JIO TVಯಿಂದ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್; ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ನಷ್ಟ!

Jio TV vs Cable TV industry: JIO TV ತನ್ನ OTT ಪ್ಲಾಟ್‌ಫಾರ್ಮ್‌ನಲ್ಲಿ live and linear contentಅನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕೇಬಲ್ ಟಿವಿ ಉದ್ಯಮದಲ್ಲಿ ಗಮನಾರ್ಹ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತವನ್ನು ಉಂಟುಮಾಡುತ್ತದೆ ಎಂದು ALCOA ಬೇಸರ ವ್ಯಕ್ತಪಡಿಸಿದೆ. 

Written by - Puttaraj K Alur | Last Updated : Aug 3, 2024, 06:56 PM IST
  • ಜಿಯೋ ಟಿವಿಯ ಮೂಲಕ ಕ್ರಿಕೆಟ್‌ ಪಂದ್ಯಗಳ ಲೈವ್‌ ಸ್ಟ್ರೀಮಿಂಗ್‌
  • ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ಆರ್ಥಿಕ ನಷ್ಟ!
  • ಜಿಯೋ ಟಿವಿ ವಿರುದ್ಧ TRAI ಕ್ರಮಕ್ಕೆ ALCOA ಒತ್ತಾಯ
JIO TVಯಿಂದ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್; ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ನಷ್ಟ! title=
TRAI ಕ್ರಮಕ್ಕೆ ALCOA ಒತ್ತಾಯ!

Jio TV vs Cable TV industry: ಜಿಯೋ ಟಿವಿಯ ಮೂಲಕ ಕ್ರಿಕೆಟ್‌ ಪಂದ್ಯಗಳ ಲೈವ್‌ ಸ್ಟ್ರೀಮಿಂಗ್‌ ಮಾಡುತ್ತಿರುವುದರಿಂದ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ನಷ್ಟ ಉಂಟಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಒಡೆತನದ ಭಾರತೀಯ ಸ್ಟ್ರೀಮಿಂಗ್ ಟೆಲಿವಿಷನ್ ಸೇವೆಯಾಗಿರುವ ಜಿಯೋ ಟಿವಿಯಲ್ಲಿ ಕ್ರಿಕೆಟ್‌ ಪಂದ್ಯಗಳ ಲೈವ್‌ ಸ್ಟ್ರೀಮಿಂಗ್‌ ನಡೆಸಲಾಗುತ್ತಿದೆ. ಕೋಟ್ಯಂತರ ಜನರು ಇಂದು ಜಿಯೋ ಟಿವಿಯ OTT ಪ್ಲಾಟ್‌ಫಾರ್ಮ್‌ನಲ್ಲಿ ಕ್ರಿಕೆಟ್‌ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸುತ್ತಿರುವುದರಿಂದ ಲೋಕಲ್‌ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ. 

ತಮ್ಮ ಕೇಬಲ್‌ ವ್ಯವಹಾರದ ಮೇಲೆ JIO TVಯ ಲೈವ್ ಸ್ಟ್ರೀಮಿಂಗ್‌ನ ಪ್ರಭಾವದ ಬಗ್ಗೆ ದೆಹಲಿಯ ಆಲ್ ಲೋಕಲ್ ಕೇಬಲ್ ಆಪರೇಟರ್ ಅಸೋಸಿಯೇಷನ್ ​​(ALCOA) ಕಳವಳ ವ್ಯಕ್ತಪಡಿಸಿದೆ. JIO TV ತನ್ನ OTT ಪ್ಲಾಟ್‌ಫಾರ್ಮ್‌ನಲ್ಲಿ live and linear contentಅನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕೇಬಲ್ ಟಿವಿ ಉದ್ಯಮದಲ್ಲಿ ದೊಡ್ಡ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತಗಳು ಉಂಟಾಗುತ್ತಿವೆ ಎಂದು ಆರೋಪಿಸಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಅಧ್ಯಕ್ಷರಿಗೆ ಪತ್ರ ಬರೆದಿರುವ ALCOA, JIO TVಯ ಮಾಡುತ್ತಿರುವ ಲೈವ್‌ ಸ್ಟ್ರೀಮಿಂಗ್‌ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಅನುಗುಣವಾಗಿಲ್ಲವೆಂದು ದೂರಿದೆ. ALCOA ಪ್ರಕಾರ, ಲೈವ್ contentಅನ್ನು ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (MSOs), ಹೆಡೆಂಡ್ ಇನ್ ದಿ ಸ್ಕೈ (HITS) ಆಪರೇಟರ್‌ಗಳು, ಡೈರೆಕ್ಟ್-ಟು-ಹೋಮ್ (DTH) ಪ್ಲೇಯರ್‌ಗಳು ಮತ್ತು IPTV ಪೂರೈಕೆದಾರರು ಮಾತ್ರ ಪ್ರಸಾರ ಮಾಡಬೇಕು. JIO TVಯಂತಹ OTT ಪ್ಲಾಟ್‌ಫಾರ್ಮ್‌ಗಳು 1995ರ ಕೇಬಲ್ ಕಾಯಿದೆಗೆ ವಿರುದ್ಧವಾಗಿರುವ ಕಾರಣ linear contentಅನ್ನು ಸ್ಟ್ರೀಮ್ ಮಾಡಬಾರದು ಎಂದು ತಿಳಿಸಿದೆ.

ಇದನ್ನೂ ಓದಿ: ಮೋದಿ ಸರ್ಕಾರದ ಈ ಯೋಜನೆಯಿಂದ ಲಕ್ಷಗಟ್ಟಲೆ ಆದಾಯ.. ಹೀಗೆ ಪಡೆಯಿರಿ!

2018ರಲ್ಲಿ ಭಾರತದಲ್ಲಿ ಟೆಲಿವಿಷನ್ ಹೊಂದಿರುವ 197 ಮಿಲಿಯನ್ ಮನೆಗಳಿದ್ದವು, ಇದು 2020ರ ವೇಳೆಗೆ 210 ಮಿಲಿಯನ್‌ಗೆ ಏರಿದೆ ಎಂದು ALCOA ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಈ ಬೆಳವಣಿಗೆಯ ಹೊರತಾಗಿಯೂ, ಕೇಬಲ್ ಟಿವಿ ಸೇವೆಗಳನ್ನು ಬಳಸುವ ಕುಟುಂಬಗಳು 2018ರಲ್ಲಿ 120 ಮಿಲಿಯನ್‌ನಿಂದ 2020ರಲ್ಲಿ 90 ಮಿಲಿಯನ್‌ಗೆ ಇಳಿದಿದೆ ಮತ್ತು ಸಂಖ್ಯೆಗಳು ಕುಸಿಯುತ್ತಲೇ ಇವೆ ಎಂದು ಬೇಸರ ವ್ಯಕ್ತಪಡಿಸಿದೆ. 

ಸ್ಟಾರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಮತ್ತು INDIACAST ಸಹ ತಮ್ಮ OTT ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್ ಮತ್ತು JIO ಟಿವಿಯಲ್ಲಿ linear contentಅನ್ನು ಸ್ಟ್ರೀಮಿಂಗ್ ಮಾಡುತ್ತಿವೆ. ಇದರಿಂದ ಕೋಟ್ಯಂತರ ವೀಕ್ಷಕರನ್ನು ಕೇಬಲ್ ಟಿವಿಯಿಂದ ದೂರವಿಡುತ್ತಿದೆ. ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಯ ಜನರು OTT ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಸಮಂಜಸ ಮತ್ತು ಉತ್ತಮ ಆಯ್ಕೆಯನ್ನಾಗಿ ಪರಿಗಣಿಸಿದ್ದಾರೆ. ಮೊಬೈಲ್‌ನಲ್ಲಿಯೇ ಕೋಟ್ಯಂತರ ಜನರು ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸುತ್ತಿರುವುದರಿಂದ ಕೇಬಲ್‌ ವ್ಯವಹಾರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟಾಗುತ್ತಿದೆ ಅಂತಾ ALCOA ತಿಳಿಸಿದೆ. 

OTT ಪ್ಲಾಟ್‌ಫಾರ್ಮ್‌ಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರಮುಖ ಚಾನಲ್‌ಗಳನ್ನು ಒದಗಿಸುತ್ತವೆ. ಇದರಿಂದ ಕೇಬಲ್ ಟಿವಿ ಉದ್ಯಮಕ್ಕೆ ಅನ್ಯಾಯವಾಗುತ್ತಿದೆ. ಈ ವೇದಿಕೆಗಳ ಮೂಲಕ ಮುಕ್ತವಾಗಿ ಹರಿಯುವ ಅನಿಯಂತ್ರಿತ ವಿಷಯದ ಋಣಾತ್ಮಕ ಸಾಮಾಜಿಕ ಪರಿಣಾಮದ ಬಗ್ಗೆ ALCOA ಒತ್ತಿಹೇಳಿದೆ. ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಕೋಟ್ಯಂತರ ಜನರಿಗೆ ಲೈವ್‌ ಸ್ಟ್ರೀಮಿಂಗ್‌ ನೀಡುತ್ತಿರುವ ಜಿಯೋ ಟಿವಿಯಿಂದ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ಮೊತ್ತದ ನಷ್ಟವುಂಟಾಗುತ್ತಿದೆ ಅಂತಾ ALCOA ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಕೇಬಲ್‌ ಆಪರೇಟರ್‌ಗಳನ್ನು ಉಳಿಸುವ ನಿಟ್ಟಿನಲ್ಲಿ ಈ ರೀತಿಯ ಲೈವ್‌ ಸ್ಟ್ರೀಮಿಂಗ್‌ ಮಾಡುವುದಕ್ಕೆ TRAI ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಒತ್ತಾಯಿಸಿದೆ.  

ಇದನ್ನೂ ಓದಿ: Gold Price Today: ಮದುವೆ ಸೀಸನ್‌ಗೂ ಮುನ್ನ ಆಭರಣ ಪ್ರಿಯರಿಗೆ ಬಿಗ್‌ ಶಾಕ್‌..ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News