ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದಲ್ಲಿ ಸಿಗುವುದಿಲ್ಲ ಸರ್ಕಾರಿ ಯೋಜನಗೆಳ ಲಾಭ

Aadhaar Card Big Update:ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡದೇ ಹೋದರೆ, ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಯುಐಡಿಎಐ  ಮಾಹಿತಿ ನೀಡಿದೆ.   

Written by - Ranjitha R K | Last Updated : Jan 2, 2023, 11:24 AM IST
  • ಆಧಾರ್ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಪ್ರಮುಖ ದಾಖಲೆ
  • ಸರ್ಕಾರೇತರ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಆಧಾರ್ ಬೇಕೇ ಬೇಕು.
  • ಟ್ವೀಟ್ ಮೂಲಕ ಮಾಹಿತಿ ನೀಡಿರುವ UIDAI
ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದಲ್ಲಿ ಸಿಗುವುದಿಲ್ಲ ಸರ್ಕಾರಿ ಯೋಜನಗೆಳ ಲಾಭ  title=
Aadhaar Card Big Update

Aadhaar Card Big Update : ಆಧಾರ್ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಪ್ರಮುಖ ದಾಖಲೆಯಾಗಿದೆ. ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಆಧಾರ್ ಬೇಕೇ ಬೇಕು. ಆಧಾರ್ ಕುರಿತು UIDAI ಅಪ್ಡೇಟ್ ವೊಂದನ್ನು ನೀಡಿದೆ. ಅದೇನೆಂದರೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು. ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡದೇ ಹೋದರೆ, ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಯುಐಡಿಎಐ  ಮಾಹಿತಿ ನೀಡಿದೆ. 

ಟ್ವೀಟ್ ಮೂಲಕ ಮಾಹಿತಿ ನೀಡಿರುವ UIDAI :
ಯಾವಾಗಲೂ ನಿಮ್ಮ ದಾಖಲೆಗಳನ್ನು ಅಪ್ಡೇಟ್ ಮಾಡುತ್ತಿರಬೇಕು ಎಂದು UIDAI ತನ್ನ ಅಧಿಕೃತ ಟ್ವೀಟ್‌ನಲ್ಲಿ ಹೇಳಿದೆ. ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ, ಆಧಾರ್ ಅನ್ನು  ಅಪ್ಡೇಟ್ ಮಾಡುವುದು ಅವಶ್ಯಕ. 

ಇದನ್ನೂ ಓದಿ : Income Tax: ಇನ್ಮುಂದೆ ನಿಮ್ಮ ಆದಾಯದ ಮೇಲೆ ಕೇವಲ ಶೇ.5 ರಷ್ಟು ತೆರಿಗೆ, ವಿತ್ತ ಸಚಿವರ ಆದೇಶ ಜಾರಿ !

ಎಷ್ಟು ಖರ್ಚು ಮಾಡಬೇಕಾಗುತ್ತದೆ ? :
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡುವುದಾದರೆ, ಇದಕ್ಕಾಗಿ 25 ರೂ. ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ ಆಫ್‌ಲೈನ್‌ನಲ್ಲಿಯೇ ಅಪ್‌ಡೇಟ್ ಮಾಡುವುದಾದರೆ ಇದಕ್ಕಾಗಿ ಕೇವಲ 50 ರೂಪಾಯಿಯನ್ನು ಮಾತ್ರ ಖರ್ಚು ಮಾಡಬೇಕಾಗುತ್ತದೆ. 

ಟ್ರೋಲ್ ಫ್ರೀ ನಂಬರ್ ಮೂಲಕವೂ ಸಂಪರ್ಕಿಸಬಹುದು : 
ಆಧಾರ್‌ಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ, ಟೋಲ್ ಫ್ರೀ ಸಂಖ್ಯೆ 1947 ಅನ್ನು ಸಂಪರ್ಕಿಸಬಹುದು. ಈ ಸಂಖ್ಯೆಯನ್ನು ಬಳಸಿ 12 ಭಾಷೆಗಳಲ್ಲಿಯೂ ಮಾಹಿತಿ ಪಡೆದುಕೊಳ್ಳಬಹುದು. ಸ್ವಯಂ ಸೇವಾ IVRS ಮತ್ತು ನಿವಾಸ ಸಹಾಯ ಕಾರ್ಯನಿರ್ವಾಹಕ-ಆಧಾರಿತ ಸಹಾಯವನ್ನು ಕೂಡಾ ಈ ನಂಬರ್ ಮೂಲಕ ಪಡೆದುಕೊಳ್ಳಬಹುದು.  

ಇದನ್ನೂ ಓದಿ : LIC Plan : ಎಲ್‌ಐಸಿಯ ಈ ಪಾಲಿಸಿ ಖರೀದಿಸಿದರೆ ಪ್ರತಿ ತಿಂಗಳು ನಿಮಗೆ 20 ಸಾವಿರ ಸಿಗುತ್ತದೆ!

ಇದಲ್ಲದೆ, ಅಧಿಕೃತ ವೆಬ್‌ಸೈಟ್ ಮೂಲಕವೂ ದೂರು ಸಲ್ಲಿಸಬಹುದು. ಇದಕ್ಕಾಗಿ ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಅನ್ನು ಸಹ ಸಂಪರ್ಕಿಸಬಹುದು. ಇಲ್ಲಿ ನೀಡಿರುವ ಆಪ್ಶನ್ ಗಳನ್ನು ಆಯ್ಕೆ ಮಾಡುವ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News