Price hike : April ನಂತರ ಏರಿಕೆಯಾಗಲಿದೆ LED ಟಿವಿಯ ಬೆಲೆ..!

ವರದಿಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ, ಜಾಗತಿಕ ಮಾರುಕಟ್ಟೆಗಳಲ್ಲಿ ಓಪನ್ ಸೆಲ್ ಬೆಲೆಯು ಸುಮಾರು 35% ವರೆಗೆ ದುಬಾರಿಯಾಗಿದೆ.  ಇದು ಈಗ ಟಿವಿ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. 

Written by - Ranjitha R K | Last Updated : Mar 11, 2021, 07:29 PM IST
  • ಏಪ್ರಿಲ್ 1 ರಿಂದ ಏರಿಕೆಯಾಗಲಿದೆ ಎಲ್ಇಡಿ ಟಿವಿ ಬೆಲೆ
  • ಎಲ್ ಇಡಿ ಟಿವಿಯ ಬೆಲೆಯಲ್ಲಿ ಶೇ 5ರಿಂದ 7 ರಷ್ಟು ಏರಿಕೆ
  • ಒಪನ್ ಸೆಲ್ ಪ್ಯಾನೆಲ್ ನ ಬೆಲೆಯಲ್ಲಿ ಹೆಚ್ಚಳವಾಗಿದ್ದೇ ಟಿವಿ ಬೆಲೆ ಏರಿಕೆಗೆ ಕಾರಣ
Price hike : April ನಂತರ ಏರಿಕೆಯಾಗಲಿದೆ LED ಟಿವಿಯ ಬೆಲೆ..! title=
ಏಪ್ರಿಲ್ 1 ರಿಂದ ಏರಿಕೆಯಾಗಲಿದೆ ಎಲ್ಇಡಿ ಟಿವಿ ಬೆಲೆ (file photo)

ನವದೆಹಲಿ: ನೀವು ಸಹ ಎಲ್ಇಡಿ ಟಿವಿ (LED TV) ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ತಡ ಮಾಡಬೇಡಿ. ಬೇಗನೆ ಖರೀದಿಸಿ ಬಿಡಿ. ಯಾಕಂದರೆ,  ಏಪ್ರಿಲ್ 1 ರಿಂದ ಟಿವಿ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಟಿವಿ ಮ್ಯಾನಿಫ್ಯಾಕ್ಚರಿಂಗ್ ನಲ್ಲಿ ಬಳಸಲಾಗುವ ಒಪನ್ ಸೆಲ್ ಪ್ಯಾನೆಲ್ ನ ಬೆಲೆಯಲ್ಲಿ ದಿಢೀರನೆ ಹೆಚ್ಚಳವಾದ ಕಾರಣ ಗ ಟಿವಿ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. 

35% ದಷ್ಟು ದುಬಾರಿಯಾಗಿರುವ ಓಪನ್ ಸೆಲ್ : 
ವರದಿಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ, ಜಾಗತಿಕ ಮಾರುಕಟ್ಟೆಗಳಲ್ಲಿ ಓಪನ್ ಸೆಲ್ (open cell) ಬೆಲೆಯು ಸುಮಾರು 35% ವರೆಗೆ ದುಬಾರಿಯಾಗಿದೆ.  ಇದು ಈಗ ಟಿವಿ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಪ್ಯಾನಸೋನಿಕ್ (Panasonic), ಹೈಯರ್ (Haier)  ಮತ್ತು ಥಾಮ್ಸನ್ ನಂತಹ (Thomson) ದೊಡ್ಡ ಬ್ರಾಂಡ್‌ಗಳು ಈಗಾಗಲೇ ಬೆಲೆ ಏರಿಕೆ ಬಗ್ಗೆ ಸೂಚನೆ ನೀಡಿವೆ. LG ಯಂತಹ ಕೆಲವು ಕಂಪನಿಗಳು ಈಗಾಗಲೇ LED TV ಗಳ ಬೆಲೆಯನ್ನೂ ಏರಿಸಿವೆ. 

ಇದನ್ನೂ ಓದಿ : Free Disney+ Hotstar ಪಡೆಯಲು ಹೀಗೆ ಮಾಡಿ..!

LED TV  ಗಳು ಶೇಕಡಾ 5-7 ರಷ್ಟು ದುಬಾರಿಯಾಗಲಿವೆ :
ಪ್ಯಾನಸೋನಿಕ್ ಇಂಡಿಯಾ ಸೌತ್ ಏಷ್ಯಾ ಸಿಇಒ ಮನೀಶ್ ಶರ್ಮಾ (Manish Sharma) ಮಾತನಾಡಿ, ಓಪನ್ ಸೆಲ್ ಪ್ಯಾನಲ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ ಮತ್ತು ಆದ್ದರಿಂದ ಟಿವಿ ಬೆಲೆಗಳು ಏರಿಕೆಯಾಗುತ್ತಿವೆ. ಏಪ್ರಿಲ್ ವೇಳೆಗೆ ಟಿವಿ (TV) ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಪ್ರಸ್ತುತ ಪ್ರವೃತ್ತಿಗಳನ್ನು ಗಮನಿಸಿದರೆ, ಏಪ್ರಿಲ್ ವೇಳೆಗೆ ಬೆಲೆಗಳು 5-7 ರಷ್ಟು ಹೆಚ್ಚಾಗಬಹುದು.

ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಬೇಕಾಗಬಹುದು:
ಇದೇ ವೇಳೆ, ಬೆಲೆಗಳನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೈಯರ್ ಅಪ್ಲೈಯನ್ಸ್ ಇಂಡಿಯಾದ ಅಧ್ಯಕ್ಷ ಎರಿಕ್ ಬ್ರಾಗಾಂಜಾ ಅವರು ಹೇಳಿದ್ದಾರೆ. ಓಪನ್ ಸೆಲ್ ಪ್ಯಾನಲ್ ಬೆಲೆಯಲ್ಲಿ ಭಾರೀ ಏರಿಕೆ (Price hike) ಕಂಡು ಬಂದಿದೆ. ಇದು ಹೀಗೆ ಮುಂದುವರಿದರೆ, ನಿರಂತರವಾಗಿ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Flipkart Smartphone Carnival: 5000ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಖರೀದಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News