ಇವರಿಗಿನ್ನು ನಿಶ್ಚಿಂತೆಯ ಪ್ರಯಾಣ ! ರೈಲ್ವೆಯಿಂದ ವಿಶೇಷ ಮಾಹಿತಿ ಪ್ರಕಟ

Indian Railways : ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಸಂಬಂಧ ಪಟ್ಟ  ಆದೇಶಗಳನ್ನು ಕೂಡಾ ಹೊರಡಿಸಿದೆ. 

Written by - Ranjitha R K | Last Updated : Apr 14, 2023, 10:34 AM IST
  • ಪ್ರಮುಖ ಸೌಲಭ್ಯ ಪ್ರಾರಂಭಿಸಿದ ಭಾರತೀಯ ರೈಲ್ವೇ
  • ವಿಶೇಷ ನಿರ್ಧಾರ ಕೈಗೊಂಡ ರೈಲ್ವೆ ಇಲಾಖೆ
  • ಈ ಆದೇಶವೂ ಪ್ರಕಟ
ಇವರಿಗಿನ್ನು ನಿಶ್ಚಿಂತೆಯ ಪ್ರಯಾಣ ! ರೈಲ್ವೆಯಿಂದ ವಿಶೇಷ  ಮಾಹಿತಿ ಪ್ರಕಟ  title=

Indian Railways : ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಪ್ರಮುಖ ಸೌಲಭ್ಯವನ್ನು ಪ್ರಾರಂಭಿಸಿದೆ. ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ರೈಲ್ವೆ ಇಲಾಖೆ ವಿಶೇಷ ನಿರ್ಧಾರ ಕೈಗೊಂಡಿದೆ. ರೈಲ್ವೇಯಿಂದ ಬಂದಿರುವ ಮಾಹಿತಿಯ ಪ್ರಕಾರ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ವಿಕಲಚೇತನರಿಗೆ ಲೋವರ್ ಬರ್ತ್‌ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ದೈಹಿಕ ನ್ಯೂನತೆ ಹೊಂದಿರುವ ಪ್ರಯಾಣಿಕರಿಗೆ ಲೋವರ್ ಬರ್ತ್ ನೀಡಲು ನಿರ್ಧರಿಸಲಾಗಿದೆ.

ವೃದ್ಧರಿಗೂ ಸಿಗಲಿದೆ  ಸೌಲಭ್ಯ  :
ಇದರೊಂದಿಗೆ ರೈಲ್ವೆಯು ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಕೂಡಾ ಲೋವರ್ ಬರ್ತ್ ಸೌಲಭ್ಯವನ್ನು ಪರಿಚಯಿಸಿ  ಆದೇಶ ಹೊರಡಿಸಿದೆ. ಈ ಸಂಬಂಧ ರೈಲ್ವೆ ಇಲಾಖೆಯು ಮಾರ್ಚ್ 31ರಂದು ವಿವಿಧ ವಲಯಗಳಿಗೆ ಆದೇಶ  ರವಾನಿಸಿದೆ. 

ಇದನ್ನೂ ಓದಿ : ಇನ್ನು ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಈ ವಸ್ತು ಕೂಡಾ ಲಭ್ಯ ! ಮಕ್ಕಳ ಜೊತೆ ಹೋಗುವಾಗ ಜೋಪಾನ

ರೈಲ್ವೆ ಇಲಾಖೆಯ ಆದೇಶ : 
ಸ್ಲೀಪರ್ ಕ್ಲಾಸ್‌ನಲ್ಲಿ ನಾಲ್ಕು ಆಸನಗಳು (ಎರಡು ಕೆಳ ಮತ್ತು ಎರಡು ಮಧ್ಯಮ ಬರ್ತ್‌ಗಳು), ಎಸಿ3 ಕಂಪಾರ್ಟ್‌ಮೆಂಟ್‌ನಲ್ಲಿ ಎರಡು ಆಸನಗಳು (ಒಂದು ಕೆಳ ಮತ್ತು ಒಂದು ಮಧ್ಯಮ ಬರ್ತ್), ಎಸಿ3 (ಇಕಾನಮಿ ) ವಿಭಾಗದಲ್ಲಿ ಎರಡು ಆಸನಗಳು (ಒಂದು ಕೆಳ ಮತ್ತು ಒಂದು ಮಧ್ಯಮ ಬರ್ತ್) ವಿಕಲಾಂಗ ವ್ಯಕ್ತಿಗಳಿಗೆ ಮೀಸಲಿಡಲಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.  

ಪೂರ್ಣ ಟಿಕೆಟ್ ಮೊತ್ತವನ್ನು ಪಾವತಿಸಬೇಕು :
ಇದರೊಂದಿಗೆ ಗರೀಬ್ ರಥ ರೈಲಿನಲ್ಲಿ ಅಂಗವಿಕಲರಿಗೆ 2 ಲೋವರ್ ಬರ್ತ್ ಮತ್ತು 2 ಮೇಲಿನ ಸೀಟುಗಳನ್ನು ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ. ಆದರೆ ಈ ಸೌಲಭ್ಯವನ್ನು ಪಡೆಯಲು ಅವರು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 'ಎಸಿ ಚೇರ್ ಕಾರ್' ರೈಲಿನಲ್ಲಿ  ವಿಕಲಾಂಗರಿಗೆ ಎರಡು ಸೀಟುಗಳನ್ನು ಮೀಸಲಿಡಲಾಗುವುದು.

ಇದನ್ನೂ ಓದಿ : New Pension Rule: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಪರ್ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, ಹೆಚ್ಚಾಗಲಿದೆ ಪಿಂಚಣಿ ಮತ್ತು ವೇತನ!

ಗರ್ಭಿಣಿಯರಿಗೂ ಸಿಗುವುದು ಈ ಸೌಲಭ್ಯ : 
ರೈಲ್ವೇಯಿಂದ ಬಂದಿರುವ ಮಾಹಿತಿ ಪ್ರಕಾರ ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಸ್ಲೀಪರ್ ವಿಭಾಗದಲ್ಲಿ 6 ಲೋವರ್ ಬರ್ತ್‌ಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ, 3ಎಸಿಯಲ್ಲಿ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳನ್ನು ಮತ್ತು 2ಎಸಿಯಲ್ಲಿ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳನ್ನು ನಿಗದಿಪಡಿಸಲಾಗಿದೆ.

ಅಶ್ವಿನಿ ವೈಷ್ಣವ್  ನೀಡಿದ ಮಾಹಿತಿ :
'ಹಿರಿಯ ನಾಗರಿಕರಿಗೆ ರೈಲಿನಲ್ಲಿ ಲೋಯರ್ ಬರ್ತ್ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ರೈಲ್ವೆ ಪ್ರತ್ಯೇಕ ವ್ಯವಸ್ಥೆ ಜಾರಿ ಮಾಡಿದೆ ಎಂದು  ಸಚಿವೆ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಲೋವರ್ ಬರ್ತ್‌ಗಾಗಿ ಪ್ರತ್ಯೇಕ ಬೇಡಿಕೆ ಇಡಬೇಕೆಂದಿಲ್ಲ. ಈ ಪ್ರಯಾಣಿಕರು ಆಟೋಮ್ಯಾಟಿಕ್ ಆಗಿ ರೈಲ್ವೇ ಕಡೆಯಿಂದ ಲೋವರ್ ಬರ್ತ್ ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News