Oil Company ಗ್ರಾಹಕರಿಗೆ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ

Indian Oil Diesel Bharo, Inam Jeeto Offer - ಒಂದು ವೇಳೆ ನೀವೂ ಕೂಡ ಕೋಟ್ಯಾಧಿಪತಿಯಾಗುವ (Crorepati) ಕನಸು ಕಾಣುತ್ತಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ದೇಶದ ಅತಿ ದೊಡ್ಡ ತೈಲೋತ್ಪಾದಕ ಕಂಪನಿ (Oil Company) ನಿಮಗೆ ಈ ಸುವರ್ಣಾವಕಾಶ ನೀಡುತ್ತಿದೆ. ಹೌದು, ಇಂಡಿಯನ್ ಆಯಿಲ್ ಕಾರ್ಪೋರೇಶನ್ (Indian Oil) ನ ರಿಟೇಲ್ ಔಟ್ ಲೆಟ್ ಮೇಲೆ ನೀವು ನಿಮ್ಮ ವಾಹನಕ್ಕೆ ಡಿಸೇಲ್ ತುಂಬಿಸಿ 2 ಕೋಟಿ ರೂ. ಹಣ ಸಂಪಾದಿಸಬಹುದು.

Written by - Nitin Tabib | Last Updated : Apr 17, 2021, 01:05 PM IST
  • ನೀವೂ ಕೂಡ ಕೋಟ್ಯಾಧಿಪತಿಯಾಗುವ ಕನಸು ಕಾಣುತ್ತಿರುವಿರಾ?
  • ಇಂಡಿಯನ್ ಆಯಿಲ್ ನಮಗೆ ನೀಡುತ್ತಿದೆ ಈ ಸುವರ್ಣಾವಕಾಶ.
  • 'ಡಿಸೇಲ್ ಭರೋ... ಇನಾಮ್ ಜೀತೋ' ಕೊಡುಗೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ.
Oil Company ಗ್ರಾಹಕರಿಗೆ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ title=
Indian Oil Diesel Bharo, Inam Jeeto Offer (File Photo)

Indian Oil Diesel Bharo, Inam Jeeto Offer - ಒಂದು ವೇಳೆ ನೀವೂ ಕೂಡ ಕೋಟ್ಯಾಧಿಪತಿಯಾಗುವ ಕನಸು ಕಾಣುತ್ತಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ದೇಶದ ಅತಿ ದೊಡ್ಡ ತೈಲೋತ್ಪಾದಕ ಕಂಪನಿ (Oil Company) ನಿಮಗೆ ಈ ಸುವರ್ಣಾವಕಾಶ ನೀಡುತ್ತಿದೆ. ಹೌದು, ಇಂಡಿಯನ್ ಆಯಿಲ್ ಕಾರ್ಪೋರೇಶನ್ (Indian Oil) ನ ರಿಟೇಲ್ ಔಟ್ ಲೆಟ್ ಮೇಲೆ ನೀವು ನಿಮ್ಮ ವಾಹನಕ್ಕೆ ಡಿಸೇಲ್ ತುಂಬಿಸಿ 2 ಕೋಟಿ ರೂ. ಹಣ ಸಂಪಾದಿಸಬಹುದು. 'ಇಂಡಿಯನ್ ಆಯಿಲ್ ಡಿಸೇಲ್ (Diesel Offer) ತುಂಬಿಸಿ, ಬಹುಮಾನ ಗಿಲ್ಲಿ' ಕೊಡುಗೆ ಅಡಿ ಕಂಪನಿ ಈ ಕೊಡುಗೆಯನ್ನು ನೀಡುತ್ತಿದೆ. ಕಂಪನಿಯ ಈ ಕೊಡುಗೆಯ ಲಾಭ ಪಡೆಯಲು ನಿಮ್ಮ ವಯಸ್ಸು ಕನಿಷ್ಠ 18 ಆಗಿರಬೇಕು. ಗರಿಷ್ಠ ವಯೋಮಿತಿ ಇಲ್ಲ. ನೀವು ಭಾರತೀಯ ನಾಗರಿಕರಾಗಿರಬೇಕು. ಈ ಕುರಿತು ಕಂಪನಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಹಾಗಾದರೆ ಬನ್ನಿ ಈ ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಏನಿದು ಇಂಡಿಯನ್ ಆಯಿಲ್ ಕೊಡುಗೆ ?
'ಡಿಸೇಲ್ ಭರೋ... ಇನಾಮ್ ಜೀತೋ' ಕೊಡುಗೆಯ ಲಾಭ ಪಡೆಯಲು ನೀವು ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ ಯಾವುದಾದರೊಂದು ರಿಟೇಲ್ ಔಟ್ಲೆಟ್ ಮೇಲೆ ಕನಿಷ್ಠ ಅಂದರೆ 25 ಲೀಟರ್ ಅಥವಾ ಅದಕ್ಕಿಂತ ಡಿಸೇಲ್ ತುಂಬಿಸಿಕೊಳ್ಳಬೇಕು. ಇಲ್ಲಿ ಷರತ್ತು ಏನೆಂದರೆ ಈ 25 ಲೀಟರ್ ಡಿಸೇಲ್ (Diesel) ಭರ್ತಿಯ ಒಂದೇ ಬಿಲ್ ಆಗಿರಬೇಕು. ಅಂದರೆ, ಏಕಕಾಲಕ್ಕೆ ನೀವು 25 ಲೀಟರ್ ಡಿಸೇಲ್ ಭರ್ತಿ ಮಾಡಬೇಕು. ಅದರ ಬೇರೆ ಬೇರೆ ಬಿಲ್ ಗಳಾಗಿರಬಾರದು.

ಬಳಿಕ ಈ ಸಂಖ್ಯೆಗೆ sms ಕಳುಹಿಸಿರಿ
25 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಡಿಸೇಲ್ ತುಂಬಿಸಿದ ಬಳಿಕ ನಿಮಗೆ ಒಂದು ಸಿಂಗಲ್ ಪ್ರಿಂಟೆಡ್ ಬಿಲ್ ನಿಮಗೆ ಸಿಗಲಿದೆ. ಅದರ ಮೇಲೆ ಒಂದು ಬಿಲ್ ಸಂಖ್ಯೆ ಹಾಗೂ ಡೀಲರ್ ಕೋಡ್ ಇರಲಿದೆ. ಆ ಕೋಡ್ ಅನ್ನು ನೀವು 7799033333 ಮೊಬೈಲ್ ಸಂಖ್ಯೆಗೆ sms ಮೂಲಕ ಕಳುಹಿಸಿ.

sms ಹೇಗೆ ಕಳುಹಿಸಬೇಕು?
ಸಂದೇಶ ಕಳುಹಿಸಲು ಮೊದಲು ನೀವು ಡೀಲರ್ ಸಂಖ್ಯೆಯನ್ನು ಟೈಪ್ ಮಾಡಬೇಕು. ಇದಾದ ಬಳಿಕ ಸ್ಪೇಸ್ ನೀಡಿ ಬಿಲ್ ನಂಬರ್ ಟೈಪ್ ಮಾಡಬೇಕು. ಈಗ ಮತ್ತೊಂದು ಸ್ಪೇಸ್ ನೀಡಿ ಕ್ವಾಂಟಿಟಿ ಟೈಪ್ ಮಾಡಿ, ಅದನ್ನು 7799033333  ನಂಬರ್ ಗೆ ಕಳುಹಿಸಿ.

ವಿಧಾನ ಇಲ್ಲಿದೆ -DEALER CODE <SPACE> BILL NUMBER <SPACE> QUANTITY to 77990 33333. BSNL / MTNL / VI / ಏರ್ಟೆಲ್  / ಏರ್ಸೆಲ್  / ಜಿಯೋ ಸೇರಿದಂತೆ ಇತರ ಎಲ್ಲ ಬಳಕೆದಾರರಿಗೆ ಈ sms ಸೌಕರ್ಯ ಒದಗಿಸಲಾಗಿದೆ.

ಒಂದು ದಿನದಲ್ಲಿ ಎರಡು ಬಾರಿ sms ಕಳುಹಿಸಬಹುದು
ಕೇವಲ ಒಂದು sms ಕಳುಹಿಸಿ ಎಣ್ಣೆ ಖರೀದಿಸಿರುವ ಕುರಿತಾದ ಮಾಹಿತಿಯನ್ನು ನೀವು ಇಂಡಿಯನ್ ಆಯಿಲ್ ಗೆ ಕಳುಹಿಸಿ ನೀವು ಈ ಕೊಡುಗೆಯ ಭಾಗವಾಗಬಹುದು. ಅಂದರೆ, ನೀವು ದಿನವೊಂದರಲ್ಲಿ ಒಂದೇ ಔಟ್ ಲೆಟ್ ಅಥವಾ ಬೇರೆ ಬೇರೆ ಔಟ್ಲೆಟ್ ಗಳಲ್ಲಿ ಪ್ರತ್ಯೇಕ 25 ಲೀಟರ್ ಡಿಸೇಲ್ ಖರೀಸಿಸಿದ ಮಾಹಿತಿಯನ್ನು ಎರಡು ಬಾರಿಗೆ ಮಾತ್ರ ಕಳುಹಿಸಬಹುದು. ಆದರೆ, ಈ ಎರಡು ಬಾರಿಯ ಗಣನೆ ಒಂದು ಮೊಬೈಲ್ ಸಂಖ್ಯೆಗೆ ಮಾತ್ರ ಸೀಮಿತವಾಗಿದೆ.

ಹೇಗೆ ಲಾಭ ಸಿಗಲಿದೆ?
ರಾಜ್ಯ ಹಾಗೂ ರಾಷ್ಟ್ರೀಯ ಮಹಾಮಾರ್ಗಗಳಲ್ಲಿ ಸ್ಥಾಪಿತಗೊಂಡ ಕೆಲ ಆಯ್ದ ಇಂಡಿಯನ್ ಆಯಿಲ್ ಔಟ್ ಲೆಟ್ ಗಳ ಮೇಲೆ ಒಂದೇ ಪ್ರಿಂಟೆಡ್ ಬಿಲ್ ನೊಂದಿಗೆ 2500 ಲೀಟರ್ ಡಿಸೇಲ್ (XTRAMILE ಸೇರಿದಂತೆ) ಆಟಹ್ವಾ ಕನಿಷ್ಠ ಅಂದರೆ 25 ಲೀಟರ್ ಡಿಸೇಲ್ ತುಂಬಿಸಿಕೊಳ್ಳುವ ಗ್ರಾಹಕರಿಗೆ ಇಂಡಿಯನ್ ಆಯಿಲ್ ಕಂಪನಿಯ ಈ ಲಾಭ ಸಿಗಲಿದೆ.

ಇದನ್ನೂ ಓದಿ-BSNL OFFER : ಬಿಎಸ್ ಎನ್ ಎಲ್ ಅಪೂರ್ವ ಆಫರ್..! ಜಸ್ಟ್ 75 ರೂಪಾಯಿ ರಿಚಾರ್ಜಿಗೆ ಸಿಮ್ ಫ್ರೀ

ಲಕ್ಕಿ ಡ್ರಾ ವಿಜೇತರಿಗೆ ಸಿಗುವ ಬಹುಮಾನದ ಪಟ್ಟಿ ಇಂತಿದೆ
ಇಂಡಿಯನ್ ಆಯಿಲ್ ನ ಈ ವಿಶೇಷ ಯೋಜನೆಯಲ್ಲಿ ಭಾಗವಹಿಸುವ ಜನರನ್ನು ಬಹುಮಾನಕ್ಕಾಗಿ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ಲಕ್ಕಿ ಡ್ರಾ ಗೆಲ್ಲುವ ಅಭ್ಯರ್ಥಿಗಳಿಗೆ ಬಹುಮಾನ ಇಂತಿದೆ.

A. 4 ಮೆಗಾ ವಿಜೇತರಿಗೆ ಪ್ರತ್ಯೇಕ 200000 ರೂ. ನಗದು ಬಹುಮಾನ.
B. 16 ಮಾಸಿಕ ವಿಜೇತರಿಗೆ ಪ್ರತ್ಯೇಕ ರೂ.75,000 ರೂ ನಗದು ಬಹುಮಾನ.
C. 70 ಅರ್ಧ ಮಾಸಿಕ ವಿಜೇತರಿಗೆ ಪ್ರತ್ಯೇಕ ರೂ.25 ಸಾವಿರ ನಗದು ಬಹುಮಾನ.
D. 500 ವಾರದ ವಿಜೇತರಿಗೆ ಪ್ರತ್ಯೇಕ ರೂ.1000 ನಗದು ಬಹುಮಾನ ನೀಡಲಾಗುವುದು.

ಇದನ್ನೂ ಓದಿ- Free LPG Cylinder: ಯಾವುದೇ ಪುರಾವೆಯಿಲ್ಲದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಫ್ರೀ ಆಗಿ ಪಡೆಯಲು ಇದು ಸುಲಭ ಮಾರ್ಗ

ಈ ಕೊಡುಗೆ ಜುಲೈ 31, 2021 ರವರೆಗೆ ಮಾತ್ರ ಇರಲಿದೆ
ಇಂಡಿಯನ್ ಆಯಿಲ್ ವೆಬ್ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ ಈ ಕೊಡುಗೆ ಜುಲೈ 31, 2021 ರ ರಾತ್ರಿ 12 ಗಂಟೆಯವರೆಗೆ ಮಾತ್ರ ಇರಲಿದೆ. ಯಾವುದೇ ಕಾರಣದಿಂದ ಗ್ರಾಹಕರು ಒಂದು ವೇಳೆ sms ಮೂಲಕ ಸಂದೇಶ ಕಳುಹಿಸುವಲ್ಲಿ ವಿಫಲರಾದರೆ, ಇಂಡಿಯನ್ ಆಯಿಲ್ ಅದರ ಹೊಣೆ ಹೊರುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಇದಲ್ಲದೆ ಗ್ರಾಹಕರು ಒಂದು ವೇಳೆ ಬಿಲ್ ಕಳೆದುಕೊಂಡರೆ ಅಥವಾ ಇ-ರಿಸೀಟ್ ಕಳೆದುಕೊಂಡರೆ ಅವರ ಬಹುಮಾನ ಗೆಲ್ಲುವ ಸಾಧ್ಯತೆಯನ್ನು ರದ್ದುಗೊಳಿಸಲಾಗುವುದು ಎಂದೂ ಕೂಡ ಕಂಪನಿ ಹೇಳಿದೆ. ಹೀಗಾಗಿ ಒರಿಜಿನಲ್ ರಸೀದಿ ನಿಮ್ಮ ಬಳಿ ಇರುವುದು ಆವಶ್ಯಕವಾಗಿದೆ.

ಇದನ್ನೂ ಓದಿ- Jio ಗ್ರಾಹಕರಿಗೆ ಗುಡ್ ನ್ಯೂಸ್: ಕೇವಲ 329 ರೂ.ಗೆ 84 ದಿನ ಅನ್‌ಲಿಮಿಟೆಡ್ ಇಂಟರ್ನೆಟ್!

Trending News