಗಳ ನೆಮ್ಮದಿ ಸಿಗಲಿದೆ. ಅದರಲ್ಲೂ ವಿಶೇಷವಾಗಿ ವೇತನ ಹೊಂದಿರದವರಿಗೆ ಇದರಿಂದ ಹೆಚ್ಚಿನ ಲಾಭ ಸಿಗಲಿದ್ದು, ಪ್ರೊಫೆಶನಲ್ ಜನರಿಗೆ ತಕ್ಷಣ ಮರುಪಾವತಿ ಸಿಗಲಿದೆ.

ಇದನ್ನು ಓದಿ-ಪ್ಯಾನ್ ಕಾರ್ಡ್ ಇಲ್ಲವೇ? ಚಿಂತೆಬಿಡಿ ಆಧಾರ್ ಸಂಖ್ಯೆಯೊಂದಿಗೆ ಐಟಿ ರಿಟರ್ನ್ ಸಲ್ಲಿಸಿ, ಪಡೆಯಿರಿ ಡಬಲ್ ಲಾಭ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News