ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ ಆಸ್ತಿ ಪತ್ರಗಳಿಗೆ ಸಂಬಂಧಿಸಿದ ಹೊಸ ನಿಯಮ ! ಆದೇಶ ಜಾರಿಗೊಳಿಸಿದ ಆರ್‌ಬಿಐ

Reserve Bank of India New Rule:ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಹೊರಡಿಸಿದೆ. ಆರ್‌ಬಿಐಗೆ ಇಂತಹ ಹಲವು ದೂರುಗಳು ಬಂದಿದ್ದು, ಸಾಲ ಮರುಪಾವತಿಯ ನಂತರ ಗ್ರಾಹಕರು ಆಸ್ತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಸುತ್ತಾಡಬೇಕಾಗುತ್ತದೆ. 

Written by - Ranjitha R K | Last Updated : Oct 16, 2023, 02:16 PM IST
  • ಆಸ್ತಿ ದಾಖಲೆಗಳು ಕಾಣೆಯಾದ ಪ್ರಕರಣಗಳು
  • 30 ದಿನಗಳಲ್ಲಿ ದಾಖಲೆಗಳನ್ನು ಹಿಂತಿರುಗಿಸಬೇಕು
  • ಆರ್‌ಬಿಐ ಹೊರಡಿಸಿದೆ ಆದೇಶ
ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ ಆಸ್ತಿ ಪತ್ರಗಳಿಗೆ ಸಂಬಂಧಿಸಿದ ಹೊಸ ನಿಯಮ ! ಆದೇಶ ಜಾರಿಗೊಳಿಸಿದ ಆರ್‌ಬಿಐ  title=

Reserve Bank of India New Rule : ನೀವು ಯಾವುದೇ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯಿಂದ ಗೃಹ ಸಾಲವನ್ನು ತೆಗೆದುಕೊಂಡಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಆರ್‌ಬಿಐ ಆದೇಶದ ಅನ್ವಯ ಆಸ್ತಿ ಸಾಲಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಈ ನಿಯಮದ ಪ್ರಕಾರ, ನೀವು ಆಸ್ತಿಯ ಮೇಲೆ ಯಾವುದೇ ರೀತಿಯ ಸಾಲವನ್ನು ತೆಗೆದುಕೊಂಡಿದ್ದರೆ, ಸಂಪೂರ್ಣ ಮರುಪಾವತಿಯ (Loan Repayment)30 ದಿನಗಳಲ್ಲಿ ಬ್ಯಾಂಕ್ ಆಸ್ತಿ ದಾಖಲೆಗಳನ್ನು ಗ್ರಾಹಕರಿಗೆ ಹಿಂತಿರುಗಿಸಬೇಕಾಗುತ್ತದೆ. ಒಂದು ವೇಳೆ ಬ್ಯಾಂಕ್ ಹೀಗೆ ಮಾಡದಿದ್ದರೆ, ಗ್ರಾಹಕರಿಗೆ ದಿನಕ್ಕೆ 5,000 ರೂ ದಂಡವನ್ನು ಪಾವತಿಸಬೇಕಾಗುತ್ತದೆ.

ಆಸ್ತಿ ದಾಖಲೆಗಳು ಕಾಣೆಯಾದ ಪ್ರಕರಣಗಳು : 
ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಹೊರಡಿಸಿದೆ. ಆರ್‌ಬಿಐಗೆ ಇಂತಹ ಹಲವು ದೂರುಗಳು ಬಂದಿದ್ದು, ಸಾಲ ಮರುಪಾವತಿಯ ನಂತರ ಗ್ರಾಹಕರು ಆಸ್ತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಸುತ್ತಾಡಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಆಸ್ತಿ ದಾಖಲೆಗಳು ನಾಪತ್ತೆಯಾಗಿವೆ ಎಂದೂ ಬ್ಯಾಂಕ್ ಹೇಳಿದೆ. ಬ್ಯಾಂಕ್‌ನ ಇಂತಹ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ರಿಸರ್ವ್ ಬ್ಯಾಂಕ್ ಈ ಆದೇಶ ಹೊರಡಿಸಿದೆ. 

ಇದನ್ನೂ ಓದಿ :  ನವರಾತ್ರಿಯಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರದ ಗಿಫ್ಟ್ ! ವೇತನದಲ್ಲಿ 27 ಸಾವಿರ ರೂ. ಹೆಚ್ಚಳ

30 ದಿನಗಳಲ್ಲಿ ದಾಖಲೆಗಳನ್ನು ಹಿಂತಿರುಗಿಸಬೇಕು : 
ಗ್ರಾಹಕರು ಸಾಲವನ್ನು ಮರುಪಾವತಿ ಮಾಡಿದ ನಂತರ ಮೂಲ ದಾಖಲೆಗಳನ್ನು ಬ್ಯಾಂಕ್  ಹಿಂತಿರುಗಿಸಬೇಕು. ಆದರೆ, ಬ್ಯಾಂಕ್‌ಗಳ ನಿರ್ಲಕ್ಷ್ಯ ಪ್ರಕರಣಗಳು ಬೆಳಕಿಗೆ ಬಂದ ನಂತರ, ಆರ್‌ಬಿಐ ಈ ನಿಯಮವನ್ನು ಹೊರಡಿಸಿದೆ. ಈ ನಿಯಮ ಜಾರಿಯಾದ ನಂತರ ಗ್ರಾಹಕರಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಗ್ರಾಹಕರು ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ 30 ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆರ್ ‌ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ. 30 ದಿನಗಳ ನಂತರ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಗ್ರಾಹಕರಿಗೆ ಬ್ಯಾಂಕ್ ದಂಡವನ್ನು ಪಾವತಿಸಬೇಕಾಗುತ್ತದೆ.

ದಾಖಲೆಗಳನ್ನು ಹಿಂದಿರುಗಿಸುವಲ್ಲಿ ವಿಳಂಬವಾದಲ್ಲಿ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗೆ ದಿನಕ್ಕೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ದಂಡದ ಮೊತ್ತವನ್ನು ಬ್ಯಾಂಕ್ ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ಪಾವತಿಸಬೇಕಾಗುತ್ತದೆ. ಸಾಲಗಾರನ ಆಸ್ತಿ ದಾಖಲೆಗಳು ಕಳೆದುಹೋದರೆ, ದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ಗ್ರಾಹಕರಿಗೆ ಬ್ಯಾಂಕ್ ಸಹಾಯ ಮಾಡಬೇಕಾಗುತ್ತದೆ ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ :  Whirlpool 6 kg ವಾಷಿಂಗ್‌ ಮಷಿನ್‌ ಈಗ ಕೇವಲ 1,240 ರೂಪಾಯಿಗೆ ಲಭ್ಯ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News