Indian Railway Luggage Rule: ಇನ್ನು ಮನ ಬಂದಂತೆ ಲಗೇಜ್ ಕೊಂಡೊಯ್ಯುವಂತಿಲ್ಲ ರೈಲಿನಲ್ಲಿ , ಬೀಳಲಿದೆ ಭಾರೀ ದಂಡ

Indian Railway Luggage Rule: ಇನ್ನು ಮುಂದೆ ರೈಲಿನಲ್ಲಿ ಹೆಚ್ಚು ಲಗೇಜ್ ಸಾಗಿಸುವವರ ವಿರುದ್ಧ ರೈಲ್ವೆ ಕ್ರಮ ಕೈಗೊಳ್ಳಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು ಲಗೇಜ್ ಬುಕ್ ಮಾಡುವಂತೆ ರೈಲ್ವೆ ಸಚಿವಾಲಯ ಸಲಹೆ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಕೇವಲ 40 ರಿಂದ 70 ಕೆಜಿ ಲಗೇಜ್ ಮಾತ್ರ ಕೊಂಡೊಯ್ಯಲು ಅವಕಾಶವಿದೆ.

Written by - Ranjitha R K | Last Updated : May 31, 2022, 09:57 AM IST
  • ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ ಲಗೇಜ್ ಕೊಂಡೊಯ್ದರೆ ಶಿಕ್ಷೆ
  • ಪಾವತಿಸಬೇಕು ಅಧಿಕ ದರ
  • ರೈಲಿನಲ್ಲಿ ಲಗೇಜ್ ಸಾಗಿಸುವುದಕಕ್ಕೂ ಇದೆ ಮಿತಿ
Indian Railway Luggage Rule: ಇನ್ನು ಮನ ಬಂದಂತೆ ಲಗೇಜ್ ಕೊಂಡೊಯ್ಯುವಂತಿಲ್ಲ ರೈಲಿನಲ್ಲಿ , ಬೀಳಲಿದೆ ಭಾರೀ ದಂಡ  title=
Indian Railway (file photo)

ನವದೆಹಲಿ : Indian Railway Luggage Rule : ಇನ್ನು ರೈಲಿನಲ್ಲಿ ಪ್ರಯಾಣದ ಸಮಯದಲ್ಲಿ ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ ಲಗೇಜ್ ಕೊಂಡೊಯ್ಯುವುದು ರೈಲ್ವೆ ಪ್ರಯಾಣಿಕರಿಗೆ ದುಬಾರಿಯಾಗಿ ಪರಿಣಮಿಸಲಿದೆ.  ಹೆಚ್ಚಿನ ಲಗೇಜ್ ಕೊಂಡೊಯ್ಯಬೇಕಾದರೆ ಪಾರ್ಸೆಲ್ ಕಚೇರಿಯಿಂದ ಲಗೇಜ್ ಬುಕ್ ಮಾಡಬೇಕು ಎಂದು ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಸಲಹೆ ನೀಡಿದೆ. ನಿಗದಿತ ಮಿತಿಗಿಂತ ಹೆಚ್ಚು ಸರಕು ಸಾಗಿಸಿದರೆ ಕಠಿಣ ಕ್ರಮ ಕೈಗೊಳ್ಳಬಹುದು.

ಲಗೇಜ್ ಕಾಯ್ದಿರಿಸುವಂತೆ ಪ್ರಯಾಣಿಕರಿಗೆ ಸಲಹೆ  :
ದೂರದ ಪ್ರಯಾಣಕ್ಕಾಗಿ ಜನರೂ ಹೆಚ್ಚು ರೈಲು ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ವಿಮಾನಕ್ಕೆ ಹೋಲಿಸಿದರೆ ರೈಲಿನಲ್ಲಿ ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸಬಹುದು ಎನ್ನುವ ಕಾರಣಕ್ಕೂ ಜನ ರೈಲಿ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ.  ರೈಲಿನಲ್ಲಿ ಪ್ರಯಾಣಿಸುವಾಗಲೂ ಇಂತಿಷ್ಟೇ ಸಾಮಾನು ಸರಂಜಾಮು ಕೊಂಡೊಯ್ಯಬೇಕು ಎನ್ನುವ ಮಿತಿ ಇದೆ. ಆದರೆ ಪ್ರಯಾಣಿಕರು ಮಾತ್ರ  ಹೆಚ್ಚಿನ ಲಗೇಜ್‌ನೊಂದಿಗೆ  ಪ್ರಯಾಣಿಸುತ್ತಾರೆ. ಇದು ಬಹಳಷ್ಟು ವೇಳೆ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. 

ಇದನ್ನೂ ಓದಿ : Gold Price Today:ಮತ್ತೆ ದುಬಾರಿಯಾದ ಚಿನ್ನ, ಬೆಳ್ಳಿ ಬೆಲೆಯಲ್ಲಿಯೂ ಏರಿಕೆ

 ಟ್ವೀಟ್ ಮೂಲಕ ಮಾಹಿತಿ ನೀಡಿದ ರೈಲ್ವೆ ಸಚಿವಾಲಯ : 
ರೈಲ್ವೇ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಪ್ರಯಾಣದ ಸಮಯದಲ್ಲಿ ಹೆಚ್ಚಿನ ಸಾಮಾನು ಸರಂಜಾಮುಗಳೊಂದಿಗೆ ಪ್ರಯಾಣಿಸದಂತೆ ಜನರಿಗೆ ಸಲಹೆ ನೀಡಿದೆ. ಹೆಚ್ಚು ಲಗೇಜ್ ಹೊತ್ತುಕೊಂಡು ರೈಲಿನಲ್ಲಿ ಪ್ರಯಾಣಿಸಬೇಡಿ. ಹೆಚ್ಚುವರಿ ಸಾಮಾನುಗಳಿದ್ದಲ್ಲಿ, ಪಾರ್ಸೆಲ್ ಕಚೇರಿಗೆ ಹೋಗಿ ಲಗೇಜ್ ಅನ್ನು ಬುಕ್ ಮಾಡಿ ಎಂದು ಸೂಚನೆ ನೀಡಿದೆ. 

 

ರೈಲಿನಲ್ಲಿ ಎಷ್ಟು ಕೆಜಿ ಸಾಮಾನು ಸಾಗಿಸಬಹುದು ? : 
ರೈಲ್ವೆ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40 ರಿಂದ 70 ಕೆಜಿಯಷ್ಟು ಲಗೇಜ್ ಅನ್ನು ಮಾತ್ರ ಸಾಗಿಸಬಹುದು. ಯಾರಾದರೂ ಇದಕ್ಕಿಂತ ಹೆಚ್ಚಿನ ಲಗೇಜ್‌ನೊಂದಿಗೆ ಪ್ರಯಾಣಿಸಿದರೆ, ಅವರು ಪ್ರತ್ಯೇಕ ಪ್ರಯಾಣ ದರವನ್ನು ಪಾವತಿಸಬೇಕಾಗುತ್ತದೆ. ರೈಲ್ವೆಯ ಕೋಚ್ ಪ್ರಕಾರ, ಸಾಮಾನುಗಳ ತೂಕವು ವಿಭಿನ್ನವಾಗಿರುತ್ತದೆ. ರೈಲ್ವೆಯ ಪ್ರಕಾರ, ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಕರು 40 ಕೆಜಿಯಷ್ಟು ಲಗೇಜ್‌ಗಳನ್ನು ಸಾಗಿಸಬಹುದು. ಎಸಿ-ಟಯರ್ ವರೆಗೆ 50 ಕೆಜಿ ಲಗೇಜ್ ಅನ್ನು ಸಾಗಿಸಲು ವಿನಾಯಿತಿ ಇದೆ. ಆದರೆ ಪ್ರಥಮ ದರ್ಜೆ ಎಸಿಯಲ್ಲಿ ಪ್ರಯಾಣಿಕರು 70 ಕೆಜಿಯಷ್ಟು ಸಾಮಾನು ಸರಂಜಾಮುಗಳನ್ನು ಸಾಗಿಸಬಹುದು.

ಇದನ್ನೂ ಓದಿ : PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ.

ಹೆಚ್ಚಿನ ಸಾಮಾನುಗಳನ್ನು ಸಾಗಿಸಲು ಹೆಚ್ಚುವರಿ ಶುಲ್ಕ  :
ನಿಗದಿತ ಮಿತಿಯನ್ನು ಮೀರಿದ ಸಾಮಾನು ಸರಂಜಾಮುಗಳ ಸಾಗಿಸಿದರೆ, ಅಂಥ  ಪ್ರಯಾಣಿಕರಿಗೆ ರೈಲ್ವೆಯು ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು.  ಇದರೊಂದಿಗೆ, ಗ್ಯಾಸ್ ಸಿಲಿಂಡರ್,  ದಹಿಸುವ ರಾಸಾಯನಿಕಗಳು, ಪಟಾಕಿ, ದುರ್ವಾಸನೆಯ ವಸ್ತುಗಳು, ಎಣ್ಣೆ, ಗ್ರೀಸ್, ತುಪ್ಪ, ಇಂಥಹ ವಸ್ತುಗಳು ಒಡೆಯುವ ಅಥವಾ ತೊಟ್ಟಿಕ್ಕುವ ಮೂಲಕ ಬೇರೆ ವಸ್ತುಗಳಿಗೆ ಹಾನಿ ಉಂಟು ಮಾಡಬಹುದು. ರೈಲು ಪ್ರಯಾಣದ ವೇಳೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವುದು ಕೂಡ ಅಪರಾಧ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಈ ನಿಷೇಧಿತ ವಸ್ತುಗಳಲ್ಲಿ ಯಾವುದೇ ರೀತಿಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರೆ, ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News