ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಹೊಸ ಗ್ರಾಹಕರನ್ನು ನಿಷೇಧಿಸಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಆರ್ಬಿಐ, ‘ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಣೆಯ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆ ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ತನ್ನ ಹೊಸ ಗ್ರಾಹಕರಿಗೆ ಡೆಬಿಟ್, ಕ್ರೆಡಿಟ್ ಮತ್ತು ಪ್ರೀಪೇಯ್ಡ್ ಕಾರ್ಡ್ ನೀಡುವುದಕ್ಕೆ ನಿಷೇಧ ಹೇರಲಾಗಿದೆ’ ಎಂದು ಹೇಳಿದೆ.
ಇದೇ ಜುಲೈ 22ರಿಂದ ಈ ನಿಷೇಧ ಜಾರಿಯಾಗಲಿದ್ದು, ಹಾಲಿ ಗ್ರಾಹಕರಿಗೆ ಇದು ಅನ್ವಯವಾಗುವುದಿಲ್ಲವೆಂದು ಆರ್ಬಿಐ(Reserve Bank of India) ಸ್ಪಷ್ಟಣೆ ನೀಡಿದೆ. ದತ್ತಾಂಶ ಸಂಗ್ರಹಣೆ ವಿಷಯದಲ್ಲಿ ಅಮೆರಿಕನ್ ಎಕ್ಸ್ ಪ್ರೆಸ್ ಮತ್ತು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ನ ಬಳಿಕ ಹೊಸ ಗ್ರಾಹಕರನ್ನು ಸೇರಿಸಲು ಆರ್ಬಿಐ ನಿರ್ಬಂಧಿಸಿರುವ 3ನೇ ಕಂಪನಿ ಮಾಸ್ಟರ್ ಕಾರ್ಡ್ ಆಗಿದೆ.
Reserve Bank of India takes supervisory action on Mastercard Asia / Pacific Pte. Ltd.https://t.co/Awx9t2Ssdt
— ReserveBankOfIndia (@RBI) July 14, 2021
ಇದನ್ನೂ ಓದಿ: ಕೊರೊನಾ ನಡುವೆಯೂ ದಶಕದಲ್ಲಿಯೇ ಹೆಚ್ಚಿನ ಲಾಭ ಕಂಡ ಇನ್ಫೋಸಿಸ್
ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ವಿಭಾಗಗಳಡಿ 2021ರ ಜುಲೈ 22ರಿಂದ ಹೊಸ ದೇಶೀಯ ಗ್ರಾಹಕರನ್ನು ಸೇರಿಸಲು ಮಾಸ್ಟರ್ ಕಾರ್ಡ್(Mastercard) ಏಷ್ಯಾ/ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್ ಮೇಲೆ ನಿರ್ಬಂಧ ಹೇರಲಾಗಿದೆ. ಇದಲ್ಲದೆ ಆರ್ಬಿಐನ ನಿರ್ದೇಶನಗಳಿಗನುಸಾರ ಕಂಪನಿ ಎಲ್ಲಾ ಕಾರ್ಡ್ ನೀಡುವ ಬ್ಯಾಂಕುಗಳಿಗೆ ಮತ್ತು ಬ್ಯಾಂಕೇತರರಿಗೆ ಈ ಬಗ್ಗೆ ತಿಳಿಸಬೇಕೆಂದು ಹೇಳಿಕೆಯಲ್ಲಿ ಸೂಚಿಸಲಾಗಿದೆ. ಮಾಸ್ಟರ್ ಕಾರ್ಡ್ಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡಿದ್ದರೂ ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಣೆ ಕುರಿತ ನಿರ್ದೇಶನಗಳನ್ನು ಪಾಲನೆ ಮಾಡಿಲ್ಲವೆಂದು ಆರ್ಬಿಐ ಹೇಳಿಕೊಂಡಿದೆ.
ಮಾಸ್ಟರ್ಕಾರ್ಡ್ ಒಂದು ಪಾವತಿ ವ್ಯವಸ್ಥೆಯ ಆಪರೇಟರ್ ಆಗಿದ್ದು, ಪೇಮೆಂಟ್ ಮತ್ತು ಸೆಟಲ್ ಮೆಂಟ್ ಸಿಸ್ಟಮ್ಸ್ ಆಕ್ಟ್ 2007(PSS Act)ನಡಿ ದೇಶದಲ್ಲಿ ಕಾರ್ಡ್ ನೆಟ್ವರ್ಕ್ ನಿರ್ವಹಿಸಲು ಅಧಿಕಾರ ಹೊಂದಿದೆ. 2018ರ ಏಪ್ರಿಲ್ ತಿಂಗಳಿನಲ್ಲಿ ಹೊರಡಿಸಲಾದ ಸುತ್ತೋಲೆಯಲ್ಲಿ, ಮುಂದಿನ 6 ತಿಂಗಳುಗಳ ಅವಧಿಯಲ್ಲಿ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಇತರ ಡೇಟಾವನ್ನು ಖಚಿತಪಡಿಸಿಕೊಳ್ಳುವಂತೆ ಆರ್ಬಿಐ(RBI) ಎಲ್ಲಾ ಪಾವತಿ ವ್ಯವಸ್ಥೆ ಪೂರೈಕೆದಾರರಿಗೆ ತಿಳಿಸಿತ್ತು.
RBI imposes restrictions on Mastercard from onboarding new domestic customers (debit, credit or prepaid) onto its network from July 22 for non-compliance with 'directions on Storage of Payment System Data'
The order will not impact existing customers of Mastercard, RBI says pic.twitter.com/by5xB93PCt
— ANI (@ANI) July 14, 2021
ಇದನ್ನೂ ಓದಿ: PAN Card Latest News : ಈ ಹೊಸ ವೆಬ್ಸೈಟ್ನಿಂದ 5 ನಿಮಿಷಗಳಲ್ಲಿ e-Pan ಕಾರ್ಡ್ ಡೌನ್ಲೋಡ್ ಮಾಡಿ : ಹೇಗೆ ಇಲ್ಲಿದೆ ನೋಡಿ
ಇದಲ್ಲದೆ ಆರ್ಬಿಐಗೆ ಅನುಸರಣೆ ವರದಿ ಮಾಡಲು ಮತ್ತು ಸಿಇಆರ್ ಟಿ(CERT)-ಇನ್ ಎಂಪನೇಲ್ಡ್ ಆಡಿಟರ್ ನಡೆಸಿದ ಬೋರ್ಡ್-ಅನುಮೋದಿತ ಸಿಸ್ಟಮ್ ಆಡಿಟ್ ವರದಿಯನ್ನು ಮಾಸ್ಟರ್ಕಾರ್ಡ್ ನಿರ್ದಿಷ್ಟ ಸಮಯದೊಳಗೆ ಸಲ್ಲಿಸಬೇಕಾಗಿತ್ತು. ಇದೀಗ ಹೊಸ ಗ್ರಾಹಕರನ್ನು ಸೇರಿಸುವಂತಿಲ್ಲವೆಂದು ಆರ್ಬಿಐ ಹೇರಿರುವ ನಿಷೇಧದ ಗುನ್ನ ಮಾಸ್ಟರ್ಕಾರ್ಡ್ ಗೆ ಮಾಸ್ಟರ್ ಸ್ಟ್ರೋಕ್ ನೀಡಿದಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.