ಒಂದೇ ನಂಬರ್ ಮೂಲಕ ಮಾಡಿಸಬಹುದು ಇಡೀ ಕುಟುಂಬದ PVC ಆಧಾರ್ ಕಾರ್ಡ್

Aadhaar Card Update : ಆಧಾರ್ ಕಾರ್ಡ್ ಪ್ರತಿ ಹಂತದಲ್ಲೂ ಅಗತ್ಯವಿರುವ ದಾಖಲೆಯಾಗಿದೆ. ಇದಿಲ್ಲದೆ ಯಾವುದೇ ಸರ್ಕಾರದ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

Written by - Ranjitha R K | Last Updated : Jan 27, 2022, 03:14 PM IST
  • ಆಧಾರ್ ಕಾರ್ಡ್ ಪ್ರತಿ ಹಂತದಲ್ಲೂ ಅಗತ್ಯವಿರುವ ದಾಖಲೆಯಾಗಿದೆ.
  • ಕಾಲಕ್ಕೆ ತಕ್ಕಂತೆ ಆಧಾರ್ ಕಾರ್ಡ್ ಸಾಕಷ್ಟು ರೀತಿಯಲ್ಲಿ ಬದಲಾಗಿದೆ.
  • ಯುಐಡಿಎಐ ಈ ವರ್ಷ PVC ಆಧಾರ್ ಕಾರ್ಡ್‌ನೊಂದಿಗೆ ಬಂದಿದೆ.
ಒಂದೇ ನಂಬರ್ ಮೂಲಕ ಮಾಡಿಸಬಹುದು ಇಡೀ ಕುಟುಂಬದ PVC ಆಧಾರ್ ಕಾರ್ಡ್  title=
ಆಧಾರ್ ಕಾರ್ಡ್ ಪ್ರತಿ ಹಂತದಲ್ಲೂ ಅಗತ್ಯವಿರುವ ದಾಖಲೆಯಾಗಿದೆ. (file photo)

ನವದೆಹಲಿ :  Aadhaar Card Update : ಆಧಾರ್ ಕಾರ್ಡ್ ಪ್ರತಿ ಹಂತದಲ್ಲೂ ಅಗತ್ಯವಿರುವ ದಾಖಲೆಯಾಗಿದೆ. ಇದಿಲ್ಲದೆ ಯಾವುದೇ ಸರ್ಕಾರದ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಆಧಾರ್ ಕಾರ್ಡ್ ಸಾಕಷ್ಟು ರೀತಿಯಲ್ಲಿ ಬದಲಾಗಿದೆ. ಯುಐಡಿಎಐ (UIDAI) ಈ ವರ್ಷ PVC ಆಧಾರ್ ಕಾರ್ಡ್‌ನೊಂದಿಗೆ ಬಂದಿದೆ. ಇದನ್ನು ನಿರ್ವಹಿಸುವುದು ಸುಲಭ ಮತ್ತು ದೀರ್ಘಕಾಲದವರೆಗೆ ಇರುತ್ತದೆ. ಉತ್ತಮ ವಿಚಾರವೆಂದರೆ, ಒಂದೇ ಮೊಬೈಲ್ ಸಂಖ್ಯೆಯಿಂದ ಇಡೀ ಕುಟುಂಬಕ್ಕೆ PVC ಕಾರ್ಡ್‌ಗಳನ್ನು ಆರ್ಡರ್ ಮಾಡಬಹುದು.

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಯುಐಡಿಎಐ :
ಯುಐಡಿಎಐ (UIDAI) ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಿದೆ. ಆಧಾರ್‌ನೊಂದಿಗೆ (Aadhaar) ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಅಲ್ಲದೆ, ಪರಿಶೀಲನೆಗಾಗಿ OTP ಸ್ವೀಕರಿಸಲು ಯಾವುದೇ ಮೊಬೈಲ್ ಸಂಖ್ಯೆಯನ್ನು ಬಳಸಬಹುದು ಎಂದು UIDAI ಟ್ವೀಟ್ ಮಾಡಿದೆ. ಈ ಮೂಲಕ ಒಬ್ಬ ವ್ಯಕ್ತಿಯು ಇಡೀ ಕುಟುಂಬಕ್ಕೆ ಆಧಾರ್ PVC Card ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.

ಇದನ್ನೂ ಓದಿ :  Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಶೇ.6.6 ರಷ್ಟು ಬಡ್ಡಿ ಪಡೆಯಿರಿ - ವಿವರಗಳಿಗೆ ಇಲ್ಲಿ ತಿಳಿಯಿರಿ

50 ರೂಪಾಯಿಗಳಿಗೆ ಪಡೆಯಬಹುದು PVC ಆಧಾರ್ ಕಾರ್ಡ್ : 
ಈಗ ಒಂದೇ ಮೊಬೈಲ್ ಸಂಖ್ಯೆಯ ಮೂಲಕ ಇಡೀ ಮನೆಯ ಸದಸ್ಯರಿಗಾಗಿ PVC ಆಧಾರ್ ಕಾರ್ಡ್ ಅನ್ನು ಪಡೆಯಬಹುದು. PVC ಆಧಾರ್ ಕಾರ್ಡ್ ಅನ್ನು ನಿರ್ವಹಿಸುವುದು ತುಂಬಾ ಸುಲಭ. ಇದು ಪ್ಲಾಸ್ಟಿಕ್ ರೂಪದಲ್ಲಿರಲಿದೆ. ಇದು ನೋಡಲು ಎಟಿಎಂ ಡೆಬಿಟ್ (ATM Debit Card) ಕಾರ್ಡ್‌ನಂತೆಯೇ ಇರುತ್ತದೆ. ಅದನ್ನು ನಿಮ್ಮ ಪಾಕೆಟ್ ಅಥವಾ ವ್ಯಾಲೆಟ್‌ನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು. ಪಿವಿಸಿ ಆಧಾರ್ ಕಾರ್ಡ್ (PVC Aadhaar Card) ಮಾಡಿಸುವುದಾದರೆ ಇದಕ್ಕಾಗಿ, ಕೇವಲ 50 ರೂಪಾಯಿಗಳ ಸಣ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

PVC ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ?
1. PVC ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ, UIDAI ವೆಬ್‌ಸೈಟ್ uidai.gov.in ಅಥವಾ ರೆಸಿಡೆಂಟ್.uidai.gov.in ಗೆ ಭೇಟಿ ನೀಡಿ. 
2. ವೆಬ್‌ಸೈಟ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
3. ನಂತರ 50 ರೂ. ಶುಲ್ಕವನ್ನು ಪಾವತಿಸುವ ಮೂಲಕ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.  ಕೆಲವು ದಿನಗಳಲ್ಲಿ ಕಾರ್ಡ್ ನೋಂದಾಯಿತ ವಿಳಾಸವನ್ನು ತಲುಪುತ್ತದೆ

ಇದನ್ನೂ ಓದಿ : Eleksa CityBug: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕಾರ್ ಒಂದೇ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಚಲಿಸುತ್ತಂತೆ

ಮೊಬೈಲ್ ನೋಂದಣಿಯಾಗಿಲ್ಲದಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ ?
ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೂ, PVC ಆಧಾರ್ ಕಾರ್ಡ್‌ಗಾಗಿ ಆರ್ಡರ್ ಮಾಡಬಹುದು. 

1.   https://residentpvc.uidai.gov.in/order-pvcreprin ವೆಬ್ ಸೈಟ್ ಗೆ ಹೋಗಿ
2. ಆಧಾರ್ ಕಾರ್ಡ್ ಸಂಖ್ಯೆಯನ್ನು ನೋಂದಾಯಿಸಿ
3. ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ನನ್ನ ಮೊಬೈಲ್ ನೋಂದಣಿಯಾಗಿಲ್ಲದ ಕೆಳಗೆ ನೀಡಿರುವ ಆಯ್ಕೆಯನ್ನು ಕ್ಲಿಕ್ ಮಾಡಿ
4. ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ ಮತ್ತು my mobile is not registered ಎಂಬ ಆಯ್ಕೆಗಾಗಿ ಕೆಳಗೆ ನೀಡಲಾದ ಬಾಕ್ಸ್ ಅನ್ನು ಟಿಕ್ ಮಾಡಿ
5. ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ
6.  50 ರೂ. ಶುಲ್ಕವನ್ನು ಪಾವತಿಸಿ  ಅರ್ಜಿಯನ್ನು ಪೂರ್ಣಗೊಳಿಸಿ .

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಎರಡು ವಾರಗಳಲ್ಲಿ PVC ಆಧಾರ್ ಕಾರ್ಡ್ ಅನ್ನು  ನೋಂದಾಯಿತ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News