MG Comet Launch: MG ಮೋಟಾರ್ಸ್ ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ MG ಕಾಮೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಇರ ಬೆಲೆಯನ್ನು 7.98 ಲಕ್ಷ ರೂ. ಎಂದು ನಿಗದಿಪಡಿಸಿದೆ. ಈ ಬೆಲೆಯೊಂದಿಗೆ, ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎನಿಸಿಕೊಂಡಿದೆ.
ಇದನ್ನೂ ಓದಿ: Big Update: ಇಂದಿನಿಂದ 4 ಸ್ಮಾರ್ಟ್ ಫೋನ್ ಗಳಲ್ಲಿ ಸಿಂಗಲ್ ವಾಟ್ಸ್ ಆಪ್ ಅಕೌಂಟ್ ನಿರ್ವಹಿಸಿ, ಝಕರ್ಬರ್ಗ್ ಘೋಷಣೆ
ಈ ಕಾರು ಎರಡು ವೇರಿಯೆಂಟ್’ಗಳಲ್ಲಿ ಮಾರಾಟವಾಗಲಿದೆ. ಮೇ 15 ರಿಂದ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ. 2 ಬಾಗಿಲುಗಳ 4 ಸೀಟರ್ ಕಾರು ಇದಾಗಿದೆ. ಇದು ತುಂಬಾ ಕಾಂಪ್ಯಾಕ್ಟ್ ಗಾತ್ರದಲ್ಲಿ ಬಂದಿದೆ. ಇದರ ಉದ್ದವು 3 ಮೀಟರ್ಗಿಂತ ಕಡಿಮೆಯಿದೆ. ಇನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ, 230 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಮೂಲಕ ಒಂದು ತಿಂಗಳವರೆಗೆ ಚಲಾಯಿಸಲು ತಗುಲುವ ವೆಚ್ಚ ಕೇವಲ 599 ರೂ.
ಈ ಕಾರು ತನ್ನ ವಿಶಿಷ್ಟ ಮತ್ತು ಕಾಂಪ್ಯಾಕ್ಟ್ ವಿನ್ಯಾಸಕ್ಕಾಗಿ ಫೇಮಸ್ ಆಗಿದೆ. ಇದು ಸ್ಪ್ಲಿಟ್ ಹೆಡ್ಲೈಟ್’ಗಳು, ಪೂರ್ಣ LED ಲೈಟ್ಸ್, ಸ್ಟೈಲಿಶ್ ವೀಲ್, ಟಾಲ್ C-ಪಿಲ್ಲರ್ ಮತ್ತು 2 ಬಾಗಿಲುಗಳೊಂದಿಗೆ ಡ್ಯುಯಲ್-ಟೋನ್ ಪೇಂಟ್ ವೈಶಿಷ್ಟ್ಯ ಹೊಂದಿದೆ. MG ಕಾಮೆಟ್ 2,974 mm ಉದ್ದ, 1,505 mm ಅಗಲ ಮತ್ತು 1,631 mm ಎತ್ತರವನ್ನು 2,010 mm ವ್ಹೀಲ್ಬೇಸ್ನೊಂದಿಗೆ ಬಂದಿದೆ.
ಈ ಕಾರಿನಲ್ಲಿ 10.25 ಇಂಚಿನ ಎರಡು ಸ್ಕ್ರೀನ್’ಗಳನ್ನು ನೀಡಲಾಗಿದೆ. ಇದು 2-ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದ್ದು, ಇದರ ನಿಯಂತ್ರಣ ಬಟನ್ಗಳು Apple iPod ಮಾದರಿಯಲ್ಲಿದೆ. ವೈಶಿಷ್ಟ್ಯಗಳ ಪಟ್ಟಿಯಲ್ಲಿ ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ಡಿಜಿಟಲ್ ಕೀ, ಪವರ್ ವಿಂಡೋಸ್, ಗ್ರೇ ಇಂಟೀರಿಯರ್ ಥೀಮ್ ಮತ್ತು ಲೆದರ್ ಲೇಯರ್ಡ್ ಸ್ಟೀರಿಂಗ್ ವೀಲ್ ಸೇರಿವೆ.
ಇದನ್ನೂ ಓದಿ: Apple iPhone 14: ಕೇವಲ 3 ಸಾವಿರ ರೂ.ಗೆ iPhone 14 ಖರೀದಿಸಿ!
ಬ್ಯಾಟರಿ ಮತ್ತು ಶ್ರೇಣಿ
MG ಕಾಮೆಟ್ EV 17.3 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಸಾಮಾನ್ಯ ಹೋಮ್ ಸಾಕೆಟ್ ಮೂಲಕ 0-100% ರಿಂದ ಚಾರ್ಜ್ ಮಾಡಲು ಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. MG ಕಾರಿನಲ್ಲಿ 3.3 kW ಚಾರ್ಜರ್ ಹೊಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇದರ ವ್ಯಾಪ್ತಿಯು 230 ಕಿಲೋಮೀಟರ್. ಎಲೆಕ್ಟ್ರಿಕ್ ಮೋಟಾರ್ 42 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 110 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.