Jio ಗ್ರಾಹಕರೇ ನಿಮಗೆ 4G ಇಂಟರ್ನೆಟ್ ಅವಶ್ಯಕತೆ ಇದೆಯೇ ಹಾಗಿದ್ರೆ ಈ ಪ್ಲಾನ್ ರಿಚಾರ್ಜ್ ಮಾಡಿಸಿ!

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ಮೊಬೈಲ್ ಇಂಟರ್ನೆಟ್ ಡೇಟಾದ ಒಂದು ಉತ್ತಮ ಯೋಜನೆ

Last Updated : Apr 28, 2021, 05:35 PM IST
  • ಕೊರೋನಾದಿಂದ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.
  • ಉತ್ತಮ ಮೊಬೈಲ್ ಡೇಟಾ ಯೋಜನೆಯ ಬಗ್ಗೆ ಮಾಹಿತಿ
  • ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ಮೊಬೈಲ್ ಇಂಟರ್ನೆಟ್ ಡೇಟಾದ ಒಂದು ಉತ್ತಮ ಯೋಜನೆ
Jio ಗ್ರಾಹಕರೇ ನಿಮಗೆ 4G ಇಂಟರ್ನೆಟ್ ಅವಶ್ಯಕತೆ ಇದೆಯೇ ಹಾಗಿದ್ರೆ ಈ ಪ್ಲಾನ್ ರಿಚಾರ್ಜ್ ಮಾಡಿಸಿ! title=

ಕೊರೋನಾದಿಂದ ಲಾಕ್‌ಡೌನ್‌ನಂತಹ ನಿರ್ಬಂಧಗಳು ಅನೇಕ ರಾಜ್ಯಗಳಲ್ಲಿ ಜಾರಿ ಮಾಡಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ (WFH). ಶಾಲೆ ಮತ್ತು ಕಾಲೇಜುಗಳನ್ನು ಸಹ ಮುಚ್ಚಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಮನೆಯಲ್ಲಿದ್ದಾರೆ ಮತ್ತು ಮೊಬೈಲ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. 

ಇಂದು ನಾವು ನಿಮಗೆ ಉತ್ತಮ ಮೊಬೈಲ್ ಡೇಟಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ಮೊಬೈಲ್ ಇಂಟರ್ನೆಟ್(Jio Mobile Internet) ಡೇಟಾದ ಒಂದು ಉತ್ತಮ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ, ನೀವು ಕೇವಲ ಒಂದು ರೂಪಾಯಿ ಹೆಚ್ಚು ಖರ್ಚು ಮಾಡುವ ಮೂಲಕ 56 ಜಿಬಿ 4 ಜಿ ಇಂಟರ್ನೆಟ್ ಮತ್ತು 28 ದಿನಗಳ ವ್ಯಾಲಿಡಿಟಿ ಕೂಡ ಇದೆ.

ಇದನ್ನೂ ಓದಿ : ಪೋಸ್ಟ್ ಆಫೀಸಿನ ಈ ಸ್ಕೀಮ್ ಗಳಲ್ಲಿ ಹಣ ಡಬಲ್ ಆಗಲಿದೆ

ಜಿಯೋ 598 ಮತ್ತು 599 ರೂ. ಪ್ರಿಪೇಯ್ಡ್ ಯೋಜನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಕೇವಲ ಒಂದು ರೂಪಾಯಿ ಖರ್ಚು ಮಾಡಿದರೆ, ನಿಮಗೆ 56 ಜಿಬಿ 4 ಜಿ ಇಂಟರ್ನೆಟ್ ಸಿಗುತ್ತದೆ. ಜಿಯೋನ 598 ರೂ ಪ್ರಿಪೇಯ್ಡ್(Prepaid Plan) ಯೋಜನೆಯ ಅವಧಿ 56 ದಿನಗಳು. ಈ ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಮತ್ತು ಯಾವುದೇ ಮೊಬೈಲ್‌ನಲ್ಲಿ ಉಚಿತ ಕರೆ ಸೌಲಭ್ಯ. ಇದರೊಂದಿಗೆ ಕಂಪನಿಯು ಗ್ರಾಹಕರಿಗೆ 100 ಉಚಿತ ಎಸ್‌ಎಂಎಸ್  ಸೌಲಭ್ಯವನ್ನೂ ಒದಗಿಸುತ್ತಿದೆ.

ಇದನ್ನೂ ಓದಿ : PF Balance Transfer: ಹಳೆಯ ಕಂಪನಿಯ PF Balance ಹೊಸ ಖಾತೆಗೆ ವರ್ಗಾಯಿಸಲು ಈ ಸಿಂಪಲ್ ಕೆಲಸ ಮಾಡಿ

ನೀವು ಕೇವಲ 1 ರೂಪಾಯಿ ಹೆಚ್ಚು ಅಂದರೆ 599 ಪ್ಲಾನ್ ರಿಚಾರ್ಜ್ ಮಾಡಿಸಿದರೆ. ನಿಮ್ಮಗೆ  84 ದಿನಗಳವರೆಗೆ  ವ್ಯಾಲಿಡಿಟಿ ನೀಡಲಾಗುತ್ತಿದೆ. ಅಲ್ಲದೆ, ಪ್ರತಿದಿನ ನೀವು 2 ಜಿಬಿ ಇಂಟರ್ನೆಟ್ ಡೇಟಾ(Internet Data) ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಈ ಯೋಜನೆಯೊಂದಿಗೆ 100 ಉಚಿತ ಎಸ್‌ಎಂಎಸ್ ಸಹ ಲಭ್ಯವಿದೆ. ಆದ್ದರಿಂದ ಕೇವಲ ಒಂದು ರೂಪಾಯಿ ಹೆಚ್ಚು ಖರ್ಚು ಮಾಡುವ ಮೂಲಕ, ನೀವು 28 ದಿನಗಳ ಅವಧಿ ಮತ್ತು 56 ಜಿಬಿ ಹೆಚ್ಚಿನ ಮೊಬೈಲ್ ಡೇಟಾವನ್ನು ಆನಂದಿಸಬಹುದು.

ಇದನ್ನೂ ಓದಿ : ಅಬ್ಬರಿಸುತ್ತಲೇ ಇದೆ ಕೋವಿಡ್ : ಈ ಬಾರಿಯೂ ಸಾಲ ಮೊರಟೋರಿಯಂ ಆಗಲಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News