PMVVY: ವಿವಾಹಿತರಿಗೆ ಮಾಸಿಕವಾಗಿ 10,000 ರೂ.ಪಿಂಚಣಿ ನೀಡಲಿದೆ ಮೋದಿ ಸರ್ಕಾರ

Lic Pension Scheme: ಕೇಂದ್ರ ಸರ್ಕಾರ ಈ ಪಿಂಚಣಿ ನೀಡಲು ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (ಪಿಎಂವಿವಿವೈ) ಜಾರಿಗೆ ತಂದಿದೆ. ಈ ಯೋಜನೆಯಡಿ ವಿವಾಹಿತರು ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಪಡೆಯಬಹುದು. ಈ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಭಾಗವಾಗಲು ಏನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Oct 16, 2022, 05:06 PM IST
  • ಯೋಜನೆಯ ವಿಶೇಷತೆ ಎಂದರೆ, ಈ ಯೋಜನೆ 10 ವರ್ಷಗಳ ಅವಧಿಯದ್ದಾಗಿದೆ.
  • ನಿಮ್ಮ ಠೇವಣಿ ಹಣದ ಮೇಲೆ ಮಾಸಿಕ ಪಿಂಚಣಿ ಪಡೆಯುವುದು ಮುಂದುವರಿಯುತ್ತದೆ.
  • ನೀವು 10 ವರ್ಷಗಳ ಕಾಲ ಈ ಯೋಜನೆಯಲ್ಲಿ ಉಳಿದರೆ, ನಂತರ 10 ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಹಣವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ.
PMVVY: ವಿವಾಹಿತರಿಗೆ ಮಾಸಿಕವಾಗಿ 10,000 ರೂ.ಪಿಂಚಣಿ ನೀಡಲಿದೆ ಮೋದಿ ಸರ್ಕಾರ title=
Pradhanmantri Vaya Vandana Yojana

Modi Government PMVVY Scheme: ವಿವಾಹಿತರಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ ಮಾಸಿಕ ಪಿಂಚಣಿ ಖಾತರಿ ಪಡಿಸುವ ಉದ್ದೇಶ ಸರ್ಕಾರದ್ದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು 26 ಮೇ 2020 ರಂದು ಪ್ರಾರಂಭಿಸಿದೆ. ಈ ಯೋಜನೆಯ ಲಾಭ ಪಡೆಯಲು ದಂಪತಿಗಳು 31 ಮಾರ್ಚ್ 2023 ರವರೆಗೆ ಹೂಡಿಕೆ ಮಾಡಬಹುದು. ಬಯಸಿದರೆ ಪತಿ ಮತ್ತು ಪತ್ನಿ ಇಬ್ಬರೂ ಕೂಡ ಇಂದಿನಿಂದಲೇ ಹೂಡಿಕೆ ಆರಂಭಿಸುವಾ  ಮೂಲಕ, 60 ವರ್ಷ ವಯಸ್ಸಿನ ನಂತರ ಅದರ ಲಾಭವನ್ನು ಪಡೆಯಬಹುದು. ಸಂಪೂರ್ಣ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಏನಿದು ವಯ ವಂದನಾ ಯೋಜನೆ?
ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ಒಂದು  ಸಾಮಾಜಿಕ ಭದ್ರತಾ ಯೋಜನೆಯಾಗಿದೆ (ಮೋದಿ ಸರ್ಕಾರದ ಪಿಂಚಣಿ ಯೋಜನೆ). ಇದರ ಅಡಿಯಲ್ಲಿ ಫಲಾನುಭವಿಯು ಮಾಸಿಕ ಪಿಂಚಣಿ ಪಡೆಯುತ್ತಾನೆ. ಇದನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ, ಆದರೆ ಈ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (LIC) ನಿರ್ವಹಿಸುತ್ತಿದೆ. ಪತಿ-ಪತ್ನಿ ಇಬ್ಬರೂ 60 ವರ್ಷ ವಯಸ್ಸು ದಾಟಿದ್ದರೆ ಅವರು ಗರಿಷ್ಠ 15 ಲಕ್ಷ ರೂ. ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮೊದಲು ಹೂಡಿಕೆಯ ಈ ಮಿತಿ 7.5 ಲಕ್ಷ ರೂ.ಗಳಾಗಿದ್ದು, ನಂತರ ಅದನ್ನು ದ್ವಿಗುಣಗೊಳಿಸಲಾಗಿದೆ. ಇತರ ಯೋಜನೆಗಳಿಗೆ ಹೋಲಿಸಿದರೆ, ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಈ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಬಹುದು.

ಇದನ್ನೂ ಓದಿ-PM Kisan Update: ದೇಶದ ಕೋಟ್ಯಾಂತರ ರೈತರಿಗೆ ನಾಳೆ ಪ್ರಧಾನಿ ವತಿಯಿಂದ ಉಡುಗೊರೆ, ಮಾಹಿತಿ ನೀಡಿದ ಕೃಷಿ ಸಚಿವಾಲಯ

ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ ಸಿಗಲಿದೆ
ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಇದರಲ್ಲಿ ಇಬ್ಬರಿಗೂ ಕೂಡ ವಾರ್ಷಿಕವಾಗಿ ಶೇ.7.40 ರಷ್ಟು ಬಡ್ಡಿಯ ಲಾಭ ಸಿಗುತ್ತದೆ. ತನ್ಮೂಲಕ ಅವರು ಮಾಸಿಕ ಪಿಂಚಣಿಯಾಗಿ 10 ಸಾವಿರ ರೂ. ಪಡೆಯಲಿದ್ದಾರೆ. ಇದಕ್ಕಾಗಿ ಅವರು ಈ ಯೋಜನೆಯಲ್ಲಿ ಪ್ರತ್ಯೇಕವಾಗಿ 8,10,811 ರೂ ಹೂಡಿಕೆ ಮಾದಬೇಕಾಗಲಿದೆ, ಕೇವಲ ಒಬ್ಬರು ಮಾತ್ರ ಈ ಮೊತ್ತವನ್ನು ಹೂಡಿಕೆ ಮಾಡಿದರೆ ಅವರಿಗೆ 5000 ರೂ ಪಿಂಚಣಿ ಸಿಗುತ್ತದೆ. ಇಬ್ಬರು ಈ ಸಮನಾದ ಮೊತ್ತ ಹೂಡಿಕೆ ಮಾಡಿದರೆ, ಇಬ್ಬರಿಗೂ ಸೇರಿ 10 ಸಾವಿರ ಮಾಸಿಕ ಪಿಂಚಣಿ ಸಿಗುತ್ತದೆ.

ಇದನ್ನೂ ಓದಿ-EPFO Update : PF ಖಾತೆದಾರರಿಗೆ ಸಿಹಿ ಸುದ್ದಿ : ಈ ದಿನ ಸರ್ಕಾರದಿಂದ ನಿಮ್ಮ ಖಾತೆಗೆ ₹81,000!

10 ವರ್ಷಗಳಲ್ಲಿ ಪೂರ್ಣ ಮೊತ್ತ
ಯೋಜನೆಯ ವಿಶೇಷತೆ ಎಂದರೆ, ಈ ಯೋಜನೆ 10 ವರ್ಷಗಳ ಅವಧಿಯದ್ದಾಗಿದೆ. ನಿಮ್ಮ ಠೇವಣಿ ಹಣದ ಮೇಲೆ ಮಾಸಿಕ ಪಿಂಚಣಿ ಪಡೆಯುವುದು ಮುಂದುವರಿಯುತ್ತದೆ. ನೀವು 10 ವರ್ಷಗಳ ಕಾಲ ಈ ಯೋಜನೆಯಲ್ಲಿ ಉಳಿದರೆ, ನಂತರ 10 ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಹಣವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ. ನೀವು ಯಾವುದೇ ಸಮಯದಲ್ಲಿ ಈ ಯೋಜನೆಯನ್ನು ಸರೆಂಡರ್ ಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News