ಬೆಂಗಳೂರು : Maruti Celerio CNG Mileage : ಪೆಟ್ರೋಲ್ ತುಂಬಾ ದುಬಾರಿಯಾಗಿದೆ. ಈ ಕಾರಣದಿಂದಾಗಿಯೇ ಜನಸಾಮಾನ್ಯರು ತಮ್ಮ ವಾಹನದ ಪ್ರಯಾಣದ ವೆಚ್ಚವನ್ನು ಉಳಿಸುವ ಸಲುವಾಗಿ ಎಲೆಕ್ಟ್ರಿಕ್ ವಾಹನ, ಸಿಎನ್‌ಜಿ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಪೆಟ್ರೋಲ್ ಗೆ ಹೋಲಿಸಿದರೆ ಸಿಎನ್‌ಜಿ ಅಗ್ಗವಾಗಿರುವುದು ಮಾತ್ರವಲ್ಲ, ಸಿಎನ್ ಜಿ ಕಾರುಗಳು ಹೆಚ್ಚು ಮೈಲೇಜ್ ಕೂಡಾ ನೀಡುತ್ತವೆ. ಹೌದು, ಆಲ್ಟೊಗಿಂತ ಹೆಚ್ಚು ಮೈಲೇಜ್ ನೀಡುವ ಮಾರುತಿಯ ಇನ್ನೊಂದು ಕಾರು ಇದೆ. ಈ ವಾಹನದ ಹೆಸರು - ಮಾರುತಿ ಸುಜುಕಿ ಸೆಲೆರಿಯೊ. ಮಾರುತಿ ಈ ವರ್ಷದ ಆರಂಭದಲ್ಲಿ ಸೆಲೆರಿಯೊದ CNG ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಬೆಲೆ 6.69 ಲಕ್ಷ ರೂ. ಆದರೆ, ಪೆಟ್ರೋಲ್ ಆವೃತ್ತಿಯ ಬೆಲೆ 5.25 ಲಕ್ಷದಿಂದ 7 ಲಕ್ಷದವರೆಗೆ ಇರುತ್ತದೆ.
ಆಲ್ಟೊಗಿಂತ ಸೆಲೆರಿಯೊ ನೀಡುತ್ತದೆ ಹೆಚ್ಚು ಮೈಲೇಜ್ :
ಮಾರುತಿ ಸುಜುಕಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಸೆಲೆರಿಯೊ ಸಿಎನ್‌ಜಿ ಆಲ್ಟೊಗಿಂತ ಸುಮಾರು 4 ಕಿಮೀ ಹೆಚ್ಚು ಮೈಲೇಜ್ ನೀಡುತ್ತದೆ. ಸೆಲೆರಿಯೊ ಮೈಲೇಜ್ 35.60 kmpg ಸಿಎನ್ ಜಿಯಾದರೆ ಆಲ್ಟೊ ಮೈಲೇಜ್ 31.59 kmpg CNG ಆಗಿದೆ. ಇಷ್ಟೇ ಅಲ್ಲ, ಪೆಟ್ರೋಲ್ ಚಾಲಿತ ಸೆಲೆರಿಯೊದ ಮೈಲೇಜ್ ಕೂಡ ಪೆಟ್ರೋಲ್ ಚಾಲಿತ ಆಲ್ಟೊಗಿಂತ ಹೆಚ್ಚಾಗಿದೆ. ಆಲ್ಟೊದ ಪೆಟ್ರೋಲ್ ಆವೃತ್ತಿಯು 22.05km/l ಮೈಲೇಜ್ ನೀಡುತ್ತದೆ ಆದರೆ ಸೆಲೆರಿಯೊ ಪೆಟ್ರೋಲ್ ರೂಪಾಂತರವನ್ನು 24.97km/l ನಿಂದ 26.68km/lವರೆಗೆ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ : Gold Price Today : ಇಂದು ಕೂಡಾ ಇಳಿಕೆಯಾಗಿದೆ ಚಿನ್ನದ ಬೆಲೆ, ಆರು ಸಾವಿರದಷ್ಟು ಅಗ್ಗವಾಯಿತು ಬೆಳ್ಳಿ
ಕಾರಿನ ವೈಶಿಷ್ಟ್ಯಗಳು :
ಸೆಲೆರಿಯೊದಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಲಭ್ಯವಿದೆ. ಜೊತೆಗೆ CNG ಆಯ್ಕೆಯನ್ನು ಕೂಡಾ ನೀಡಲಾಗಿದೆ. ಪೆಟ್ರೋಲ್ ಆವೃತ್ತಿಯನ್ನು 5-ಸ್ಪೀಡ್ ಮ್ಯಾನುವಲ್ (ಸ್ಟ್ಯಾಂಡರ್ಡ್) ಮತ್ತು 5-ಸ್ಪೀಡ್ AMT ಆಯ್ಕೆಯೊಂದಿಗೆ ನೀಡಲಾಗುತ್ತದೆ. ಆದರೆ 5 ಸ್ಪೀಡ್ AMT ಆಯ್ಕೆಯು CNG ರೂಪಾಂತರದಲ್ಲಿ ಲಭ್ಯವಿಲ್ಲ. ಇದು ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‌ನಂತಹ ಹಲವು ವೈಶಿಷ್ಟ್ಯಗಳನ್ನು ಈ ಕಾರು ಹೊಂದಿರುತ್ತದೆ. ಇದರ ಹೊರತಾಗಿ, ಪ್ಯಾಸಿವ್ ಕೀಲೆಸ್ ಅಕ್ಸೆಸ್ , ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಲ್-ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳು ಸಹ ಲಭ್ಯವಿದೆ.
ಇದನ್ನೂ ಓದಿ : DGCA Latest Rule: ಇನ್ನು ವೈದ್ಯರ ಸರ್ಟಿಫಿಕೆಟ್ ಇದ್ದರೆ ಇವರು ವಿಮಾನ ಹತ್ತಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.