ಇನ್ನು ಮುಂದೆ ಈ ನಂಬರ್ ಇಲ್ಲ ಎಂದಾದರೆ ಎಟಿಎಂ ನಿಂದ ಹಣ ತೆಗೆಯುವುದು ಸಾಧ್ಯವೇ ಇಲ್ಲ .!

SBI ATM Withdrawl Rule Changed:ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೆ ನಗದು ಪಡೆಯುವುದು ಸಾಧ್ಯವಾಗುವುದಿಲ್ಲ. ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನುಪಡೆಯಬೇಕಾದರೆ ಅನುಸರಿಸಬೇಕಾದ ಹೊಸ ನಿಯಮವನ್ನು ಜಾರಿಗೆ ತಂದಿದೆ. 

Written by - Ranjitha R K | Last Updated : Oct 3, 2022, 03:22 PM IST
  • ಎಟಿಎಂಗಳಿಂದ ಹಣ ತೆಗೆಯುವ ನಿಯಮದಲ್ಲಿ ಬದಲಾವಣೆ
  • ಒಟಿಪಿ ಇಲ್ಲದೆ ನಗದು ಪಡೆಯುವುದು ಸಾಧ್ಯವಾಗುವುದಿಲ್ಲ.
  • ಈ ಕ್ರಮ ಜಾರಿಗೆ ತಂದಿರುವ ಉದ್ದೇಶ ಏನು ಗೊತ್ತಾ ?
ಇನ್ನು ಮುಂದೆ ಈ ನಂಬರ್ ಇಲ್ಲ ಎಂದಾದರೆ ಎಟಿಎಂ ನಿಂದ ಹಣ ತೆಗೆಯುವುದು ಸಾಧ್ಯವೇ ಇಲ್ಲ .!  title=
SBI ATM Withdrawl Rule Changed (file photo)

SBI ATM Withdrawl Rule Changed : ಬ್ಯಾಂಕ್ ಈಗ ಎಟಿಎಂಗಳಿಂದ ಹಣ ತೆಗೆಯುವ ನಿಯಮಗಳನ್ನು ಬದಲಾಯಿಸಿದೆ.  ಎಸ್‌ಬಿಐ ಎಟಿಎಂನಿಂದ ಹಣ ತೆಗೆಯಬೇಕಾದರೆ ವಿಶೇಷ ಸಂಖ್ಯೆಯನ್ನು  ನಮೂದಿಸಬೇಕಾಗುತ್ತದೆ. ಈ ಸಂಖ್ಯೆಯನ್ನು ನಮೂದಿಸದಿದ್ದಲ್ಲಿ ನಗದು ಎಟಿಎಂ ನಿಂದ ಹೊರ ಬರುವುದಿಲ್ಲ. ಎಟಿಎಂ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. 

ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೆ ನಗದು ಪಡೆಯುವುದು ಸಾಧ್ಯವಾಗುವುದಿಲ್ಲ. ನಗದು ಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಮೊಬೈಲ್ ಫೋನ್‌ನಲ್ಲಿ OTP ಪಡೆಯುತ್ತಾರೆ. ಆ ಸಂಖ್ಯೆಯನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ.  

ಇದನ್ನೂ ಓದಿ : ಎಟಿಎಂನಿಂದ ಹರಿದ ನೋಟುಗಳು ಬಂದರೆ ಚಿಂತೆ ಬೇಡ, ಕ್ಷಣ ಮಾತ್ರದಲ್ಲಿ ಬದಲಿಸುವುದು ಸಾಧ್ಯ

ಏನು ಹೇಳುತ್ತದೆ ನಿಯಮ ?:
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆಯಬೇಕಾದರೆ ಅನುಸರಿಸಬೇಕಾದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, SBI ಗ್ರಾಹಕರು, ತಮ್ಮ ಬ್ಯಾಂಕ್ ಖಾತೆಯಿಂದ 10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಿಡ್ರಾ ಮಾಡಬೇಕಾದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಒಟಿಪಿ ಮತ್ತು ಡೆಬಿಟ್ ಕಾರ್ಡ್ ಪಿನ್‌ ನಮೂದಿಸಬೇಕಾಗುತ್ತದೆ. ಒಟಿಪಿ ಇಲ್ಲದೆ ಹಣ ವಿಡ್ರಾ ಮಾಡುವುದು ಸಾಧ್ಯವಾಗುವುದಿಲ್ಲ. 

ಈ ಕ್ರಮ ಜಾರಿಗೆ ತಂದಿರುವ ಉದ್ದೇಶ : 
ಗ್ರಾಹಕರನ್ನು ವಂಚನೆಯಿಂದ ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಬ್ಯಾಂಕ್ ತಿಳಿಸಿದೆ. ಎಸ್‌ಬಿಐ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಇದು ಭಾರತದಲ್ಲಿ 71,705 BC ಔಟ್‌ಲೆಟ್‌ಗಳೊಂದಿಗೆ 22,224 ಶಾಖೆಗಳು ಮತ್ತು 63,906 ATM/CDMಗಳ ದೊಡ್ಡ ನೆಟ್ ವರ್ಕ್ ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಸರಿಸುಮಾರು 91 ಮಿಲಿಯನ್ ಮತ್ತು 20 ಮಿಲಿಯನ್ ನಷ್ಟಿದೆ. 

ಇದನ್ನೂ ಓದಿ : Driving License : ವಾಹನ ಸವಾರರಿಗೆ ಸಿಹಿ ಸುದ್ದಿ : ಇನ್ನು 7 ದಿನದಲ್ಲಿ ಮನೆಗೆ ಬರಲಿದೆ 'DL'

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News