Indian Railways: ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹಿರಿಯ ನಾಗರಿಕರಿಗೆ ರೈಲ್ವೇ ನೀಡಿರುವ ವಿನಾಯಿತಿ ಕುರಿತು ವಿಶೇಷ ಅಪ್‌ಡೇಟ್ ಹೊರಬಿದ್ದಿದೆ. ರೈಲು ಟಿಕೆಟ್‌ನಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗಿದ್ದ ವಿನಾಯಿತಿಯನ್ನು ಮತ್ತೊಮ್ಮೆ ಜಾರಿಗೊಳಿಸಲಾಗುತ್ತಿದೆ. ಈ ಮೊದಲು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು 58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ರೇಲ್ವೆ ಇಲಾಖೆ ವತಿಯಿಂದ ರೈಲು ಟಿಕೆಟ್ ದರಗಳಲ್ಲಿ ಭಾರಿ ರಿಯಾಯಿತಿಯ ಲಾಭವನ್ನು ಪಡೆಯುತ್ತಿದ್ದರು, ಅದನ್ನು ಮತ್ತೆ ಪ್ರಾರಂಭಿಸುವ ಸಾಧ್ಯತೆ ನಿಚ್ಚಳವಾಗತೊಡಗಿದೆ.
ಸಮಿತಿಯ ಒತ್ತಾಯ
ಭಾರತೀಯ ರೈಲ್ವೆಯ ಸಂಸದೀಯ ಸಮಿತಿಯು ರೈಲ್ವೆಯ ಕಡೆಯಿಂದ ವಿನಾಯಿತಿಯನ್ನು ಮರಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಿದೆ. ಭಾರತೀಯ ಜನತಾ ಪಕ್ಷದ ಸಂಸದ ರಾಧಾ ಮೋಹನ್ ಸಿಂಗ್ ನೇತೃತ್ವದ ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೇ ಸಚಿವಾಲಯವು ರೈಲಿನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರುಸ್ಥಾಪಿಸಲು ಸಹಾನುಭೂತಿಯಿಂದ ಪರಿಗಣಿಸಬೇಕೆಂದು ಒತ್ತಾಯಿಸಿದೆ.
ಇದನ್ನೂ ಓದಿ-Ration Card Update: ಕೋಟ್ಯಾಂತರ ಪಡಿತರ ಚೀಟಿದಾರರಿಗೊಂದು ಬಂಬಾಟ್ ಸುದ್ದಿ! ಮಿಸ್ ಮಾಡದೆ ಓದಿ...
ಸುದ್ದಿ ಸಂಸ್ಥೆಗೆ ಮಾಹಿತಿ
ಸುದ್ದಿ ಸಂಸ್ಥೆ ಪಿಟಿಐನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಭಾರತೀಯ ರೇಲ್ವೆ ನೀಡಿರುವ ಮಾಹಿತಿಯಂತೆ ಇದೀಗ ಕರೋನಾ ಸ್ಥಿತಿ ಸಾಮಾನ್ಯವಾಗಿದೆ ಎಂದು ಸಮಿತಿ ಹೇಳಿದೆ. ಸಮಿತಿಯು ತನ್ನ 12 ನೇ ಆಕ್ಷನ್ ಟೇಕನ್ ವರದಿಯಲ್ಲಿ (17 ನೇ ಲೋಕಸಭೆ) ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯಲ್ಲಿ ಈ ಆಶಯವನ್ನು ವ್ಯಕ್ತಪಡಿಸಿದೆ. ಇದನ್ನು ಕನಿಷ್ಠ ಸ್ಲೀಪರ್ ಕ್ಲಾಸ್ ಮತ್ತು ಥರ್ಡ್ ಎಸಿ ವರ್ಗದಲ್ಲಿ ಪರಿಗಣಿಸಬಹುದು ಇದರಿಂದ ದುರ್ಬಲ ಮತ್ತು ನಿಜವಾಗಿಯೂ ಅಗತ್ಯವಿರುವ ನಾಗರಿಕರು ಈ ಸೌಲಭ್ಯವನ್ನು ಪಡೆಯಬಹುದು.
ಇದನ್ನೂ ಓದಿ-Big Update: ದೇಶಾದ್ಯಂತ ಪಡಿತರ ವಿತರಣೆಗೆ ಹೊಸ ನಿಯಮ ಜಾರಿ! ನೀವೂ ತಿಳಿದುಕೊಳ್ಳಿ...
ಹಿಂದೆ ರಿಯಾಯಿತಿ ನೀಡಲಾಗುತ್ತಿತ್ತು
ಮಾರ್ಚ್ 2020 ರ ಮೊದಲು, ರೈಲ್ವೆಯು ಹಿರಿಯ ನಾಗರಿಕರ ವಿಷಯದಲ್ಲಿ ರೈಲಿನಲ್ಲಿ ಪ್ರಯಾಣಿಸಲು ಹಿರಿಯ ಮಹಿಳೆಯರಿಗೆ ಪ್ರಯಾಣ ದರದಲ್ಲಿ ಶೇ.50 ರಷ್ಟು ಮತ್ತು ಹಿರಿಯ ಪುರುಷರಿಗೆ 40 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿತ್ತು. ರೈಲ್ವೆಯಿಂದ ಈ ವಿನಾಯಿತಿ ಪಡೆಯಲು ವಯಸ್ಸಾದ ಮಹಿಳೆಯರಿಗೆ ಕನಿಷ್ಠ ವಯಸ್ಸಿನ ಮಿತಿ 58 ವರ್ಷಗಳು ಮತ್ತು ಪುರುಷರಿಗೆ 60 ವರ್ಷಗಲಾಗಿದೆ, ಆದರೆ ಕರೋನಾ ಅವಧಿಯ ನಂತರ, ಅವರಿಗೆ ನೀಡಲಾಗುತ್ತಿದ್ದ ಎಲ್ಲಾ ರೀತಿಯ ರಿಯಾಯಿತಿಗಳನ್ನು ರದ್ದುಪಡಿಸಲಾಗಿದೆ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳ ವೇತನದಲ್ಲಿ ಸಿಗಲಿದೆ ಈ ಹಣ!
ಅಶ್ವಿನಿ ವೈಷ್ಣವ್ ನೀಡಿದ ಮಾಹಿತಿ ಏನು?
ಡಿಸೆಂಬರ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ನಾಗರಿಕರಿಗೆ ರೈಲ್ವೆಯಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಮತ್ತೆ ಮರುಸ್ಥಾಪಿಸುವುದಿಲ್ಲ ಎಂದು ಹೇಳಿದ್ದರು. ರೈಲ್ವೆಯಿಂದ ಪಿಂಚಣಿ ಮತ್ತು ಸಂಬಳದ ಬಿಲ್ ತುಂಬಾ ಹೆಚ್ಚಾಗಿದೆ. ಇದರೊಂದಿಗೆ ಭಾರತೀಯ ರೈಲ್ವೆಯು ಪ್ರಯಾಣಿಕರ ಸಂಬಂಧಿತ ಸೇವೆಗಳಿಗೆ 59000 ಕೋಟಿ ರೂ.ಗಳ ಸಬ್ಸಿಡಿಯನ್ನು ನೀಡಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.