Pulsar NS160 ಬೈಕ್ ಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಹೀರೋ ಕಂಪನಿಯ ಈ ಹೊಸ ಬೈಕ್

2022 Hero Xtreme 160R: ಹೀರೋ ಮೋಟೋಕಾರ್ಪ್ ತನ್ನ ಪ್ರಿಮಿಯಂ 160ಸಿಸಿ ಬೈಕ್ ಆಗಿರುವ Xtreme 160R ಬೈಕ್ ನ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 2022ನೇ ಸಾಲಿನ ಈ ಹೊಚ್ಚ ಹೊಸ Xtreme 160R ಬೈಕ್ ಅನ್ನು ಭಾರತದಲ್ಲಿ 1.17 ಲಕ್ಷ ರೂ. ಆರಂಭಿಕ ಎಕ್ಸ್ ಷೋರೂಮ್ ಬೆಲೆಗೆ ಬಿಡುಗಡೆ ಮಾಡಲಾಗಿದೆ.  

Written by - Nitin Tabib | Last Updated : Jul 29, 2022, 06:21 PM IST
  • Hero MotoCorp ತನ್ನ ಪ್ರೀಮಿಯಂ 160cc Xtreme 160R ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
  • ಹೊಸ 2022 Hero Xtreme 160R ಅನ್ನು ಭಾರತದಲ್ಲಿ 1.17 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
  • ನೋಡಲು ಈ ಮೋಟಾರ್ಸೈಕಲ್ ಮೊದಲಿನಂತೆ ಆವೃತ್ತಿಯಂತೆಯೇ ಕಾಣುತ್ತದೆ.... ಆದರೆ?
Pulsar NS160 ಬೈಕ್ ಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಹೀರೋ ಕಂಪನಿಯ ಈ ಹೊಸ ಬೈಕ್ title=
Hero Motocorp New Bike Launched

2022 Hero Xtreme 160R Price & Specifications: Hero MotoCorp ತನ್ನ ಪ್ರೀಮಿಯಂ 160cc Xtreme 160R ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ 2022 Hero Xtreme 160R ಅನ್ನು ಭಾರತದಲ್ಲಿ 1.17 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ನೋಡಲು ಈ ಮೋಟಾರ್ಸೈಕಲ್ ಮೊದಲಿನಂತೆ ಆವೃತ್ತಿಯಂತೆಯೇ ಕಾಣುತ್ತದೆ. ಆದರೂ ಕೂಡ ಈ ಹಿಂದಿನದಕ್ಕೆ ಹೋಲಿಸಿದರೆ ಇದರಲ್ಲಿ ಕೆಲ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಕಂಪನಿಯು Xtreme 160R ನಲ್ಲಿ ಹಿಂದಿನ ಸೀಟಿಗೆ ರೀ ಶೇಪ್ಡ್ ಸೀಟ್ ಮತ್ತು ಎಕ್ಸ್ಟರ್ನಲ್ ಗ್ರಾಬ್ ರೈಲ್ ಅನ್ನು ನೀಡಿದೆ. ಮೋಟಾರ್‌ಸೈಕಲ್‌ನ ಈ ಹಿಂದಿನ ಆವೃತ್ತಿಯು ಭೌತಿಕ ಗ್ರ್ಯಾಬ್ ರೈಲಿನ ಬದಲಿಗೆ ಸೀಟಿನ ಕೆಳಭಾಗದಲ್ಲಿ ಹಿಡಿಯಲು ಸ್ಥಳವನ್ನು ಹೊಂದಿತ್ತು, ಅದು ಹೆಚ್ಚು ಪ್ರಾಯೋಗಿಕವಾಗಿರಲಿಲ್ಲ. 160cc ಪ್ರೀಮಿಯಂ ಮೋಟಾರ್‌ಸೈಕಲ್ ನಲ್ಲಿ ಇನ್ವರ್ಟೆಡ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ, ಹೀಗಾಗಿ ಅದು ಇನ್ಮುಂದೆ ಗೇರ್ ಪೋಷಿಶನ್ ಇಂಡಿಕೇಟರ್ ಅನ್ನು ಸಹ ತೋರಿಸಲಿದೆ.

ಇದನ್ನೂ ಓದಿ-Stock Market Update: ಭಾರಿ ಚೇತರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಷೇರು ಮಾರುಕಟ್ಟೆ

ಹೊಸ Hero Xtreme 160R ನ ಎಂಜಿನ್ ಮತ್ತು ವೈಶಿಷ್ಟ್ಯಗಳು
ಹೊಸ Hero Xtreme 160R ನಲ್ಲಿ 163cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ BS6 ನಿಯಂತ್ರಿಸಲ್ಪಡುವ ಇಂಜಿನ್ ನೀಡಲಾಗಿದೆ, ಇದು 8,500 RPM ನಲ್ಲಿ 15 bhp ಪವರ್ ಮತ್ತು 6500 RPM ನಲ್ಲಿ 14 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 17-ಇಂಚಿನ ಚಕ್ರಗಳನ್ನು ಹೊಂದಿದೆ, ಚಕ್ರಗಳು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬರುತ್ತದೆ. ಇದರ ಮುಂಭಾಗದ ಟೈರ್ 100/80-17 ಆಗಿದ್ದರೆ ಹಿಂದಿನ ಟೈರ್ 130/70-R17 (ರೇಡಿಯಲ್) ಟೈರ್ ಆಗಿದೆ. ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ, ಎಕ್ಸ್‌ಟ್ರೀಮ್ 160R ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 7-ಹಂತದ ಅಡ್ಜಸ್ಟೇಬಲ್  ಗ್ಯಾಸ್-ಚಾರ್ಜ್ಡ್ ಮೊನೊ-ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಇದೇ ವೇಳೆ, ಬ್ರೇಕಿಂಗ್ಗಾಗಿ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ​​ನೀಡಲಾಗಿದೆ. ಇದು ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ-ITR Filing Update: ಐಟಿಆರ್ ದಾಖಲಿಸುವ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ವಿತ್ತ ಸಚಿವಾಲಯದ ಹೊಸ ಆದೇಶ

ಹೊಸ Hero Xtreme 160R ಬೆಲೆ ಮತ್ತು ಪೈಪೋಟಿ
2022 Hero Xtreme 160R ಪ್ರಸ್ತುತ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಮತ್ತು 1.17 ಲಕ್ಷದಿಂದ 1.22 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಇದು TVS Apache RTR 160 4V, Suzuki Gixxer 155, Bajaj Pulsar NS160 ಮತ್ತು Yamaha FZ-S FI ನಂತಹ ಬೈಕ್‌ಗಳೊಂದಿಗೆ ಪೈಪೋಟಿ ನಡೆಸಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News