Natural Gas: ಹಬ್ಬದ ಋತುವಿನಲ್ಲಿ ಶ್ರೀಸಾಮಾನ್ಯರಿಗೆ ಬಿಗ್ ಶಾಕ್, ನೈಸರ್ಗಿಕ ಅನಿಲ ಬೆಲೆಯಲ್ಲಿ ಭಾರಿ ಹೆಚ್ಚಳ!

Natural Gas Price Hiked: ನೈಸರ್ಗಿಕ ಅನಿಲದ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಅಂದರೆ ಶೇ.40 ರಷ್ಟು ಏರಿಕೆಯಾಗಿದೆ. ಹೀಗಿರುವಾಗ ನಾಳೆಯಿಂದ ಎಲ್‌ಪಿಜಿ ಬೆಲೆಯೂ ಹೆಚ್ಚಾಗಬಹುದು ಎಂದು ಊಹಿಸಲಾಗಿದೆ.  

Written by - Nitin Tabib | Last Updated : Sep 30, 2022, 08:59 PM IST
  • ಈ ದರ ಏರಿಕೆಯ ನಂತರ, ಅಕ್ಟೋಬರ್ ತಿಂಗಳಿನಿಂದ ಎಲ್ಪಿಜಿ ಬೆಲೆಗಳು ಹೆಚ್ಚಾಗಬಹುದು ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.
  • ಅಕ್ಟೋಬರ್ 1 ರಂದು ನಡೆಯಲಿರುವ ಬೆಲೆಗಳ ಪರಿಷ್ಕರಣೆಯ ವೇಳೆ ನೈಸರ್ಗಿಕ ಅನಿಲದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
Natural Gas: ಹಬ್ಬದ ಋತುವಿನಲ್ಲಿ ಶ್ರೀಸಾಮಾನ್ಯರಿಗೆ ಬಿಗ್ ಶಾಕ್, ನೈಸರ್ಗಿಕ ಅನಿಲ ಬೆಲೆಯಲ್ಲಿ ಭಾರಿ ಹೆಚ್ಚಳ! title=
Natural Gas Price Hike

Natural Gas Price Hiked: ಹಬ್ಬ ಹರಿದಿನಗಳಲ್ಲಿ ಶ್ರೀಸಾಮಾನ್ಯರು ಭಾರಿ ಶಾಕ್ ಅನುಭವಿಸುವಂತಾಗಿದೆ. ನೈಸರ್ಗಿಕ ಅನಿಲದ ಬೆಲೆಯು ದಾಖಲೆಯ ಗರಿಷ್ಠ ಮಟ್ಟ ಅಂದರೆ ಶೇ.40 ರಷ್ಟು ಏರಿಕೆಯಾಗಿದೆ. ಇದರೊಂದಿಗೆ ತಿಂಗಳ ಮೊದಲನೇ ತಾರೀಖಿನಂದು ನಡೆಯಲಿರುವ ಎಲ್ ಪಿಜಿ ದರ ಪರಿಷ್ಕರಣೆಯ ವೇಳೆಯೂ ಕೂಡ ಎಲ್ ಪಿಜಿ ಬೆಲೆಯೂ ಏರಿಕೆಯಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಇದೀಗ ಗ್ರಾಹಕರು ಸಿಎನ್‌ಜಿ-ಪಿಎನ್‌ಜಿಗೆ ಕೂಡ ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗಲಿದೆ.

ಇದನ್ನೂ ಓದಿ-Bank Holidays October 2022 : ಬ್ಯಾಂಕ್ ಗ್ರಾಹಕರೆ ಗಮನಿಸಿ : ಅಕ್ಟೋಬರ್‌ ತಿಂಗಳಲ್ಲಿ 21 ದಿನ ಬ್ಯಾಂಕ್ ಬಂದ್!

CNG-PNG ಬೆಲೆಗಳೂ ಕೂಡ ಹೆಚ್ಚಾಗಲಿವೆ!
ಈ ದರ ಏರಿಕೆಯ ನಂತರ, ಅಕ್ಟೋಬರ್ ತಿಂಗಳಿನಿಂದ ಎಲ್ಪಿಜಿ ಬೆಲೆಗಳು ಹೆಚ್ಚಾಗಬಹುದು ಎಂಬುದನ್ನು ನಿರೀಕ್ಷಿಸಲಾಗುತ್ತಿದೆ. ಅಕ್ಟೋಬರ್ 1 ರಂದು ನಡೆಯಲಿರುವ ಬೆಲೆಗಳ ಪರಿಷ್ಕರಣೆಯ ವೇಳೆ ನೈಸರ್ಗಿಕ ಅನಿಲದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಈ ಸರ್ಕಾರವು ಬೆಲೆಯನ್ನು ನಿಗದಿಪಡಿಸುತ್ತದೆ. ಈ ದರ ಪರಿಷ್ಕರಣೆಯನ್ನು ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ನಡೆಸಲಾಗುತ್ತದೆ. ಈಗ ನೈಸರ್ಗಿಕ ಅನಿಲದ ಬೆಲೆ ಏರಿಕೆಯಿಂದ ಸಿಎನ್‌ಜಿ ಬೆಲೆಕೂಡ ಹೆಚ್ಚಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ-Fuel Price : ಕಚ್ಚಾ ತೈಲ ಬೆಲೆ ಹೆಚ್ಚಳ : ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಸಂಭವ!

ಕಚ್ಚಾ ತೈಲ ಬೆಲೆಯೂ ಏರಿಕೆಯಾಗಿದೆ
ಇದಲ್ಲದೇ ಶುಕ್ರವಾರ ಕಚ್ಚಾ ತೈಲ ಬೆಲೆ ಕೂಡ ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 27 ರೂಪಾಯಿ ಏರಿಕೆಯಾಗಿ 6,727 ರೂಪಾಯಿಗಳಿಗೆ ತಲುಪಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಅಕ್ಟೋಬರ್ ತಿಂಗಳಿನಲ್ಲಿ ವಿತರಣೆಗಾಗಿ ಕಚ್ಚಾ ತೈಲ ಒಪ್ಪಂದಗಳ ಬೆಲೆ ಏರಿಕೆ ದಾಖಲಿಸಿವೆ. ಅಕ್ಟೋಬರ್‌ನಲ್ಲಿ ವಿತರಣೆಯ ಒಪ್ಪಂದ 27 ರೂ. ಅಥವಾ ಶೇ, 0.4 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 6,727 ರೂ. ತಲುಪಿದೆ. ಇದರ ಅಡಿ 6,085 ಲಾಟ್‌ಗಳ ವ್ಯವಹಾರ ನಡೆದಿದೆ ಎಂಬುದು ಇಲ್ಲಿ ಉಲ್ಲೇಖನೀಯ. ವ್ಯಾಪಾರಿಗಳ ಮೂಲಕ ತಮ್ಮ ವ್ಯಾಪಾರ ಹೆಚ್ಚಳ ಕಚ್ಚಾ ತೈಲ ವಾಯಿದಾ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News