ATM: ಇನ್ಮುಂದೆ 'ಕ್ಯೂಆರ್ ಕೋಡ್ ಸ್ಕ್ಯಾನ್' ಮಾಡಿ ATM ನಿಂದ ಹಣ ಪಡೆಯಬಹುದು! ಅದು ಹೇಗೆ ಇಲ್ಲಿದೆ! 

ಐಸಿಸಿಡಬ್ಲ್ಯೂ ಆಧಾರಿತ ಈ ವಿಶೇಷ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ.

Written by - Channabasava A Kashinakunti | Last Updated : Apr 2, 2021, 02:32 PM IST
  • ಡೆಬಿಟ್ ಕಾರ್ಡ್ ಇಲ್ಲದೆ ಯುಪಿಐ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಟಿಎಂನಿಂದ ಹಣ
  • ಇಂತಹ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡಲು ಎಟಿಎಂ ಕಂಪನಿಯಾದ ಎನ್‌ಸಿಆರ್ ಕಾರ್ಪೊರೇಷನ್
  • ಐಸಿಸಿಡಬ್ಲ್ಯೂ ಆಧಾರಿತ ಈ ವಿಶೇಷ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ.
ATM: ಇನ್ಮುಂದೆ 'ಕ್ಯೂಆರ್ ಕೋಡ್ ಸ್ಕ್ಯಾನ್' ಮಾಡಿ ATM ನಿಂದ ಹಣ ಪಡೆಯಬಹುದು! ಅದು ಹೇಗೆ ಇಲ್ಲಿದೆ!  title=

ಡೆಬಿಟ್ ಕಾರ್ಡ್ ಇಲ್ಲದೆ ಯುಪಿಐ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಟಿಎಂನಿಂದ ಹಣ ಪಡೆಯಬಹುದು. ಇಂತಹ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡಲು ಎಟಿಎಂ ಕಂಪನಿಯಾದ ಎನ್‌ಸಿಆರ್ ಕಾರ್ಪೊರೇಷನ್ ಇತ್ತೀಚೆಗೆ ಯುಪಿಐ ಪ್ಲಾಟ್‌ಫಾರ್ಮ್ ಆಧರಿಸಿ ಮೊದಲ ಇಂಟರ್‌ಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾ (ಐಸಿಸಿಡಬ್ಲ್ಯೂ)  ಬಿಡುಗಡೆ ಮಾಡಿದೆ. 

ಎಟಿಎಂಗಳನ್ನು ನವೀಕರಿಸಲಾಗುತ್ತಿದೆ: ಐಸಿಸಿಡಬ್ಲ್ಯೂ(Interoperable Cardless Cash Withdrawal) ಆಧಾರಿತ ಈ ವಿಶೇಷ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ. ಇಲ್ಲಿಯವರೆಗೆ, 1500 ಕ್ಕೂ ಹೆಚ್ಚು ಎಟಿಎಂಗಳನ್ನು ನವೀಕರಿಸಲಾಗಿದೆ. ಬರುವ ದಿನಗಳಲ್ಲಿ ತ್ವರಿತ ಗತಿಯಲ್ಲಿ ಎಟಿಎಂಗಳನ್ನು ನವೀಕರಿಸುವ ಕೆಲಸ ಮಾಡಲಾಗುತ್ತದೆ. 

LPG Booking : ಕೇವಲ 9 ರೂಪಾಯಿಗೆ ಸಿಲಿಂಡರ್ ಸಿಗಬೇಕಾದರೆ ಹೀಗೆ ಮಾಡಿ

ಈ ಹೊಸ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ: ಎಟಿಎಂ(ATM)ನಿಂದ ಹಣವನ್ನು ಹಿಂಪಡೆಯಲು, ಮೊದಲು, ನೀವು ಸ್ಮಾರ್ಟ್ಫೋನ್‌ನಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ ಅನ್ನು (ಜಿಪಿ, ಬಿಹೆಚ್ಐಎಂ, ಪೇಟಿಎಂ, ಫೋನ್‌ಪೆ, ಅಮೆಜಾನ್) ತೆರೆಯಬೇಕು. ಇದರ ನಂತರ, ಎಟಿಎಂ ಪರದೆಯಲ್ಲಿ ತೋರಿಸಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಸ್ಕ್ಯಾನಿಂಗ್ ಮಾಡಿದ ಮೇಲೆ, ನಿಮಗೆ ಬೇಕಾದಷ್ಟು ಹಣ ನಮೂದಿಸಬೇಕು. ನಂತರ ಪ್ರೊಸೀಡ್ ಬಟನ್ ಒತ್ತಬೇಕು. ಇದು ಆದ ಮೇಲೆ, ನಿಮ್ಮ 4 ಅಥವಾ 6 ಅಂಕಿಯ ಯುಪಿಐ ಪಿನ್ ಕೇಳಲಾಗುತ್ತದೆ, ಅದನ್ನ ನಮೂದಿಸಿದಬೇಕು ನಂತರ ನಿಮ್ಮ ಹಣ ಎಟಿಎಂನಿಂದ ಡ್ರಾ ಆಗುತ್ತದೆ. ಆರಂಭದಲ್ಲಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುವುದರಿಂದ ಪ್ರಸ್ತುತ ಕೇವಲ 5,000 ರೂಗಳನ್ನು ಮಾತ್ರ ಹಿಂಪಡೆಯಲು ಸಾಧ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಮಿತಿಯನ್ನ ಹೆಚ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; NPS ಬದಲು ಸಿಗಲಿದೆ ಹಳೆಯ Pension ಸ್ಕೀಮ್ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News