ಜಿಯೋ ಬಳಕೆದಾರರಿಗೆ ಸಿಹಿಸುದ್ದಿ: ದಿನಕ್ಕೆ 1GB ಡೇಟಾ, ಉಚಿತ ಕರೆ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಿರಿ

ರಿಲಯನ್ಸ್ ಜಿಯೋ 200 ರೂ.ಗಿಂತ ಕಡಿಮೆಯಿರುವ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಇದರಲ್ಲಿ ಪ್ರತಿದಿನ 1 GB ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರೊಂದಿಗೆ ಇನ್ನೂ ಅನೇಕ ಪ್ರಯೋಜನಗಳು ಲಭ್ಯವಿವೆ. ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Feb 9, 2022, 02:19 PM IST
  • ರಿಲಯನ್ಸ್ ಜಿಯೋ ಪರಿಚಯಿಸಿದೆ ಗ್ರಾಹಕರಿಗಾಗಿ ಅಗ್ಗದ ಯೋಜನೆ
  • ಕೇವಲ 186 ರೂ.ಗೆ ಪ್ರತಿದಿನ 1GB ಡೇಟಾ & ಅನಿಯಮಿತ ಕರೆ ಸೌಲಭ್ಯ
  • 28 ದಿನಗಳ ವ್ಯಾಲಿಟಿಡಿಯಲ್ಲಿ ಇನ್ನೂ ಅನೇಕ ಸೌಲಭ್ಯಗಳು ಲಭ್ಯ
ಜಿಯೋ ಬಳಕೆದಾರರಿಗೆ ಸಿಹಿಸುದ್ದಿ: ದಿನಕ್ಕೆ 1GB ಡೇಟಾ, ಉಚಿತ ಕರೆ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಿರಿ  title=
ರಿಲಯನ್ಸ್ ಜಿಯೋದ 186 ರೂ. ಪ್ಲಾನ್

ನವದೆಹಲಿ: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನ(Jio Bumper Offer)ಗಳನ್ನು ನೀಡುವ ಅನೇಕ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ.  ಅನೇಕ ಅಗ್ಗದ ಯೋಜನೆಗಳಲ್ಲಿ ನೀವು ಬೊಂಬಾಟ್ ಸೌಲಭ್ಯ(Reliance Jio Recharge Plans)ಗಳನ್ನು ಪಡೆಯಬಹುದು. ಇದರಲ್ಲಿ ಹೆಚ್ಚಿನ ಡೇಟಾ ಮತ್ತು ಅನಿಯಮಿತ ಕರೆ ಲಭ್ಯವಿದೆ. ಇಂದು ನಾವು ನಿಮಗೆ 200 ರೂ.ಗಿಂತ ಕಡಿಮೆ ಬೆಲೆಯ Jio ಪ್ಲಾನ್(Jio Plan Under Rs 200) ಬಗ್ಗೆ ಹೇಳಲಿದ್ದೇವೆ, ಇದರಲ್ಲಿ ನಿಮಗೆ ದಿನಕ್ಕೆ 1 GB ಡೇಟಾ, ಅನಿಯಮಿತ ಕರೆ ಮತ್ತು ಅನೇಕ ಸೌಲಭ್ಯಗಳು ಲಭ್ಯವಿವೆ. ನೀವು ಕಡಿಮೆ ವೆಚ್ಚದ ಮಾಸಿಕ ಯೋಜನೆಯನ್ನು ಹುಡುಕುತ್ತಿದ್ದರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: LIC ಈ ಯೋಜನೆಯಲ್ಲಿ ₹121 ಠೇವಣಿ ಮಾಡಿ! ಮಗಳ ಮದುವೆಗೆ ಪಡೆಯಿರಿ ₹27 ಲಕ್ಷ

ರಿಲಯನ್ಸ್ ಜಿಯೋದ 186 ರೂ. ಪ್ಲಾನ್

JioPhoneನ 186 ರೂ. ಯೋಜನೆ(JioPhone 186 Plan)ಯಲ್ಲಿ ಬಳಕೆದಾರರು 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತಾರೆ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಲಭ್ಯವಿರುತ್ತದೆ. ಅಂದರೆ ಯೋಜನೆಯಲ್ಲಿ ಒಟ್ಟು 28 GB ಡೇಟಾವನ್ನು ನೀಡಲಾಗುತ್ತದೆ. ದಿನದ ಡೇಟಾದ ಅಂತ್ಯದ ನಂತರ ಇಂಟರ್ನೆಟ್ ವೇಗವು @ 64 Kbps ಗೆ ಇಳಿಯುತ್ತದೆ. ಅಂದರೆ ದೈನಂದಿನ ಡೇಟಾ ಮುಗಿದ ನಂತರವೂ ನೀವು ಇಂಟರ್ನೆಟ್ ಬಳಸಬಹುದು.

ಉಚಿತ ಕರೆ ಮತ್ತು ದಿನಕ್ಕೆ 100 SMS

ಡೇಟಾದ ಹೊರತಾಗಿ 186 ರೂ. ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆ(Jio Unlimited Plan) ಮಾಡುವ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ಕರೆ ಮಾಡಬಹುದು. ಇದರೊಂದಿಗೆ ಬಳಕೆದಾರರು ದಿನಕ್ಕೆ 100 SMS ಅನ್ನು ಪಡೆಯುತ್ತಾರೆ. ಇದಲ್ಲದೆ ಜಿಯೋ ಮೂವಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಯೋಜನೆಯಲ್ಲಿ ನೀಡಲಾಗಿದೆ.

ಇದನ್ನೂ ಓದಿ: ರೈತರೇ ಸರ್ಕಾರದ ಈ ವಿಶೇಷ ಯೋಜನೆ ಅಡಿ : ಗೊಬ್ಬರ, ಬೀಜ ಮತ್ತು ಟ್ರ್ಯಾಕ್ಟರ್‌ಗಳನ್ನು ಅರ್ಧ ಬೆಲೆಗೆ ಖರೀದಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News