4kWh ಬ್ಯಾಟರಿಯೊಂದಿಗೆ ಹೊಸ Ola S1X ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ

Ola S1X 4kWh ಬ್ಯಾಟರಿ ಸಾಮರ್ಥ್ಯ: ಓಲಾ ಎಲೆಕ್ಟ್ರಿಕ್ 4kWh ಬ್ಯಾಟರಿ ಪ್ಯಾಕ್‌ನೊಂದಿಗೆ S1X ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು 190 ಕಿಮೀ ರೈಡಿಂಗ್ ಶ್ರೇಣಿಯನ್ನು ನೀಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

Written by - Puttaraj K Alur | Last Updated : Feb 2, 2024, 08:24 PM IST
  • Ola Electric 4kWh ಬ್ಯಾಟರಿ ಸಾಮರ್ಥ್ಯವಿರುವ S1X ಸ್ಕೂಟರ್ ಬಿಡುಗಡೆ ಮಾಡಿದೆ
  • ಇದು 190 ಕಿಮೀ ರೈಡಿಂಗ್ ಶ್ರೇಣಿಯನ್ನು ನೀಡಬಹುದು ಎಂದು ಕಂಪನಿ ಹೇಳಿಕೊಂಡಿದೆ
  • ಹೊಸ S1X 4kWh ರೂಪಾಂತರದ ಬೆಲೆಯನ್ನು 1,09,999 ರೂ.ಗೆ ನಿಗದಿಪಡಿಸಲಾಗಿದೆ
4kWh ಬ್ಯಾಟರಿಯೊಂದಿಗೆ ಹೊಸ Ola S1X ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ title=
ಹೊಸ Ola S1X ಬಿಡುಗಡೆ

Ola S1X 4kWh ಬೆಲೆ ಮತ್ತು ವೈಶಿಷ್ಟ್ಯಗಳು: Ola Electric 4kWh ಬ್ಯಾಟರಿ ಪ್ಯಾಕ್‌ನೊಂದಿಗೆ S1X ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು 190 ಕಿಮೀ ರೈಡಿಂಗ್ ಶ್ರೇಣಿಯನ್ನು ನೀಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಹೊಸ S1X 4kWh ರೂಪಾಂತರದ ಬೆಲೆಯನ್ನು 1,09,999 ರೂ.ಗೆ ನಿಗದಿಪಡಿಸಲಾಗಿದೆ. ಏಪ್ರಿಲ್ ತಿಂಗಳಿನಿಂದ ಈ ಬೈಕ್‌ಅನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ. 

ಹೊಸ Ola S1Xನ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಇದು 0-40 kmph ನಿಂದ 3.3 ಸೆಕೆಂಡುಗಳಲ್ಲಿ ವೇಗವನ್ನು ಪಡೆದುಕೊಳ್ಳುತ್ತದೆ. S1X ರೆಡ್ ವೆಲಾಸಿಟಿ, ಮಿಡ್ನೈಟ್, ವೋಗ್, ಸ್ಟೆಲ್ಲಾರ್, ಫಂಕ್, ಪಿಂಗಾಣಿ ಬಿಳಿ ಮತ್ತು ಲಿಕ್ವಿಡ್ ಸಿಲ್ವರ್ ಒಟ್ಟು 7 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದು 4.3 ಇಂಚಿನ ಸೆಗ್ಮೆಂಟೆಡ್ ಡಿಸ್ಪ್ಲೇ ಮತ್ತು ಫಿಸಿಕಲ್ ಕೀ ಅನ್ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. 

ಇದನ್ನೂ ಓದಿ: ಬಜೆಟ್ 2024: ಲಕ್ಷದ್ವೀಪದ ಮೇಲೆ ಕೇಂದ್ರದ ವಿಶೇಷ ಗಮನ, ಪ್ರವಾಸೋದ್ಯಮ ಉತ್ತೇಜಿಸುವ ಮೂಲಕ ಉದ್ಯೋಗ ಹೆಚ್ಚಿಸಲು ಒತ್ತು

ಇದರಲ್ಲಿ ಸ್ಮಾರ್ಟ್ ಕನೆಕ್ಟಿವಿಟಿ ಲಭ್ಯವಿಲ್ಲ, ಆದರೆ S1Xನ 3kWh ರೂಪಾಂತರವು 5 ಇಂಚಿನ ಸೆಗ್ಮೆಂಟೆಡ್ ಡಿಸ್ಪ್ಲೇ, ಕೀಲೆಸ್ ಅನ್‌ಲಾಕ್ ಮತ್ತು ಸ್ಮಾರ್ಟ್ ಸಂಪರ್ಕವನ್ನು ಹೊಂದಿದೆ. ಇವುಗಳ ಹೊರತಾಗಿ S1X ಸ್ಕೂಟರ್ ಸರಣಿಯು 2kWh ರೂಪಾಂತರದೊಂದಿಗೆ ಬರುತ್ತದೆ. ಇದು ಈ ಸರಣಿಯಲ್ಲಿ ಅಗ್ಗದ ಮಾದರಿಯಾಗಿದ್ದು, ಕಡಿಮೆ ಶ್ರೇಣಿಯನ್ನು (143 km) ನೀಡುತ್ತದೆ.

ಓಲಾ ಎಲೆಕ್ಟ್ರಿಕ್ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಗಾಗಿ 8 ವರ್ಷಗಳವರೆಗೆ ಅಥವಾ 80,000 ಕಿಮೀಗಳವರೆಗೆ ವಿಸ್ತೃತ ಬ್ಯಾಟರಿ ಖಾತರಿಯನ್ನು ಘೋಷಿಸಿದೆ. ಹೊಸ S1X ಬಿಡುಗಡೆ ಮತ್ತು 8 ವರ್ಷಗಳ ವಾರಂಟಿಯ ಘೋಷಣೆಯ ಹೊರತಾಗಿ, Ola ಹೆಚ್ಚುವರಿ ವಾರಂಟಿ ಪ್ಯಾಕೇಜ್ ಅನ್ನು ಸಹ ಪರಿಚಯಿಸಿದೆ. ಇದು 1,25,000 ಕಿ.ಮೀ.ವರೆಗೂ ಅನ್ವಯಿಸುತ್ತದೆ. ಆದಾಗ್ಯೂ ಇದು ಪೇಮೆಂಟ್ ಆಯ್ಕೆಯಾಗಿದೆ ಅಂದರೆ ಹಣ ಕೊಟ್ಟು ನೀವು ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಎನ್‌ಎಚ್‌ಎಐ ಫಾಸ್ಟ್‌ಟ್ಯಾಗ್ ಕೆವೈಸಿ ಗಡುವು ಇನ್ನೊಂದು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆ

S1X 4kWh ಬ್ಯಾಟರಿ ಪ್ಯಾಕ್ ಸ್ಕೂಟರ್‌ನ ಬಿಡುಗಡೆಯೊಂದಿಗೆ, Ola ತನ್ನ ಚಾರ್ಜಿಂಗ್ ಮೂಲಸೌಕರ್ಯವನ್ನು ಈ ತ್ರೈಮಾಸಿಕದ ಅಂತ್ಯದ ವೇಳೆಗೆ ಪ್ರಸ್ತುತ 1,000 ಯುನಿಟ್‌ಗಳಿಂದ 10,000 ಯೂನಿಟ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿದೆ. ಇದು ವಸತಿ ಪ್ರದೇಶಗಳು ಮತ್ತು ಹೆದ್ದಾರಿಗಳನ್ನು ಒಳಗೊಂಡಿದೆ. ಏತನ್ಮಧ್ಯೆ ಕಂಪನಿಯು ತನ್ನ ಸೇವಾ ಜಾಲವನ್ನು ಏಪ್ರಿಲ್ ವೇಳೆಗೆ 600 ಕೇಂದ್ರಗಳಿಗೆ ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News