LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ತಿಂಗಳಿಗೆ ರೂ.233 ಹೂಡಿಕೆ ಮಾಡಿ 17 ಲಕ್ಷ ರೂ. ಸಂಪಾದಿಸಿ

LIC Jeevan Labh Plan: ಎಲ್ಐಸಿ ಜೀವನ್ ಲಾಭ್ ಯೋಜನೆ ಒಂದು ಅದ್ಭುತ ಯೋಜನೆಯಾಗಿದೆ. ಇದರಲ್ಲಿ, ನೀವು ಪ್ರತಿ ತಿಂಗಳು ಕೇವಲ 233 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 17 ಲಕ್ಷ ರೂ.ಗಳ ಬೃಹತ್ ಮೊತ್ತವನ್ನು ಸುಲಭವಾಗಿ ಪಡೆಯಬಹುದು. ಈ ಸೂಪರ್‌ಹಿಟ್ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ  

Written by - Nitin Tabib | Last Updated : Apr 10, 2022, 09:09 PM IST
  • ಎಲ್ಐಸಿ ಜೀವನ್ ಲಾಭ್ ಪಾಲಿಸಿಯು ಒಂದು ಉತ್ತಮ ಯೋಜನೆಯಾಗಿದೆ
  • ಇದರಲ್ಲಿ ನೀವು ಕಡಿಮೆ ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭ ಗಳಿಸಬಹುದು.
  • ಇದರಲ್ಲಿ, ಪಾಲಿಸಿದಾರರು ಮರಣದ ಲಾಭವನ್ನು ಸಹ ಪಡೆಯುತ್ತಾರೆ
LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ತಿಂಗಳಿಗೆ ರೂ.233 ಹೂಡಿಕೆ ಮಾಡಿ 17 ಲಕ್ಷ ರೂ. ಸಂಪಾದಿಸಿ title=
LIC Jeevan Labh Plan

ನವದೆಹಲಿ: ಕಾಲಕಾಲಕ್ಕೆ ಎಲ್‌ಐಸಿ ತನ್ನ ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ನೀಡುತ್ತಲೇ ಇರುತ್ತದೆ. ಎಲ್ಐಸಿ ಪ್ರತಿಯೊಂದು ವರ್ಗದ ಜನರಿಗೆ ಯೋಜನೆಗಳನ್ನು ರೂಪಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸುರಕ್ಷಿತ ಹೂಡಿಕೆಯೊಂದಿಗೆ ಮಿಲಿಯನೇರ್ ಆಗಲು ಬಯಸಿದರೆ, ಎಲ್ಐಸಿಯ ಪಾಲಿಸಿ ನಿಮಗೆ ತುಂಬಾ ಉಪಯುಕ್ತವಾಗಿದೆ. LIC ಜೀವನ್ ಲಾಭ್ ಪಾಲಿಸಿಯು ಅಂತಹ ಒಂದು ಪಾಲಿಸಿಯಾಗಿದ್ದು, ಇದರಲ್ಲಿ ನೀವು ಪ್ರತಿ ತಿಂಗಳು ಕೇವಲ 233 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 17 ಲಕ್ಷಗಳ ಭಾರಿ ಮೊತ್ತವನ್ನು ಪಡೆಯಬಹುದು. 

ಎಲ್ಐಸಿ ಜೀವನ್ ಲಾಭ ಯೋಜನೆ
ಇದು ಜೀವನ್ ಲಾಭ್ (LIC ಜೀವನ್ ಲಾಭ್, 936) ಹೆಸರಿನ ನಾನ್ ಲಿಂಕ್ಡ್ ಪಾಲಿಸಿಯಾಗಿದೆ. ಈ ಕಾರಣದಿಂದಾಗಿ, ಈ ಪಾಲಸಿ ಷೇರು ಮಾರುಕಟ್ಟೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಮಾರುಕಟ್ಟೆ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ, ಅದು ನಿಮ್ಮ ಹಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ, ಈ ಯೋಜನೆಯಲ್ಲಿ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ. ಇದು ಸೀಮಿತ ಪ್ರೀಮಿಯಂ ಯೋಜನೆಯಾಗಿದೆ. ಮಕ್ಕಳ ಮದುವೆ, ವಿದ್ಯಾಭ್ಯಾಸ, ಆಸ್ತಿ ಖರೀದಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ-Ration Card: ಪಡಿತರ ಚೀಟಿ ಧಾರಕರಿಗೊಂದು ಮಹತ್ವದ ಮಾಹಿತಿ ಪ್ರಕಟ, ತಪ್ಪದೆ ತಿಳಿದುಕೊಳ್ಳಿ

ಪಾಲಿಸಿ ವೈಶಿಷ್ಟ್ಯಗಳು
>> LIC ಜೀವನ್ ಲಾಭ್ ಯೋಜನೆ ವೈಶಿಷ್ಟ್ಯ ಎಂದರೆ ಈ ಪಾಲಸಿ ಲಾಭ ಮತ್ತು ರಕ್ಷಣೆ ಎರಡನ್ನೂ ನೀಡುತ್ತದೆ.
>> 8 ರಿಂದ 59 ವರ್ಷ ವಯಸ್ಸಿನ ಜನರು ಈ ಪಾಲಿಸಿಯನ್ನು ಸುಲಭವಾಗಿ ತೆಗೆದುಕೊಳ್ಳಬಹುದು.
>> ಪಾಲಿಸಿ ಅವಧಿ 16 ರಿಂದ 25 ವರ್ಷಗಳವರೆಗೆ ಇರಲಿದೆ.
>> ಕನಿಷ್ಠ 2 ಲಕ್ಷ ವಿಮಾ ಮೊತ್ತವನ್ನು ತೆಗೆದುಕೊಳ್ಳಬೇಕು.
>> ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.
>> 3 ವರ್ಷಗಳ ಪ್ರೀಮಿಯಂ ಪಾವತಿಯ ಮೇಲೆ ಸಾಲ ಸೌಲಭ್ಯವೂ ಲಭ್ಯವಿದೆ.
>> ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿ ಮತ್ತು ಪಾಲಿಸಿದಾರನ ಮರಣದ ಮೇಲೆ, ನಾಮಿನಿಯು ವಿಮಾ ಮೊತ್ತ ಮತ್ತು ಬೋನಸ್‌ನ ಪ್ರಯೋಜನಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ-IT Firm: ತನ್ನ ನೌಕರರಿಗೆ ಕೋಟ್ಯಾಂತರ ಮೌಲ್ಯದ ಕಾರ್ ಗಿಫ್ಟ್ ನೀಡಿದ IT ಕಂಪನಿ

ನಾಮಿನಿಗೆ ಪಾಲಸಿದಾರರ ಮರಣದ ಲಾಭ ಸಿಗಲಿದೆ
ಪಾಲಿಸಿದಾರನು ಪಾಲಿಸಿಯ ಅವಧಿಯಲ್ಲಿ ಮರಣಹೊಂದಿದರೆ ಮತ್ತು ಮರಣದ ತನಕ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದ್ದರೆ, ಅವನ ನಾಮಿನಿಯು ಡೆತ್ ಬೆನಿಫಿಟ್ ಆಗಿ ಡೆತ್ ಸಮ್ ಅಶ್ಯೂರ್ಡ್, ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಫೈನಲ್ ಅಡಿಷನಲ್ ಬೋನಸ್ ಪಡೆಯುತ್ತಾರೆ. ಅಂದರೆ, ನಾಮಿನಿ ಹೆಚ್ಚುವರಿ ವಿಮಾ ಮೊತ್ತವನ್ನು ಪಡೆಯುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News