LICಯ ಈ ಯೋಜನೆಯಲ್ಲಿ ಕೇವಲ 1 ರೂ.ಗೆ ಒಂದು ಕೋಟಿ ಲಾಭ!: ಸಂಪೂರ್ಣ ವಿವರ ಇಲ್ಲಿದೆ

LIC Jeevan Shiromani Plan: ನೀವು ಕೂಡ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಜೀವನ ಶಿರೋಮಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಕೇವಲ 1 ರೂ.ಗೆ ಉತ್ತಮ ಲಾಭವನ್ನು ಪಡೆಯುತ್ತೀರಿ.

Written by - Puttaraj K Alur | Last Updated : Oct 3, 2021, 06:54 AM IST
  • ಸುರಕ್ಷಿತ ಹೂಡಿಕೆಗೆ ಯೋಜಿಸುತ್ತಿದ್ದರೆ ಜೀವನ ಶಿರೋಮಣಿ ಯೋಜನೆ ನಿಮಗೆ ಉತ್ತಮ ಆಯ್ಕೆ
  • LICಯ ಈ ವಿಶೇಷ ಯೋಜನೆಯಲ್ಲಿ ನಿಮಗೆ ಉತ್ತಮ ಲಾಭಗಳು ಲಭ್ಯವಿದೆ
  • ಈ ಯೋಜನೆ ನಿಮಗೆ ರಕ್ಷಣೆಯ ಜೊತೆಗೆ ಉಳಿತಾಯದ ಖಾತ್ರಿಯನ್ನು ನೀಡುತ್ತದೆ
LICಯ ಈ ಯೋಜನೆಯಲ್ಲಿ ಕೇವಲ 1 ರೂ.ಗೆ ಒಂದು ಕೋಟಿ ಲಾಭ!: ಸಂಪೂರ್ಣ ವಿವರ ಇಲ್ಲಿದೆ   title=
ಎಲ್‌ಐಸಿ ಜೀವನ್ ಶಿರೋಮಣಿ ಯೋಜನೆ (Photo Courtesy:@Zee News)

ನವದೆಹಲಿ: ಎಲ್‌ಐಸಿ ಜೀವನ್ ಶಿರೋಮಣಿ ಯೋಜನೆ:- ನೀವು ಸುರಕ್ಷಿತ ಹೂಡಿಕೆಗೆ ಯೋಜಿಸುತ್ತಿದ್ದರೆ ಜೀವನ ಶಿರೋಮಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಕೇವಲ 1 ರೂ.ಗೆ ಬದಲಾಗಿ ಉತ್ತಮ ಲಾಭವನ್ನು ಪಡೆಯುತ್ತೀರಿ. LICಯ ಈ ವಿಶೇಷ ಯೋಜನೆಯಲ್ಲಿ ಉತ್ತಮ ಲಾಭಗಳು ಲಭ್ಯವಿದೆ. ರಕ್ಷಣೆಯ ಜೊತೆಗೆ ಇದು ಉಳಿತಾಯವನ್ನೂ ನೀಡುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.   

ಖಾತರಿ ಮೊತ್ತ 1 ಕೋಟಿ ರೂ.

ವಾಸ್ತವವಾಗಿ LICಯ ಯೋಜನೆ (Jeevan Shiromani Plan Benefits) ಒಂದು ನಾನ್ ಲಿಂಕ್ಡ್ ಪ್ಲಾನ್ ಆಗಿದೆ. ಇದರಲ್ಲಿ ನೀವು ಕನಿಷ್ಟ 1 ಕೋಟಿ ರೂ. ಮೊತ್ತದ ಖಾತರಿ ಮೊತ್ತವನ್ನು ಪಡೆಯುತ್ತೀರಿ. ಎಲ್‌ಐಸಿ ತನ್ನ ಗ್ರಾಹಕರಿಗೆ ತಮ್ಮ ಜೀವನ ಭದ್ರತೆಗಾಗಿ ಹಲವು ಉತ್ತಮ ಪಾಲಿಸಿಗಳನ್ನು ನೀಡುತ್ತಲೇ ಇದೆ.

ಸಂಪೂರ್ಣ ಯೋಜನೆ ಏನು?

ಎಲ್ಐಸಿ ಈ ಜೀವನ್ ಶಿರೋಮಣಿ (Table No. 847) ಯೋಜನೆಯನ್ನು 19 ಡಿಸೆಂಬರ್ 2017 ರಂದು ಆರಂಭಿಸಿತ್ತು. ಈಗಾಗಲೇ ಹೇಳಿದಂತೆ ಇದೊಂದು ನಾನ್ ಲಿಂಕ್ಡ್ ಸ್ಕೀಮ್ ಆಗಿದ್ದು, ಸೀಮಿತ ಪ್ರೀಮಿಯಂ ಪಾವತಿ ಮನಿ ಬ್ಯಾಕ್ ಪ್ಲಾನ್ ಆಗಿದೆ. ಇದು ಮಾರುಕಟ್ಟೆ ಸಂಬಂಧಿತ ಲಾಭ ಯೋಜನೆ. ಈ ಯೋಜನೆಯನ್ನು ವಿಶೇಷವಾಗಿ HNI(High Net Worth Individuals)ಗಳಿಗಾಗಿ ಮಾಡಲಾಗಿದೆ. ಈ ಯೋಜನೆಯು ನಿರ್ಣಾಯಕ ಕಾಯಿಲೆಗಳಿಗೆ ರಕ್ಷಣೆ ನೀಡುತ್ತದೆ. ಇದರಲ್ಲಿ 3 ಆಪ್ಷನಲ್ ರೈಡರ್ ಕೂಡ ಲಭ್ಯವಿರುತ್ತಾರೆ.

ಇದನ್ನೂ ಓದಿ: Post Office ನ ಈ ಯೋಜನೆಯಲ್ಲಿ ತಿಂಗಳಿಗೆ 1300 ರೂ. ಜಮೆ ಮಾಡುವ ಮೂಲಕ ರಿಟರ್ನ್ ಪಡೆಯಿರಿ 13 ಲಕ್ಷ ರೂ.

ಹಣಕಾಸಿನ ನೆರವು ಪಡೆಯಿರಿ

ಜೀವನ್ ಶಿರೋಮಣಿ ಯೋಜನೆ(Jeevan Shiromani Plan) ಪಾಲಿಸಿದಾರರ ಕುಟುಂಬಕ್ಕೆ ಪಾಲಿಸಿ ಅವಧಿಯಲ್ಲಿ ಡೆತ್ ಬೆನಿಫಿಟ್ ರೂಪದಲ್ಲಿ ಹಣಕಾಸಿನ ನೆರವು ಸಿಗಲಿದೆ. ಈ ಪಾಲಿಸಿಯಲ್ಲಿ ಪಾಲಿಸಿದಾರರ ಬದುಕುಳಿಯುವಿಕೆಯ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ ಪಾವತಿಯ ಸೌಲಭ್ಯವನ್ನು ನೀಡಲಾಗಿದೆ. ಇದರ ಹೊರತಾಗಿ ಈ ಯೋಜನೆ ಮುಕ್ತಾಯದ ಮೇಲೆ ಒಂದು ದೊಡ್ಡ ಮೊತ್ತವನ್ನು ಸಹ ನೀಡಲಾಗುತ್ತದೆ.

ಸರ್ವೈವಲ್ ಬೆನಿಫಿಟ್(Survival Benefit) ಏನು..?

ಸರ್ವೈವಲ್ ಬೆನಿಫಿಟ್ ಅಂದರೆ ಪಾಲಿಸಿದಾರರ ಜೀವಿತಾವಧಿಯಲ್ಲಿ ಸಿಗುವ ಒಂದು ನಿಶ್ಚಿತ ಮೊತ್ತ . ಇದರಡಿ ಪಾವತಿ ಪ್ರಕ್ರಿಯೆ ಈ ಕೆಳಗಿನಂತಿರುತ್ತದೆ.

1) 14 ವರ್ಷದ ಪಾಲಿಸಿ -10ನೇ ಮತ್ತು 12ನೇ ವರ್ಷ ವಿಮಾ ಮೊತ್ತದ ಶೇ.30-30ರಷ್ಟು

2) 16 ವರ್ಷದ ಪಾಲಿಸಿ -12ನೇ ಮತ್ತು 14ನೇ ವರ್ಷ ಶೇ.35-35ರಷ್ಟು ವಿಮಾ ಮೊತ್ತ

3) 18 ವರ್ಷದ ಪಾಲಿಸಿ -14 ಮತ್ತು 16ನೇ 40 ವರ್ಷದ ವಿಮಾ ಮೊತ್ತ ಶೇ.40ರಷ್ಟು

4) 20 ವರ್ಷದ ಪಾಲಿಸಿ -16ನೇ ಮತ್ತು 18ನೇ ವರ್ಷ ವಿಮಾ ಮೊತ್ತದ ಶೇ.45-45ರಷ್ಟು

ಇದನ್ನೂ ಓದಿ: Jeevan Shanti Policy : LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ; ವೃದ್ಧಾಪ್ಯದಲ್ಲಿ ಪಡೆಯಿರಿ 75 ಸಾವಿರ ರೂ. ಪಿಂಚಣಿ 

ಎಷ್ಟು ಸಾಲ ಸಿಗುತ್ತದೆ ?

ಈ ಪಾಲಿಸಿಯ ಮತ್ತೊಂದು ವಿಶೇಷತೆಯೆಂದರೆ ಪಾಲಿಸಿ ಅವಧಿಯಲ್ಲಿ ಪಾಲಿಸಿ ಸರೆಂಡರ್ ಮೌಲ್ಯದ ಆಧಾರದ ಮೇಲೆ ಗ್ರಾಹಕರು ಸಾಲವನ್ನು (Loan) ತೆಗೆದುಕೊಳ್ಳಬಹುದು. ಆದರೆ ಈ ಸಾಲವು ಎಲ್ಐಸಿಯ ನಿಯಮಗಳು ಮತ್ತು ಷರತ್ತುಗಳ ಮೇಲೆ ಮಾತ್ರ ಲಭ್ಯವಿರುತ್ತದೆ. ಪಾಲಿಸಿ ಸಾಲವು ಕಾಲಕಾಲಕ್ಕೆ ನಿರ್ಧರಿಸುವ ಬಡ್ಡಿದರದಲ್ಲಿ ಲಭ್ಯವಿರುತ್ತದೆ.

ನಿಯಮಗಳು ಮತ್ತು ಷರತ್ತುಗಳು

1) ಕನಿಷ್ಠ ವಿಮಾ ಮೊತ್ತ - 1 ಕೋಟಿ ರೂ.

2) ಗರಿಷ್ಠ ಮೊತ್ತದ ವಿಮಾ: ಯಾವುದೇ ಮಿತಿ ಇಲ್ಲ (No Limit-Basic Sum Assured will be in multiples of 5 lakhs)

3) ಪಾಲಿಸಿ ಅವಧಿ: 14, 16, 18 ಮತ್ತು 20 ವರ್ಷಗಳು

4) ಯಾವ ಸಮಯಕ್ಕೆ ಪ್ರೀಮಿಯಂ ಪಾವತಿಸಬೇಕು: 4 ವರ್ಷಗಳು

5. ಕನಿಷ್ಠ ವಯಸ್ಸು : 18 ವರ್ಷಗಳಿಗೆ 6. ಗರಿಷ್ಠ ವಯಸ್ಸು: 14 ವರ್ಷಗಳ ಪಾಲಿಸಿಗೆ 55 ವರ್ಷಗಳು; 16 ವರ್ಷಗಳ ಪಾಲಿಸಿಗೆ 51 ವರ್ಷಗಳು; 18 ವರ್ಷಗಳ ಪಾಲಿಸಿಗೆ 48 ವರ್ಷಗಳು; 20 ವರ್ಷಗಳ ಪಾಲಿಸಿಗೆ 45 ವರ್ಷಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News