ನವದೆಹಲಿ: Maruti Suzuki Subscribe - ದೇಶದ ಅತಿದೊಡ್ಡ ವಾಹನ ತಯಾರಕ ಮಾರುತಿ ಸುಜುಕಿ ಇಂಡಿಯಾ (MSI) ತನ್ನ ಮಾರುತಿ ಸುಜುಕಿ ಚಂದಾದಾರಿಕೆ ಕೊಡುಗೆಯನ್ನು ವಿಸ್ತರಿಸಿದೆ. ಇದರ ಅಡಿಯಲ್ಲಿ, ಚಂದಾದಾರಿಕೆ ಪ್ರಸ್ತಾಪದಲ್ಲಿ ಇನ್ನೂ ಹಲವು ಮಾದರಿಗಳನ್ನು ಸೇರಿಸಲಾಗಿದೆ.
8 ನಗರಗಳಲ್ಲಿ ಬಿಡುಗಡೆಗೊಳಿಸಲಾಗಿದೆ ಈ ಕೊಡುಗೆ
MSI ಜಾರಿಗೊಳಿಸಿರುವ ಹೇಳಿಕೆಯ ಅನುಸಾರ ದೆಹಲಿ NCR, ಬೆಂಗಳೂರು, ಹೈದ್ರಾಬಾದ್, ಪುಣೆ, ಮುಂಬೈ, ಚೆನ್ನೈ ಹಾಗೂ ಅಹ್ಮದಾಬಾದ್ನಲ್ಲಿ Maruti Suzuki Subscribe ಕೊಡುಗೆಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಕೊಡುಗೆಯ ಅಡಿ S-Cross, Ignis ಹಾಗೂ WagonR ವಾಹನಗಳನ್ನು ಶಾಮೀಲುಗೊಳಿಸಲಾಗಿದೆ.
ಖರೀದಿಸದೆಯೇ ಮನೆಗೆ ತನ್ನಿ ವಾಹನ
ನೆಕ್ಸಾದ ಇಗ್ನಿಸ್ ಮತ್ತು ಮಾರುತಿ ಸುಜುಕಿಯ ವ್ಯಾಗನ್ ಆರ್ ಸೇರ್ಪಡೆಯೊಂದಿಗೆ, ಈ ಚಂದಾದಾರಿಕೆ ಯೋಜನೆ ಇನ್ನಷ್ಟು ಜನಪರ ಹಾಗೂ ಅಗ್ಗವಾಗಿದೆ ಎಂದು ಮಾರುತಿ ಹೇಳಿಕೊಂಡಿದೆ. ಕಡಿಮೆ ಮಾಸಿಕ ಚಂದಾದಾರಿಕೆ ಶುಲ್ಕವನ್ನು ಪಾವತಿಸುವ ಮೂಲಕ ಜನರು ತಮ್ಮ ಹೊಚ್ಚ ಹೊಸ ವಾಹನಗಳನ್ನು ಸುಲಭವಾಗಿ ಮನೆಗೆ ತೆಗೆದುಕೊಂಡು ಹೋಗಬಹುದು. ದೆಹಲಿಯ Wagon R Lxi ಮಾಸಿಕ ಶುಲ್ಕವನ್ನು ರೂ.12,722 ಮತ್ತು Ignis Sigma ಗೆ 13,772 ರೂ. ಪಾವತಿಸಬೇಕು. ಜನರು 48 ತಿಂಗಳವರೆಗೆ ಈ ಶುಲ್ಕವನ್ನು ನೀಡುವ ಮೂಲಕ ಈ ವಾಹನಗಳನ್ನು ತಮ್ಮದಾಗಿಸಿಕೊಳ್ಳಬಹುದು.
ಇದನ್ನು ಓದಿ- Maruti Celerio Offer: ಕೇವಲ 48 ಸಾವಿರ ಪಾವತಿಸಿ ಮನೆಗೆ ತನ್ನಿ ಈ ಹೊಚ್ಚ ಹೊಸ ಕಾರ್
ಗ್ರಾಹಕರ ಹೆಸರಿನಲ್ಲಿ ನೋಂದಣಿ ಸೌಕರ್ಯ ಕೂಡ ಇದೆ
ಮಾರುತಿ ಸುಜುಕಿ ಸಬ್ಸ್ಕ್ರೈಬ್ ಆಫರ್ ಅಡಿಯಲ್ಲಿ ದೇಶದ 8 ನಗರಗಳಲ್ಲಿ ಬಿಳಿ ನಂಬರ್ ಪ್ಲೇಟ್ಗಳ (ಗ್ರಾಹಕರ ಹೆಸರಿನಲ್ಲಿ ನೋಂದಾಯಿಸಲಾಗಿದೆ) ಸೌಕರ್ಯ ಕೂಡ ಪ್ರಾರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಕೊಡುಗೆಯಡಿಯಲ್ಲಿ, ನೀವು ಮಾರುತಿ ಸುಜುಕಿಯ ಹೊಸ Swift, Dzire, Vitara Brezza, Ertiga ಹಾಗೂ NEXA Baleno, Ciaz ಹಾಗೂ XL6 ವಾಹನಗಳನ್ನು ಖರೀದಿಸದೆಯೇ ನೀವು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು.
ಏನಿದು Maruti Suzuki Subscribe ಕೊಡುಗೆ
ಕಂಪನಿಯ ಈ ಪ್ರಸ್ತಾವನೆಯಲ್ಲಿ ಯಾವುದೇ ವ್ಯಕ್ತಿಯು ಮಾಸಿಕ ಶುಲ್ಕವನ್ನು ನೀಡುವ ಮೂಲಕ ಹೊಚ್ಚ ಹೊಸ ಕಾರನ್ನು ತನ್ನ ಮನೆಗೆ ಕೊಂಡೊಯ್ಯಬಹುದು. ಗ್ರಾಹಕರು ಪ್ರತಿ ಕಾರಿಗೆ ಮಾಸಿಕ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವು ಕಾರಿನ ನಿರ್ವಹಣೆ, ರಸ್ತೆ ಅಪಘಾತಗಳಲ್ಲಿ ಸಹಾಯಮತ್ತು ಕಾರಿನ ವಿಮೆ ಒಳಗೊಂಡಿದೆ.
ಇದನ್ನು ಓದಿ- ಡೀಸೆಲ್/ಪೆಟ್ರೋಲ್ ಕಾರುಗಳಲ್ಲಿ ಯಾವುದು ಉತ್ತಮ? Maruti Suzukiಯ ಲೆಕ್ಕಾಚಾರ ಏನು ಗೊತ್ತಾ?
ಪ್ಲಾನ್ ಪೂರ್ಣಗೊಂಡ ಬಳಿಕ ಅದನ್ನು ವಿಸ್ತರಿಸಬಹುದು
ಕಂಪನಿಯ ಪ್ರಕಾರ, ಇದಕ್ಕಾಗಿ 24, 36 ಮತ್ತು 48 ತಿಂಗಳ ವಿವಿಧ ಚಂದಾದಾರಿಕೆ ಯೋಜನೆಗಳನ್ನು ರೂಪಿಸಲಾಗಿದೆ. ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಯಾವುದೇ ಯೋಜನೆಯನ್ನು ಆಯ್ಕೆ ಮಾಡಬಹುದು. ಯೋಜನೆ ಅವಧಿ ಮುಗಿದ ನಂತರ, ಜನರು ಅದನ್ನು ತಮ್ಮ ಆಯ್ಕೆಯಿಂದ ವಿಸ್ತರಿಸಬಹುದು ಅಥವಾ ಕಾರನ್ನು ಮತ್ತೊಂದು ಕಾರಿಗೆ ಬದಲಾಯಿಸಬಹುದು. ಅವರು ಬಯಸಿದರೆ, ಅವರು ಒಂದೇ ಕಾರನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬಹುದು.
ಇದನ್ನು ಓದಿ- ಹೊಚ್ಚ ಹೊಸ Maruti Car ಗಳನ್ನು ಬಾಡಿಗೆಗೆ ಪಡೆಯಬೇಕೆ? ಕಂಪನಿ ಆರಂಭಿಸಿದೆ ಈ ನೂತನ ಸೇವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.