Annual Expenditure Survey: ಬದಲಾಗುತ್ತಿದೆ ಭಾರತ, ಹಣ ಖರ್ಚು ಮಾಡುವ ವಿಷಯದಲ್ಲಿ ಯಾವ ರಾಜ್ಯದ ಜನ ಟಾಪ್ ನಲ್ಲಿದ್ದಾರೆ ಗೊತ್ತಾ?

Household Consumption Expenditure Sruvey 2022-23: ಭಾರತೀಯರು ವಿವಿಧ ವಿಷಯಗಳಲ್ಲಿ ಮಾಡುತ್ತಿರುವ ಖರ್ಚಿಗೆ ಸಂಬಂಧಿಸಿದಂತೆ ಸರ್ಕಾರ ಒಂದು ಸಮೀಕ್ಷೆಯನ್ನು ನಡೆಸಿದ್ದು, ಸಮೀಕ್ಷೆಯಲ್ಲಿ ಕುತೂಹಲಕಾರಿ ಅಂಶಗಳು ಬಹಿರಂಗಗೊಂಡಿವೆ. ಈ ಸಮೀಕ್ಷೆಯ ಪ್ರಕಾರ ಭಾರತೀಯ ಜನರ ವೆಚ್ಚದ ಮಾದರಿಯಲ್ಲಿ ಬದಲಾವಣೆಯನ್ನು ಗಮನಿಸಲಾಗಿತ್ತು, ಭಾರತೀಯರ ಖರ್ಚು ಸಾಮರ್ಥ್ಯ ಹೆಚ್ಚಾಗಿದೆ ಎನ್ನಲಾಗಿದೆ. (Business News In Kannada)  

Written by - Nitin Tabib | Last Updated : Feb 26, 2024, 04:33 PM IST
  • ಭಾರತ ಸರ್ಕಾರದ ಸಚಿವಾಲಯ ಈ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯ ಪ್ರಕಾರ,
  • ಭಾರತದ ಜನರು ಆಹಾರ ಮತ್ತು ಪಾನೀಯಗಳಿಗಿಂತ ಹೆಚ್ಚಾಗಿ ಬೇರೆ ವಿಷಯಗಳಲ್ಲಿ ಹಣ ಜಾಸ್ತಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.
  • ದೇಶದ ಜನರು ಆಹಾರ ಮತ್ತು ಪಾನೀಯಗಳಿಗಿಂತ ಬಟ್ಟೆ, ದೂರದರ್ಶನ ಮತ್ತು ಮನರಂಜನೆಯಂತಹ ಜೀವನಶೈಲಿಯ ವಿಷಯಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂಬುದು ಗೊತ್ತಾದರೆ ನೀವೂ ಕೂಡ ನಿಬ್ಬೆರಗಾಗುವಿರಿ.
Annual Expenditure Survey: ಬದಲಾಗುತ್ತಿದೆ ಭಾರತ, ಹಣ ಖರ್ಚು ಮಾಡುವ ವಿಷಯದಲ್ಲಿ ಯಾವ ರಾಜ್ಯದ ಜನ ಟಾಪ್ ನಲ್ಲಿದ್ದಾರೆ ಗೊತ್ತಾ?  title=

Average Annual Expinditure Of Indians 2022-23: ಭಾರತೀಯರು ವಿವಿಧ ವಿಷಯಗಳಲ್ಲಿ ಮಾಡುತ್ತಿರುವ ಖರ್ಚಿಗೆ ಸಂಬಂಧಿಸಿದಂತೆ ಸರ್ಕಾರ ಒಂದು ಸಮೀಕ್ಷೆಯನ್ನು ನಡೆಸಿದ್ದು, ಸಮೀಕ್ಷೆಯಲ್ಲಿ ಕುತೂಹಲಕಾರಿ ಅಂಶಗಳು ಬಹಿರಂಗಗೊಂಡಿವೆ. ಈ ಸಮೀಕ್ಷೆಯ ಪ್ರಕಾರ ಭಾರತೀಯ ಜನರ ವೆಚ್ಚದ ಮಾದರಿಯಲ್ಲಿ ಬದಲಾವಣೆಯನ್ನು ಗಮನಿಸಲಾಗಿತ್ತು, ಭಾರತೀಯರ ಖರ್ಚು ಸಾಮರ್ಥ್ಯ ಹೆಚ್ಚಾಗಿದೆ ಎನ್ನಲಾಗಿದೆ. ಕಳೆದ 11 ವರ್ಷಗಳಲ್ಲಿ ಭಾರತೀಯರ ಮನೆಯ ಖರ್ಚು ದುಪ್ಪಟ್ಟಾಗಿದೆ. ಜನರು ಆಹಾರ ಮತ್ತು ಪಾನೀಯಗಳಿಗಿಂತ ಇತರ ವಿಷಯಗಳಲ್ಲಿ ಜನ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಸಮೀಕ್ಷೆಯಲ್ಲಿ ವೆಚ್ಚದ ವಿಷಯದಲ್ಲಿ ಯಾವ ರಾಜ್ಯ ಯಾವ ನಗರದ ಜನ ಅಗ್ರಸ್ಥಾನದಲ್ಲಿದ್ದಾರೆ ಎಂಬುದನ್ನೂ ಕೂಡ ಹೇಳಲಾಗಿದ್ದು. ದೆಹಲಿ-ಮುಂಬೈನಂತಹ ನಗರಗಳಲ್ಲಿ ವಾಸಿಸುವ ಜನರು ಹಣ ಖರ್ಚು ಮಾಡುವ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂಬ ಅನಿಸಿಕೆ ನಿಮ್ಮದೂ ಆಗಿದ್ದರೆ, ನೀವು ಕೂಡ ಖಂಡಿತ ಈ ಸಮೀಕ್ಷೆಯನ್ನು ಒಮ್ಮೆ ಓದಲೇಬೇಕು. ಬನ್ನಿ ಸಮೀಕ್ಷೆ ಬಹಿರಂಗಪಡಿಸಿದ ಆ ಸಂಗತಿಗಳು ಯಾವುವು ತಿಳಿದುಕೊಳ್ಳೋಣ. (Business News In Kannada)

ಜನರು ಆಹಾರಕ್ಕಿಂತ ಹೆಚ್ಚು ಈ ವಿಷಯದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ
ಭಾರತ ಸರ್ಕಾರದ ಸಚಿವಾಲಯ ಈ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯ ಪ್ರಕಾರ, ಭಾರತದ ಜನರು ಆಹಾರ ಮತ್ತು ಪಾನೀಯಗಳಿಗಿಂತ ಹೆಚ್ಚಾಗಿ ಬೇರೆ ವಿಷಯಗಳಲ್ಲಿ ಹಣ ಜಾಸ್ತಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ದೇಶದ ಜನರು ಆಹಾರ ಮತ್ತು ಪಾನೀಯಗಳಿಗಿಂತ ಬಟ್ಟೆ, ದೂರದರ್ಶನ ಮತ್ತು ಮನರಂಜನೆಯಂತಹ ಜೀವನಶೈಲಿಯ ವಿಷಯಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂಬುದು ಗೊತ್ತಾದರೆ ನೀವೂ ಕೂಡ ನಿಬ್ಬೆರಗಾಗುವಿರಿ. ಅರ್ಥಾತ್ ಭಾರತೀಯ ಮಾಡುವ ಒಟ್ಟು ಖರ್ಚಿನಲ್ಲಿ ಆಹಾರದ ಪಾಲು ತುಂಬಾ ಕಡಿಮೆ ಎಂದರೆ ತಪ್ಪಾಗಲಾರದು. ಇದರ ಬದಲಾಗಿ  ಪ್ರಯಾಣ, ಫ್ಯಾಷನ್ ಮತ್ತು ಇತರ ವಿಷಯಗಳ ಮೇಲೆ ಜನರು ಹೆಚ್ಚು ಹಣ ಖರ್ಚು ಮಾಡುತಿದ್ದಾರೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ ಗೃಹಬಳಕೆಯ ವೆಚ್ಚ ಸಮೀಕ್ಷೆ 2022-23, ಸರಾಸರಿ ಮಾಸಿಕ ತಲಾ ಬಳಕೆಯ ವೆಚ್ಚ (ಎಂಪಿಸಿಇ) ಹತ್ತು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರೂ 1430 ರಿಂದ ರೂ 3773 ಮತ್ತು ನಗರ ಪ್ರದೇಶಗಳಲ್ಲಿ ರೂ 6459 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. 2011-12ನೇ ಸಾಲಿನಲ್ಲಿ ಗ್ರಾಮಸ್ಥರು ಒಟ್ಟು ಮಾಸಿಕ ವೆಚ್ಚದಲ್ಲಿ ಶೇ.52.9ರಷ್ಟು ಆಹಾರಕ್ಕಾಗಿ ಹಣ ಖರ್ಚು ಮಾಡುತ್ತಿದ್ದರೆ, 2022-23ರಲ್ಲಿ ಅದು ಶೇ.46.4ಕ್ಕೆ ಕುಸಿದಿದೆ. ಇನ್ನೊಂದೆಡೆ, ನಗರಗಳಲ್ಲಿ ವಾಸಿಸುವ ಜನರ ಆಹಾರ ಮತ್ತು ಪಾನೀಯಗಳ ಮೇಲಿನ ಖರ್ಚು 42.6% ರಿಂದ 39.2% ಕ್ಕೆ ಇಳಿಕೆಯಾಗಿದೆ.

ಯಾವ ರಾಜ್ಯದ ಜನರು ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ ಗೊತ್ತಾ?
ನಾವು ರಾಜ್ಯಗಳ ಪ್ರಕಾರ ಅಲ್ಲಿನ ಜನರ ಖರ್ಚಿನ ಪ್ರವೃತ್ತಿಯನ್ನು ಗಮನಿಸಿದರೆ, ಸಿಕ್ಕಿಂ ಅತಿ ಹೆಚ್ಚು ಮಾಸಿಕ ತಲಾ ಖರ್ಚಿನ ಬಳಕೆಯನ್ನು ಹೊಂದಿದೆ. ಹಳ್ಳಿಗಳಲ್ಲಿ ವಾಸಿಸುವವರು 7731 ರೂ.ಗಳನ್ನು ಖರ್ಚು ಮಾಡಿದರೆ, ನಗರಗಳಲ್ಲಿ ವಾಸಿಸುವವರು 12105 ರೂ. ವೆಚ್ಚ ಮಾಡುತ್ತಿದ್ದಾರೆ.  ಛತ್ತೀಸ್‌ಗಢದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಇಲ್ಲಿನ ಗ್ರಾಮಸ್ಥರ ಒಟ್ಟು ಮಾಸಿಕ ಖರ್ಚು 2466 ರೂ., ನಗರ ಪ್ರದೇಶದ ಜನರ ಖರ್ಚು 4483 ರೂ.ಗಳಾಗಿದೆ ಎನ್ನಲಾಗಿದೆ

ಇದನ್ನೂ ಓದಿ-Credit Card ನಿಂದ ಈ ಮೂರು ಕೆಲಸ ಮಾಡುವವರೆ ಹೆಚ್ಚು ತೊಂದರೆ ಅನುಭವಿಸುತ್ತಾರೆ! ಪಾರಾಗುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ

ವೆಚ್ಚದ ವಿಷಯದಲ್ಲಿ ಯಾವ ರಾಜ್ಯದ ಜನರು ಟಾಪ್ ನಲ್ಲಿದ್ದಾರೆ ಗೊತ್ತಾ?
ರಾಜ್ಯ                          ಗ್ರಾಮೀಣ ಜನರ ಖರ್ಚು (ರೂ.ಗಳಲ್ಲಿ)                ನಗರ ಜನರ ಖರ್ಚು(ರೂ.ಗಳಲ್ಲಿ )

ಸಿಕ್ಕಿಂ                                         7731                                                    12,105
ಚಂಡೀಗಢ                                    7467                                                    12,575 
ಗೋವಾ                                       7367                                                     8734
ಅಂಡಮಾನ ಮತ್ತು ನಿಕೊಬಾರ್           7331                                                    10,268
ಪುದುಚೇರಿ                                    6590                                                      7706

ಇದನ್ನೂ ಓದಿ-PM Kisan 16th Installment: ಈ ರೈತರಿಗೆ ಸಿಗಲ್ಲ 16ನೇ ಕಂತಿನ ₹2000, ಕಾರಣ ಇಲ್ಲಿದೆ!

ಯಾವ ರಾಜ್ಯದ ಜನರು ಖರ್ಚು ಮಾಡುವ ವಿಷಯದಲ್ಲಿ ಹಿಂದೆ ಇದ್ದಾರೆ?
ರಾಜ್ಯ                ಗ್ರಾಮೀಣ ಜನರ ಖರ್ಚು (ರೂ.ಗಳಲ್ಲಿ)                ನಗರ ಜನರ ಖರ್ಚು(ರೂ.ಗಳಲ್ಲಿ )

ದೆಹಲಿ                        6576                                                              8217
ಕೇರಳ                       5924                                                              7078 
ಲಕ್ಷದ್ವೀಪ                    5895                                                              5475
ತಮಿಳುನಾಡು              5310                                                              7630
ಮಹಾರಾಷ್ಟ್ರ                4010                                                              6657
ಚತ್ತಿಸ್ಗಢ                      2466                                                              4483

ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News