LPG Price: ಅಗ್ಗವಾಯ್ತು LPG Cylinder! ಹಣದುಬ್ಬರದ ನಡುವೆಯೇ ಈ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

LPG Price: ತೈಲ ಕಂಪನಿಗಳು ಇಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಿಸಿವೆ (LPG Cylinder Price Hike), ಇನ್ನೊಂದೆಡೆ, 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ (Commercial LPG Cylinder Price Decreased) ಘೋಷಿಸಲಾಗಿದೆ.  

Written by - Nitin Tabib | Last Updated : Mar 22, 2022, 08:25 PM IST
  • ಕಮರ್ಷಿಯಲ್ LPG ಸಿಲೆಂದರ್ ಬೆಲೆಯಲ್ಲಿ ಇಳಿಕೆ
  • ಹಣದುಬ್ಬರದ ನಡುವೆಯೇ ಪ್ರತಿ ಸಿಲಿಂಡರ್ ಗೆ 9 ರೂ. ಇಳಿಕೆ.
  • ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ರೂ.50 ಹೆಚ್ಚಳ.
LPG Price: ಅಗ್ಗವಾಯ್ತು LPG Cylinder! ಹಣದುಬ್ಬರದ ನಡುವೆಯೇ ಈ ಸಿಲಿಂಡರ್ ಬೆಲೆಯಲ್ಲಿ ಇಳಿಕೆ  title=
Commercial LPG Cylinder Price Decreased

ನವದೆಹಲಿ: LPG Price Down -  ಹಣದುಬ್ಬರ ಏರಿಕೆಯ ನಡುವೆಯೇ ಶ್ರೀಸಾಮಾನ್ಯರಿಗೆ ಭಾರಿ ಶಾಕ್ ತಗುಲಿದೆ. ತೈಲ ಕಂಪನಿಗಳು ಸುಮಾರು ಐದು ತಿಂಗಳ ನಂತರ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಿವೆ. ಆದರೆ ಈ ನಡುವೆ ಸಾರ್ವಜನಿಕರಿಗೆ ಒಂದು ನೆಮ್ಮದಿಯ ಸುದ್ದಿಯೂ ಕೂಡ ಲಭಿಸಿದೆ. ಹೌದು, 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ (Commercial Cylinder) ಬೆಲೆಯನ್ನು ಕಡಿತಗೊಳಿಸಲಾಗಿದೆ.

ಇದನ್ನೂ ಓದಿ-22-03-2022 Today Gold Price:ಆಭರಣ ಪ್ರಿಯರಿಗೆ ಬಿಗ್‌ ಶಾಕ್..‌ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ

ಸಿಲಿಂಡರ್‌ಗಳ ಹೊಸ ದರಗಳನ್ನು ತಿಳಿಯಿರಿ (Commercial Cylinder Price)
ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಮೇಲೆ ರೂ. 9 ರಷ್ಟು ಕಡಿತಗೊಳಿಸಿವೆ, ಈ ಇಳಿಕೆಯ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಈಗ ರೂ. 2012 ರಿಂದ ರೂ. 2003 ಕ್ಕೆ ಇಳಿದಿದೆ, ಇದನ್ನು ಮಾರ್ಚ್ 1, 2022 ರಂದು ನಿಗದಿಪಡಿಸಲಾಗಿದೆ. ಇದೇ ವೇಳೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2095 ರಿಂದ 8 ರೂ. ಇಳಿಕೆಯಾಗಿ 2087 ಕ್ಕೆ ಬಂದು ತಲುಪಿದೆ. ಮುಂಬೈನಲ್ಲೂ ಇದರ ಬೆಲೆ ಸುಮಾರು 9 ರೂಪಾಯಿ ಇಳಿಕೆಯಾಗಿದೆ. ದೇಶದ ಆರ್ಥಿಕ ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1954.50 ರೂ.ಗೆ ಇಳಿದಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ರೂ.2137.50ಕ್ಕೆ ಲಭ್ಯವಾಗಲಿದೆ.

ಇದನ್ನೂ ಓದಿ-ಮೇಕೆದಾಟು ಯೋಜನೆ ವಿಚಾರ.. ಕರ್ನಾಟಕ ನಿಲುವು ನಾಳೆ ನಿರ್ಣಯ: ಸಿಎಂ ಬೊಮ್ಮಾಯಿ

ಇದಕ್ಕೂ ಮೊದಲು, ಫೆಬ್ರವರಿಯ ಬೆಲೆಯನ್ನು ಗಮನಿಸಿದರೆ, ಫೆಬ್ರವರಿ 1, 2022 ರಂದು ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ರೂ. 1907, ಕೋಲ್ಕತ್ತಾದಲ್ಲಿ 1987 ರೂ., ಮುಂಬೈನಲ್ಲಿ 1857 ರೂ. ಮತ್ತು ಚೆನ್ನೈನಲ್ಲಿ 2040 ರೂ. ಆಗಿತ್ತು. ಹೊಸ ವರ್ಷದ ಮೊದಲ ದಿನ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1998.50 ರೂ.ಗಳಷ್ಟಿತ್ತು. ಇದೆ ಅವಧಿಯಲ್ಲಿ ಮುಂಬೈನಲ್ಲಿ 2076 ರೂ., ಕೋಲ್ಕತ್ತಾದಲ್ಲಿ 1948.50 ರೂ. ಮತ್ತು ಚೆನ್ನೈನಲ್ಲಿ 2131 ರೂ. ಗಳಷ್ಟಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News