ಮೂರು ಅಗ್ಗದ ಸಿಎನ್ ಜಿ ಕಾರು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

Maruti Baleno CNG, Swift CNG, XL6 CNG : ಮಾರುತಿ ಸುಜುಕಿ ಇತ್ತೀಚೆಗೆ 3 ಹೊಸ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮೂರರ ಬೆಲೆಗಳು ಮತ್ತು ಮೈಲೇಜ್ ಅಂಕಿಅಂಶಗಳು ವಿಭಿನ್ನವಾಗಿವೆ.

Written by - Ranjitha R K | Last Updated : Nov 7, 2022, 03:21 PM IST
  • 3 ಹೊಸ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಿದ ಮಾರುತಿ ಸುಜುಕಿ
  • S-CNG ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ತರುತ್ತಿದೆ.
  • ಈ ಕಾರುಗಳ ಬೆಲೆ ಮತ್ತು ಮೈಲೇಜ್ ಎಷ್ಟು ತಿಳಿಯಿರಿ
 ಮೂರು ಅಗ್ಗದ ಸಿಎನ್ ಜಿ ಕಾರು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ  title=
Maruti suzuki new CNG cars (file photo)

Maruti Baleno CNG, Swift CNG, XL6 CNG : ಮಾರುತಿ ಸುಜುಕಿ ಇತ್ತೀಚೆಗೆ 3 ಹೊಸ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ, ಬಲೆನೊ ಸಿಎನ್‌ಜಿ ಮತ್ತು ಎಕ್ಸ್‌ಎಲ್ 6 ಸಿಎನ್‌ಜಿ ಏಕಕಾಲದಲ್ಲಿ ಬಿಡುಗಡೆ ಮಾಡಿದರೆ, ಸ್ವಿಫ್ಟ್ ಸಿಎನ್‌ಜಿಯನ್ನು ಮೊದಲೇ  ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ಮೊದಲು ಈ ಎಲ್ಲಾ ಕಾರುಗಳು  ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದ್ದವು. ಆದರೆ ಈಗ ಕಂಪನಿಯು ಅವುಗಳನ್ನು S-CNG ತಂತ್ರಜ್ಞಾನದೊಂದಿಗೆ  ಮಾರುಕಟ್ಟೆಗೆ  ತಂದಿದೆ. ಮೂರರ ಬೆಲೆಗಳು ಮತ್ತು ಮೈಲೇಜ್ ಅಂಕಿಅಂಶಗಳು ವಿಭಿನ್ನವಾಗಿವೆ.

ಸ್ವಿಫ್ಟ್ CNG ಬೆಲೆ ಮತ್ತು ಮೈಲೇಜ್ :
ಮಾರುತಿ ಸ್ವಿಫ್ಟ್‌ನ VXi ಮತ್ತು ZXi ರೂಪಾಂತರಗಳಲ್ಲಿ CNG ಕಿಟ್ ಅನ್ನು ನೀಡಲಾಗುತ್ತದೆ. Swift VXi CNG ಬೆಲೆ 7.77 ಲಕ್ಷ ಮತ್ತು ಸ್ವಿಫ್ಟ್ ZXi CNG ಬೆಲೆ  8,45,000 ಲಕ್ಷ  ಆಗಿದೆ. ಸ್ವಿಫ್ಟ್ CNG 1.2 L K-ಸರಣಿಯ  ಡುಯಲ್ ಜೆಟ್ , ಡುಯಲ್ ವಿವಿಟಿ ಎಂಜಿನ್‌ನಿಂದ ಚಾಲಿತವಾಗಿದೆ. ಈ ಸಿಎನ್ ಜಿ ಕಾರು 30.90 km/kg ವರೆಗೆ ಮೈಲೇಜ್ ನೀಡುತ್ತದೆ.

ಇದನ್ನೂ ಓದಿ : Arecanut Price Today: ಇಂದಿನ ಅಡಿಕೆ ಧಾರಣೆ, ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ತಿಳಿಯಿರಿ

Baleno CNG ಬೆಲೆ ಮತ್ತು ಮೈಲೇಜ್ :
ಮಾರುತಿ ಸುಜುಕಿ ಬಲೆನೊದ ಡೆಲ್ಟಾ ಎಂಟಿ ಮತ್ತು ಝೀಟಾ ಎಂಟಿಯಲ್ಲಿ ಸಿಎನ್‌ಜಿ ಕಿಟ್ ನೀಡಲಾಗಿದೆ. ಮಾರುತಿ ಬಲೆನೊ ಸಿಎನ್‌ಜಿ ಡೆಲ್ಟಾ ಎಂಟಿ ಬೆಲೆ 8.28 ಲಕ್ಷ ರೂ.ಗಳಾಗಿದ್ದರೆ ಬಲೆನೊ ಸಿಎನ್‌ಜಿ ಝೀಟಾ ಎಂಟಿ ವೆರಿಯಂಟ್‌ನ ಬೆಲೆ 9.21 ಲಕ್ಷ ರೂ. ಆಗಿದೆ.  ಮಾರುತಿ ಬಲೆನೊ CNG 30.61km/kg ವರೆಗೆ ಮೈಲೇಜ್ ನೀಡುತ್ತದೆ. 

XL6 CNG ಬೆಲೆ ಮತ್ತು ಮೈಲೇಜ್ :
ಮಾರುತಿ ಸುಜುಕಿಯ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಎಸ್‌ಯುವಿ ಎಕ್ಸ್‌ಎಲ್ 6 ನಲ್ಲಿ ಸಿಎನ್‌ಜಿ ಕಿಟ್ ಅನ್ನು ಸಹ ನೀಡಲಾಗಿದೆ. CNG ಕಿಟ್ ಅದರ Zeta ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. XL6 Zeta CNG ಬೆಲೆ 12.24 ಲಕ್ಷ ರೂ. ಇದು 26.32km/kg ವರೆಗೆ ಮೈಲೇಜ್ ನೀಡಬಲ್ಲದು. ಇದು XL6 Zeta ಪೆಟ್ರೋಲ್ ಮಾದರಿಗಿಂತ 96,000 ರೂ.ಯಷ್ಟು ದುಬಾರಿಯಾಗಿದೆ. 

ಇದನ್ನೂ ಓದಿ : FD ಹಣಕ್ಕೆ ಶೇ.7 ಕ್ಕಿಂತ ಹೆಚ್ಚು ಬಡ್ಡಿ ಸಿಗಲಿದೆ, ಈ 4 ಸರ್ಕಾರಿ ಬ್ಯಾಂಕ್‌ಗಳಲ್ಲಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News