LIC ಈ ಯೋಜನೆಯ 4 ವರ್ಷ ಪ್ರೀಮಿಯಂ ಕಟ್ಟಿ ₹1 ಕೋಟಿ ಲಾಭ ಪಡೆಯಿರಿ

ಈ ಯೋಜನೆಯಲ್ಲಿ ನೀವು ಕೇವಲ 1 ರೂಪಾಯಿ ಹೂಡಿಕೆ ಮಾಡುವ ಮೂಲ ಭರ್ಜರಿ ಲಾಭ ಪಡೆಯಬಹುದು. ಅಷ್ಟೇ ಅಲ್ಲ, ಈ ಪಾಲಿಸಿ ಸುರಕ್ಷತೆಯ ಜೊತೆಗೆ ಉಳಿತಾಯವನ್ನೂ ನೀಡುತ್ತದೆ. ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Written by - Channabasava A Kashinakunti | Last Updated : Apr 16, 2022, 01:19 PM IST
  • ಖಾತರಿ ಮೊತ್ತ 1 ಕೋಟಿ ರೂ.
  • ಈ ಯೋಜನೆಯ ವಿವರಗಳನ್ನು ತಿಳಿಯಿರಿ
  • ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಸಹಾಯ
LIC ಈ ಯೋಜನೆಯ 4 ವರ್ಷ ಪ್ರೀಮಿಯಂ ಕಟ್ಟಿ ₹1 ಕೋಟಿ ಲಾಭ ಪಡೆಯಿರಿ title=

LIC Jeevan shiromani Plan : ನೀವು ಎಲ್ಲೋ ದೊಡ್ಡ ಹೂಡಿಕೆ ಮಾಡುವ ಮೂಲಕ ಸುರಕ್ಷಿತ ಲಾಭವನ್ನು ಗಳಿಸಲು ಬಯಸಿದರೆ, ಈ ಸುದ್ದಿ ಓದಿ. ಎಲ್ಐಸಿ ಪ್ರತಿ ವರ್ಗದ ಗ್ರಾಹಕರಿಗೆ ಪಾಲಿಸಿಗಳನ್ನು ನೀಡುತ್ತದೆ. ಹಾಗೆ, ಎಲ್ಐಸಿ ವಿಶೇಷ ಯೋಜನೆಗಳನ್ನೂ ಕೂಡ ಜಾರಿಗೆ ತಂದಿದೆ.  ಜೀವನ್ ಶಿರೋಮಣಿ ಯೋಜನೆ ಎಂಬ ಸೂಪರ್‌ಹಿಟ್ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ, ಈ ಯೋಜನೆಯಲ್ಲಿ ನೀವು ಕೇವಲ 1 ರೂಪಾಯಿ ಹೂಡಿಕೆ ಮಾಡುವ ಮೂಲ ಭರ್ಜರಿ ಲಾಭ ಪಡೆಯಬಹುದು. ಅಷ್ಟೇ ಅಲ್ಲ, ಈ ಪಾಲಿಸಿ ಸುರಕ್ಷತೆಯ ಜೊತೆಗೆ ಉಳಿತಾಯವನ್ನೂ ನೀಡುತ್ತದೆ. ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಖಾತರಿ ಮೊತ್ತ 1 ಕೋಟಿ ರೂ.

ಎಲ್ಐಸಿಯ ಈ ಯೋಜನೆ  ಒಂದು ನಾನ್-ಲಿಂಕ್ಡ್ ಪ್ಲಾನ್ ಆಗಿದ್ದು, ಇದರಲ್ಲಿ ನಿಮಗೆ 1 ಕೋಟಿ ರೂ.ವರೆಗೆ ವಿಮಾ ಮೊತ್ತ ಸಿಗಲಿದೆ. ಈ ಪಾಲಿಸಿಯಲ್ಲಿ ಕನಿಷ್ಠ ಆದಾಯ 1 ಕೋಟಿ ರೂ. ಆಗಿದೆ.

ಈ ಯೋಜನೆಯ ವಿವರಗಳನ್ನು ತಿಳಿಯಿರಿ

LIC ಈ ವಿಶೇಷ ಯೋಜನೆಯನ್ನು 19 ಡಿಸೆಂಬರ್ 2017 ರಂದು ಪ್ರಾರಂಭಿಸಿತು.
- ಇದು ನಾನ್-ಲಿಂಕ್ಡ್ ಪ್ಲಾನ್ ಆಗಿದ್ದು, ಸೀಮಿತ ಪ್ರೀಮಿಯಂ ಪಾವತಿ ಹಣವನ್ನು ಹಿಂತಿರುಗಿಸುವ ಯೋಜನೆಯಾಗಿದೆ.
ಈ ಯೋಜನೆಯನ್ನು ವಿಶೇಷವಾಗಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಿಗೆ (NHE) ತಯಾರಿಸಲಾಗಿದೆ.
ಈ ಯೋಜನೆಯಡಿಯಲ್ಲಿ, ಗಂಭೀರ ಕಾಯಿಲೆಗಳಿಗೆ ಕವರ್ ಕೂಡ ಸಿಗಲಿದೆ. 
- ಈ ವಿಶೇಷ ಯೋಜನೆಯಲ್ಲಿ 3 ಹೆಚ್ಚಿನ ರೈಡರ್‌ ಸಹ ಲಭ್ಯವಿದೆ.

ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಸಹಾಯ

ಎಲ್‌ಐಸಿಯ ಜೀವನ್ ಶಿರೋಮಣಿ ಯೋಜನೆಯು ಪಾಲಿಸಿದಾರರ ಕುಟುಂಬಕ್ಕೆ ಅವರ ಮರಣದ ನಂತರ ಹಣಕಾಸಿನ ಸಹಾಯ ಒದಗಿಸುತ್ತದೆ.
- ಈ ಪಾಲಿಸಿಯಲ್ಲಿ, ಪಾಲಿಸಿದಾರರಿಗೆ ನಿಗದಿತ ಅವಧಿಯಲ್ಲಿ ಪಾವತಿಸಲಾಗುತ್ತದೆ.
ಇದರಲ್ಲಿ, ಮೆಚ್ಯೂರಿಟಿಯ ಮೇಲೆ ಒಂದು ಭಾರಿ ಮೊತ್ತವನ್ನು ಸಹ ನೀಡಲಾಗುತ್ತದೆ.

ಸರ್ವೈವಲ್ ಬೆನಿಫಿಟ್

ಇದು ಸರ್ವೈವಲ್ ಬೆನಿಫಿಟ್ ಮೇಲಿನ ಪಾವತಿ ಪ್ರಕ್ರಿಯೆಯಾಗಿದೆ, ಅಂದರೆ ಪಾಲಿಸಿದಾರರ ಸರ್ವೈವಲ್ ಬೆನಿಫಿಟ್ ಹೀಗಿದೆ.

1.14 ವರ್ಷದ ಪಾಲಿಸಿ -10ನೇ ಮತ್ತು 12ನೇ ವರ್ಷ 30-30% ವಿಮಾ ಮೊತ್ತದ
2. 16 ವರ್ಷಗಳ ಪಾಲಿಸಿ -12ನೇ ಮತ್ತು 14ನೇ ವರ್ಷಕ್ಕೆ ವಿಮಾ ಮೊತ್ತದ 35-35%
3. 18 ವರ್ಷಗಳ ಪಾಲಿಸಿ -14 ಮತ್ತು 16 ನೇ ವರ್ಷ 40-40% ವಿಮಾ ಮೊತ್ತ
4. 20 ವರ್ಷಗಳ ಪಾಲಿಸಿ -16 ಮತ್ತು 18 ನೇ ವರ್ಷ 45-45% ವಿಮಾ ಮೊತ್ತ.

ನೀವು ಎಷ್ಟು ಸಾಲ ಪಡೆಯಬಹುದು

ಈ ಪಾಲಿಸಿಯ ಪ್ರಮುಖ ವಿಷಯವೆಂದರೆ ಪಾಲಿಸಿ ಅವಧಿಯಲ್ಲಿ ಗ್ರಾಹಕರು ತಮ್ಮ ಸರೆಂಡರ್ ಮೌಲ್ಯದ ಆಧಾರದ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಎಲ್ಐಸಿಯ ನಿಯಮಗಳು ಮತ್ತು ಷರತ್ತುಗಳು ಇದರಲ್ಲಿ ಅನ್ವಯಿಸುತ್ತವೆ. ಕಾಲಕಾಲಕ್ಕೆ ನಿರ್ಧರಿಸಿದಂತೆ ಬಡ್ಡಿ ದರದಲ್ಲಿ ಮಾತ್ರ ಪಾಲಿಸಿ ಸಾಲವನ್ನು ನೀಡಲಾಗುತ್ತದೆ.

ನಿಯಮಗಳು ಮತ್ತು ಷರತ್ತುಗಳು ಯಾವುವು ಎಂದು ತಿಳಿಯಿರಿ

1. ಕನಿಷ್ಠ ವಿಮಾ ಮೊತ್ತ - 1 ಕೋಟಿ ರೂ.
3. ಗರಿಷ್ಠ ವಿಮಾ ಮೊತ್ತ: ಯಾವುದೇ ಮಿತಿಯಿಲ್ಲ (ಮೂಲ ವಿಮಾ ಮೊತ್ತವು 5 ಲಕ್ಷಗಳಲ್ಲಿ ಬಹುಪಾಲು ಇರುತ್ತದೆ.)
3. ಪಾಲಿಸಿ ಅವಧಿ: 14, 16, 18 ಮತ್ತು 20 ವರ್ಷಗಳು
4. ಪ್ರೀಮಿಯಂ ಪಾವತಿಸಬೇಕಾದ ತನಕ: 4 ವರ್ಷಗಳು
5. ಪ್ರವೇಶಕ್ಕೆ ಕನಿಷ್ಠ ವಯಸ್ಸು: 18 ವರ್ಷಗಳು
6. ಪ್ರವೇಶಕ್ಕಾಗಿ ಗರಿಷ್ಠ ವಯಸ್ಸು: 14 ವರ್ಷಗಳ ಪಾಲಿಸಿಗೆ 55 ವರ್ಷಗಳು; 16 ವರ್ಷಗಳ ಪಾಲಿಸಿಗೆ 51 ವರ್ಷಗಳು; 18 ವರ್ಷಗಳ ಪಾಲಿಸಿಗೆ 48 ವರ್ಷಗಳು; 20 ವರ್ಷಗಳ ಪಾಲಿಸಿಗೆ 45 ವರ್ಷಗಳು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News