Just For First Time MF Investors: ನೂತನ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿವೆ ಕೆಲ ಸಲಹೆಗಳು

Mutual Fund Investment - ನೀವೂ ಕೂಡ ಒಂದು ವೇಳೆ ಮೊದಲ ಬಾರಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಲಾರ್ಜ್ ಕ್ಯಾಪ್ ಫಂಡ್ ನಿಮ್ಮ ಮೊದಲ ಆದ್ಯತೆಯಾಗಿರಬೇಕು.

Written by - Nitin Tabib | Last Updated : Jul 12, 2021, 07:51 PM IST
  • ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಯೋಜನೆ ಇದೆಯೇ?
  • ಲಾರ್ಜ್ ಕ್ಯಾಪ್ ಫಂಡ್ ಹಾಗೂ ಇಂಡೆಕ್ಸ್ ಫಂಡ್ ಉತ್ತಮ ಆಯ್ಕೆಗಳಾಗಿವೆ.
  • ಏಕೆಂದರೆ ಇವುಗಳಲ್ಲಿನ ಹೂಡಿಕೆ ಅಪಾಯದ ಜೊತೆಗೆ ಉತ್ತಮ ಆದಾಯ ಕೂಡ ನೀಡುತ್ತವೆ.
Just For First Time MF Investors: ನೂತನ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿವೆ ಕೆಲ ಸಲಹೆಗಳು  title=
Just For First Time MF Investors (File Photo)

ನವದೆಹಲಿ: Mutual Fund Investment - ಕೊರೊನಾ ಕಾಲದಲ್ಲಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದವರಿಗೆ ಉತ್ತಮ ಲಾಭ ಬಂದಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮ್ಯೂಚವಲ್ ಫಂಡ್ ಗಳತ್ತ ಜನರ ಆಕರ್ಷಣೆ ಕೂಡ ಹೆಚ್ಚಾಗಿದೆ. ಆದರೆ, ಒಂದು ವೇಳೆ ನೀವೂ ಕೂಡ ಮೊಟ್ಟಮೊದಲ ಬಾರಿಗೆ ಮ್ಯೂಚವಲ್ ಫಂಡ್ ಗಳಲ್ಲಿ ಹಣವನ್ನು ತೊಡಗಿಸಲು ಬಯಸುತ್ತಿದ್ದರೆ, ಕೆಲ ಮಾಹಿತಿಗಳ ಜೊತೆಗೆ ಎಚ್ಚರಿಕೆ ವಹಿಸುವುದು ಕೂಡ ಅವಶ್ಯಕವಾಗಿದೆ. 

ಈ ವಿಷಯಕ್ಕೆ ಸಂಬಂಧಪಟ್ಟ ತಜ್ಞರು ಹೇಳುವ ಪ್ರಕಾರ, ಯಾವುದೇ ಓರ್ವ ವ್ಯಕ್ತಿ ಮೊಟ್ಟಮೊದಲ ಬಾರಿಗೆ ಮ್ಯೂಚವಲ್ ಫಂಡ್ ನಲ್ಲಿ ಹಣವನ್ನು ತೊಡಗಿಸಲು ಹೊರಟಿದ್ದರೆ, ಲಾರ್ಜ್ ಕ್ಯಾಪ್ ಫಂಡ್ (Large Cap Fund) ಅವರ ಮೊದಲ ಆದ್ಯತೆಯಾಗಿರಬೇಕು ಎನ್ನುತ್ತಾರೆ. ಇದಾದ ಬಳಿಕ ಇಂಡೆಕ್ಸ್ ಫಂಡ್ (Index Fund) ಅವರ ಎರಡನೆಯ ಆಯ್ಕೆಯಾಗಿರಬೇಕು. ಒಂದು ನಿಶ್ಚಿತ ಅವಧಿಯ ಬಳಿಕ ನಿಮ್ಮ ನಿಮ್ಮ ಹೂಡಿಕೆ ಹೇಗೆ ಹೆಚ್ಚಾಗಲಿದೆ ಎಂಬುದು ಮ್ಯೂಚವಲ್ ಫಂಡ್ (Mutual Fund)ಕ್ಯಾಲ್ಕ್ಯೂಲೆಟರ್ ಗಳು ನಿಮಗೆ ಮಾಹಿತಿ ನೀಡುತ್ತವೆ. ಆದರೆ, ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹೂಡಿಕೆ ಹೆಚ್ಚಾಗುತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ಹೀಗಾಗಿ ತಜ್ಯರ ಅಭಿಪ್ರಾಯ ಪಡೆದ ಬಳಿಕವಷ್ಟೇ ಇವುಗಳಲ್ಲಿ ಹೂಡಿಕೆ ಮಾಡಬೇಕು. ಮ್ಯೂಚವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಲು ನಿಮ್ಮ ಬಳಿ ಒಂದು ತಂತ್ರಗಾರಿಕೆ ಇರಬೇಕು ಎಂಬುದು ಇಲ್ಲಿ ವಿಶೇಷ.

ಕಡಿಮೆ ಅಪಾಯದ ಜೊತೆಗೆ ಉತ್ತಮ ಆದಾಯ
ಇದುವರೆಗಿನ ಸಮೀಕ್ಷೆಗಳು ಮೊಟ್ಟಮೊದಲ ಬಾರಿಗೆ ಮ್ಯೂಚವಲ್ ಫಂಡ್ (Mutual Fund) ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಲಾರ್ಜ್ ಕ್ಯಾಪ್ ಫಂಡ್ ಹಾಗೂ ಇಂಡೆಕ್ಸ್ ಫಂಡ್ ಗಳು ಉತ್ತಮ ಆಯ್ಕೆಯಾಗಿವೆ ಎಂಬುದನ್ನು ಹೇಳುತ್ತವೆ. ಏಕೆಂದರೆ ಇವುಗಳಲ್ಲಿನ ಹೂಡಿಕೆ ಕಡಿಮೆ ಅಪಾಯದ ಜೊತೆಗೆ ಉತ್ತಮ ಆದಾಯ ನೀಡುತ್ತದೆ. ಆದರೆ, ಮ್ಯೂಚವಲ್ ಫಂಡ್ ಗಳಲ್ಲಿ ಮಾಡಲಾಗಿರುವ ಹೂಡಿಕೆ ಅಪಾಯದಿಂದ ಕೂಡಿರುತ್ತದೆ ಎಂಬುದನ್ನು ಮರೆಯದಿರಿ. ಯಾವುದೇ ಮ್ಯೂಚವಲ್ ಫಂಡ್ ಅಪಾಯದಿಂದ ಹೊರತಾಗಿಲ್ಲ. ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಮೊಟ್ಟಮೊದಲ ಬಾರಿಗೆ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಹೊರಟವರಿಗೆ ಲಾರ್ಜ್ ಕ್ಯಾಪ್ ಮ್ಯೂಚವಲ್ ಫಂಡ್ ಉತ್ತಮ ಆಯ್ಕೆಗಳಾಗಿವೆ. ಈ ಫಂಡ್ ಗಳಲ್ಲಿ ಫಂಡ್ ಮ್ಯಾನೇಜರ್ ಗಳು ಟಾಪ್ 100 ಪಟ್ಟಿ ಮಾಡಲಾಗಿರುವ ಕಂಪನಿಗಳ ಶೇರುಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಈ ಷೇರುಗಳಲ್ಲಿ ಸಣ್ಣ ಕಾಗೂ ಮಧ್ಯಮ ಶೇರುಗಳ ಹೋಲಿಕೆಯಲ್ಲಿ ಅತಿ ಕಡಿಮೆ ಡಿವಿಯೆಶನ್ (deviation) ಕಾಣಲು ಸಿಗುತ್ತದೆ. ಹೀಗಾಗಿ ಲಾರ್ಜ್ ಕ್ಯಾಪ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಅಪಾಯ ಕೂಡ ಕಡಿಮೆ ಇರುತ್ತದೆ.

ಇದನ್ನೂ ಓದಿ- Big Relief: ಜೂನ್ ತಿಂಗಳಿನಲ್ಲಿ ಇಳಿಕೆಯಾದ ಹಣದುಬ್ಬರ, ಆರ್ಥಿಕತೆಯ ಕುರಿತೂ ಕೂಡ ಬಂತು ಗುಡ್ ನ್ಯೂಸ್

ಪ್ರಸ್ತುತ ಈ ಷೇರುಗಳಲ್ಲಿ ಹೂಡಿಕೆ ಉತ್ತಮ (Return Of Mutual Fund SIPs)
ಪ್ರಸ್ತುತ Mirae Asset Large Cap Direct Growth Fund, Axis Blue Chip Direct Growth Fund ಹಾಗೂ Canara Rebeco Bluechip Direct Growth Fund ಗಳಲ್ಲಿ ಹೂಡಿಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೆ ಡೈರೆಕ್ಟ್ ಗ್ರೋಥ್ ಪ್ಲ್ಯಾನ್ ನಲ್ಲಿ ಹೂಡಿಕೆ ಮಾಡಲು ಕೂಡ ಅವರು ಸಲಹೆಯನ್ನು ನೀಡುತ್ತಾರೆ. ಏಕೆಂದರೆ ಡೈರೆಕ್ಟ್ ಗ್ರೋಥ್ ಫಂಡ್ ನಲ್ಲಿ ಬ್ರೋಕರ್ ಪಾತ್ರ ಕಡಿಮೆ ಇರುತ್ತದೆ ಹಾಗೂ ಹೂಡಿಕೆ ದಾರರಿಗೆ ದೀರ್ಘಾವಧಿಯಲ್ಲಿ ಶೇ. 1 ರಿಂದ ಶೇ.1.5 ರಷ್ಟು ಹೆಚ್ಚುವರಿ ಮ್ಯೂಚವಲ್ ಫಂಡ್ ಬಡ್ಡಿದರ ಸಿಗುತ್ತದೆ. ಇದಲ್ಲದೆ ಒಂದು ವೇಳೆ ನಿಮ್ಮ ಬಳಿ ಏಕಕಾಲಕ್ಕೆ ಹಣ ಹೂಡಿಕೆ ಮಾಡಲು ಹಣ ಇಲ್ಲ ಎಂದ ಸಂದರ್ಭದಲ್ಲಿ SIP ಮೂಲಕ ಹಣ ಹೂಡಿಕೆ ಮಾಡಲು ಕೂಡ ತಜ್ಞರು ಸಲಹೆ ನೀಡುತ್ತಾರೆ. 

ಇದನ್ನೂ ಓದಿ-Cheap Gold - ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಮತ್ತೆ ಸಿಗುತ್ತಿದೆ, ಇಲ್ಲಿದೆ ಡೀಟೇಲ್ಸ್

ಇಂಡೆಕ್ಸ್ ಫಂಡ್ ಕೂಡ ಉತ್ತಮ ಆಯ್ಕೆಗಳಾಗಿವೆ
ಮೊದಲಬಾರಿಗೆ ಮ್ಯೂಚವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ (Mutual Fund Investor) ಇಂಡೆಕ್ಸ್ ಫಂಡ್ ಗಳು ಕೂಡ ಉತ್ತಮ ಆಯ್ಕೆಗಳಾಗಿವೆ. ಇವುಗಳಲ್ಲಿ ಅತಿ ಕಡಿಮೆ ಅಪಾಯ ಇರುತ್ತದೆ ಮತ್ತು ಇವುಗಳ ಪ್ರದರ್ಶನ ಇಂಡೆಕ್ಸ್ ಫಂಡ್ ಗಳಿಗೆ ಹೊಂದಿಕೊಂಡಂತೆ ಇರುತ್ತದೆ. ಮೊದಲ ಬಾರಿಗೆ ಮ್ಯೂಚವಲ್ ಫಂಡ್ ಹೂಗಳಲ್ಲಿ ಹೂಡಿಕೆ ಮಾಡುವವರು  UTI Nifty 50, HDFC Nifty 50 ಹಾಗೂ HDFC Sensex ಗಳಲ್ಲಿ ಹೂಡಿಕೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ವಿವಿಧ ರೀತಿಯ ಮ್ಯೂಚವಲ್ ಫಂಡ್ ಗಳ ಇಂಡೆಕ್ಸ್ ಫಂಡ್ ಗಳ ಮೇಲೆ ಬರುವ ವೆಚ್ಚದ ಮೇಲೂ ಕೂಡ ಗಮನ ಕೇಂದ್ರೀಕರಿಸಲು ಅವರು ಸಲಹೆ ನೀಡುತ್ತಾರೆ . ಏಕೆಂದರೆ ಈ ಫಂಡ್ ಗಳ ಮೇಲೆ ಬರುವ ಏಕ್ಸ್ಪೆನ್ಸ್ ಹೆಚ್ಚಾದಂತೆ ಆದಾಯ  ಕಡಿಮೆಯಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ- ಆರ್ಥಿಕವಾಗಿ ತೊಂದರೆಗೊಳಗಾದ ಗ್ರಾಹಕರಿಗಾಗಿ ಮನೆ ಮನೆ ರೇಶನ್ ಸ್ಕೀಮ್ ಆರಂಭಿಸಿದ IDFC First Bank

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News