ಆಧಾರ್ ಕಾರ್ಡ್ ದುರ್ಬಳಕೆ? SMS ಮೂಲಕ ನಿಮ್ಮ ಕಾರ್ಡ್ ಲಾಕ್ ಮಾಡಿ, ಹೇಗೆಂದು ತಿಳಿಯಿರಿ

Misuse of Aadhaar Card?: ಆಧಾರ್ ಕಾರ್ಡ್ ಕಳೆದುಹೋದರೆ ಅದು ದುರುಪಯೋಗಬಾರದು ಅನ್ನೋ ಟೆನ್ಷನ್ ಕಾಡುತ್ತದೆ. ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ ನೀವು SMS ಮೂಲಕ ಮನೆಯಲ್ಲೇ ಕುಳಿತು ನಿಮ್ಮ ಆಧಾರ್ ಕಾರ್ಡ್ ಅನ್ನು ಹೇಗೆ ಲಾಕ್ ಮಾಡಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Mar 3, 2023, 04:12 PM IST
  • ಆಧಾರ್ ಕಾರ್ಡ್ ಕಳೆದುಕೊಂಡರೆ ದುರ್ಬಳೆಯಾಗುತ್ತದೆ ಅನ್ನೋದು ಹಲವರ ಟೆನ್ಷನ್ ಆಗಿರುತ್ತದೆ
  • ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ದುರ್ಬಳಕೆ ಮತ್ತು ವಂಚನೆ ಪ್ರಕರಣಗಳು ಹೆಚ್ಚುತ್ತಿವೆ
  • ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ಲಾಕ್ ಮತ್ತು ಅನ್‍ಲಾಕ್ ಮಾಡುವುದು ಹೇಗೆಂದು ತಿಳಿಯಿರಿ
ಆಧಾರ್ ಕಾರ್ಡ್ ದುರ್ಬಳಕೆ? SMS ಮೂಲಕ ನಿಮ್ಮ ಕಾರ್ಡ್ ಲಾಕ್ ಮಾಡಿ, ಹೇಗೆಂದು ತಿಳಿಯಿರಿ title=
ಆಧಾರ್ ಕಾರ್ಡ್ ಸುರಕ್ಷತೆ

ನವದೆಹಲಿ: ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಈ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಆಧಾರ್ ಕಾರ್ಡ್ ಕಳೆದುಹೋದರೆ ದುರ್ಬಳಕೆಯಾಗುತ್ತೆ ಅಂತಾ ಪ್ರತಿಯೊಬ್ಬರಿಗೂ ಟೆನ್ಷನ್ ಇರುತ್ತದೆ. ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ ನೀವು SMS ಮೂಲಕ ಮನೆಯಲ್ಲೇ ಕುಳಿತು ನಿಮ್ಮ ಆಧಾರ್ ಕಾರ್ಡ್ ಲಾಕ್ ಮಾಡಬಹುದು. ಇದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಇದರಿಂದ ನಿಮ್ಮ ಎಲ್ಲಾ ಡೇಟಾ ಸುರಕ್ಷಿತವಾಗಿರುತ್ತದೆ ಮತ್ತು ಆನ್‌ಲೈನ್ ವಂಚನೆ ಮಾಡಲು ಸಾಧ್ಯವಾಗಲ್ಲ.

SMS ಮೂಲಕ ಆಧಾರ್ ಸಂಖ್ಯೆ ಲಾಕ್ ಮಾಡುವುದು ಹೇಗೆ?

ನಿಮ್ಮ ಆಧಾರ್ ಎಲ್ಲೋ ಕಳೆದುಹೋಗಿದ್ದರೆ ಮತ್ತು ಆನ್‌ಲೈನ್ ವಂಚನೆ ನಡೆಯಬಾರದೆಂದು ನೀವು ಅಂದುಕೊಂಡರೆ ಸಿಂಪಲ್ ಆಗಿ ಈ ಕೆಲಸ ಮಾಡಬೇಕು. ಮನೆಯಲ್ಲಿಯೇ ಕುಳಿತು ನೀವು SMS ಸೇವೆಯ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಸುಲಭವಾಗಿ ಲಾಕ್ ಮಾಡಬಹುದು. ಇದು ಹೇಗೆಂದು ತಿಳಿಯಿರಿ.

ಇದನ್ನೂ ಓದಿ: HDFC ಖಾತೆದಾರರಿಗೆ ಎಚ್ಚರ! ಈ ಸಂದೇಶ ಬಂದರೆ ತಕ್ಷಣವೇ ಡಿಲೀಟ್ ಮಾಡಿ !ಇಲ್ಲವಾದರೆ ಖಾಲಿಯಾಗುವುದು ಖಾತೆ

1. SMSನಲ್ಲಿ GETOTP ಆಧಾರ್ ಸಂಖ್ಯೆಯ 4 ಅಥವಾ 8 ಸಂಖ್ಯೆಗಳನ್ನು ಬರೆಯಿರಿ ಮತ್ತು ಅದನ್ನು 1947ಗೆ ಕಳುಹಿಸಿ.

2. ನಂತರ ಲಾಕ್ ಮಾಡುವ ವಿನಂತಿಗಾಗಿ, > LOCKUID ಕೊನೆಯ 4 ಅಥವಾ 8 ಅಂಕಿಗಳ ಆಧಾರ್ ಸಂಖ್ಯೆ ಮತ್ತು OTPಯನ್ನು ಈ ಸಂಖ್ಯೆಗೆ ಕಳುಹಿಸಿ.

3. ಇದರ ನಂತರ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.

4. ನೀವು ಒಮ್ಮೆ ನಿಮ್ಮ ಆಧಾರ್ ಸಂಖ್ಯೆ ಲಾಕ್ ಮಾಡಿದ್ದರೆ, ನಂತರ ಅದನ್ನು ಬಳಸಿಕೊಂಡು ಯಾವುದೇ ಪರಿಶೀಲನೆ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: Business Idea: ಕಡಿಮೆ ಬಜೆಟ್‍ನಲ್ಲಿ ಈ ವ್ಯಾಪಾರ ಪ್ರಾರಂಭಿಸಿ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸಿ!

SMS ಮೂಲಕ ಆಧಾರ್ ಕಾರ್ಡ್ ಅನ್‌ಲಾಕ್ ಹೇಗೆ?

 1. ನೀವು SMS ನಲ್ಲಿ4 ಅಥವಾ 8 ಅಂಕೆಗಳ GETOTP ಆಧಾರ್ ಸಂಖ್ಯೆಯನ್ನು 1947 ಸಂಖ್ಯೆಗೆ ಕಳುಹಿಸಬೇಕು.

2. ನಂತರ ನೀವು ಅನ್‌ಲಾಕ್ ಮಾಡುವ ವಿನಂತಿಗಾಗಿ 4 ಅಥವಾ 8 ಅಂಕಿಗಳ ಆಧಾರ್ ಸಂಖ್ಯೆ ಮತ್ತು OTPಯನ್ನು UNLOCKUIDLAST ಮಾಡಬೇಕಾಗುತ್ತದೆ. ಈ SMSನ್ನು ಅದೇ ಸಂಖ್ಯೆಗೆ ಕಳುಹಿಸಬೇಕು.

3. ಇದರ ನಂತರ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.

ಹೀಗೆ ಮಾಡಿದ್ರೆ ನಿಮ್ಮ ಆಧಾರ್ ಸಂಖ್ಯೆ ಅನ್‍ಲಾಕ್ ಆಗಿರುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News