Indian Economy 2020: ವರ್ಷ 2030ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ... No.1 ಯಾರು?

Indian Economy 2020: 2025 ರ ವೇಳೆಗೆ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2020 ರಲ್ಲಿ, ಕರೋನಾ ವೈರಸ್ ಸಾಂಕ್ರಾಮಿಕದಿಂದ ಪ್ರಭಾವಿತಗೊಂಡಿರುವ ಭಾರತೀಯ ಆರ್ಥಿಕತೆಯು ಆರನೇ ಸ್ಥಾನಕ್ಕೆ ಕುಸಿದಿದೆ.

Written by - Nitin Tabib | Last Updated : Dec 26, 2020, 06:34 PM IST
  • 2030ರಲ್ಲಿ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ.
  • 2030 ರಲ್ಲಿ ಭಾರತ ಬ್ರಿಟನ್ ಹಾಗೂ ಜಪಾನ್ ಅನ್ನು ಆರ್ಥಿಕತೆಯಲ್ಲಿ ಹಿಂದಿಕ್ಕಲಿದೆ.
  • 2030ರಲ್ಲಿ ಚೀನಾ, ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ.
Indian Economy 2020: ವರ್ಷ 2030ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ...  No.1 ಯಾರು? title=
Indian Economy 2020

ನವದೆಹಲಿ: Indian Economy 2020: 2025 ರ ವೇಳೆಗೆ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2020 ರಲ್ಲಿ, ಕರೋನಾ ವೈರಸ್ ಸಾಂಕ್ರಾಮಿಕದಿಂದ ಪ್ರಭಾವಿತಗೊಂಡಿರುವ ಭಾರತೀಯ ಆರ್ಥಿಕತೆಯು ಆರನೇ ಸ್ಥಾನಕ್ಕೆ ಕುಸಿದಿದೆ. 2019 ರಲ್ಲಿ ಭಾರತದ ಆರ್ಥಿಕತೆ ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ತಲುಪಿತ್ತು.

ಬ್ರಿಟನ್ ನ ಪ್ರಮುಖ ಆರ್ಥಿಕ ಸಂಶೋಧನಾ ಸಂಸ್ಥೆಯಾಗಿರುವ ಸೆಂಟರ್ ಫಾರ್ ಎಕನಾಮಿಕ್ ಅಂಡ್ ಬಿಸಿನೆಸ್ ರಿಸರ್ಚ್ (CEBR) ನ ವಾರ್ಷಿಕ ವರದಿ ಈ ಅಂಶ ಬಹಿರಂಗಗೊಳಿಸಿದೆ. ವರದಿಯಲ್ಲಿ "ಮಹಾಮಾರಿಯ ಕಾರಣ ಭಾರತ ಅಭಿವೃದ್ಧಿ ಪಥದಿಂದ ಸ್ವಲ್ಪ ಜಾರಿದ್ದು, ಈ ಕಾರಣದಿಂದ 2019ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿದ್ದ ಭಾರತ ಈ ವರ್ಷ ಆರನೇ ಸ್ಥಾನಕ್ಕೆ ಜಾರಿಗೆ" ಎಂದು ಹೇಳಲಾಗಿದೆ. ಇದರ ಜೊತೆಗೆ 2024ರವರೆಗೆ ಬ್ರಿಟನ್ ಐದನೇ ಸ್ಥಾನದಲ್ಲಿ ಮುಂದುವರೆಯಲಿದ್ದು, ಬಳಿಕ ಭಾರತ ಆ ಸ್ಥಾನವನ್ನು ಪುನಃ ಆಕ್ರಮಿಸಿಕೊಳ್ಳಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನು ಓದಿ- ಭಾರತೀಯ ಆರ್ಥಿಕತೆ ಬಗ್ಗೆ ಕಹಿ ಸುದ್ದಿ! ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿಯಿಂದ ಬಹಿರಂಗ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಕಾರಣ 2020 ರಲ್ಲಿ ಬ್ರಿಟನ್ ಪುನಃ ಭಾರತವನ್ನು ಹಿಂದಿಕ್ಕಿ ಮುಂದೆ ಸಾಗಿದೆ ಎನ್ನಲಾಗುತ್ತಿದೆ. ವರದಿಯ ಪ್ರಕಾರ 2021ರಲ್ಲಿ ಭಾರತದ ಆರ್ಥಿಕ (Indian Economy) ಪ್ರಗತಿಯ ದರ ಶೇ.9 ರಷ್ಟು ಇರಲಿದ್ದು, 2022 ರಲ್ಲಿ ಇದು ಶೇ.7 ಕ್ಕೆ ಜಾರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನು ಓದಿ- ಸಣ್ಣ ರೈತರು ಹಾಗೂ ಸ್ಟಾರ್ಟ್ ಅಪ್ ಗಳಿಗೆ RBIನ ಬೂಸ್ಟರ್ ಡೋಸ್

'ಭಾರತ ಆರ್ಥಿಕವಾಗಿ ಮುಂದುವರೆದಂತೆ ದೇಶದ ಅಭಿವೃದ್ಧಿ ದರ ಸ್ವಲ್ಪ ಕುಂಠಿತಗೊಳ್ಳಲಿದೆ ಹಾಗೂ 2035ರ ವೇಳೆಗೆ ಇದು ಶೇ.5.8ಕ್ಕೆ ಇಳಿಯಲಿದೆ ಎಂದು CEBI ವರದಿ ಹೇಳಿದೆ.

ಇದನ್ನು ಓದಿ- ಕರೋನಾ ಬಿಕ್ಕಟ್ಟಿನ ನಡುವೆಯೂ ಚೇತರಿಕೆ ಕಂಡ ಭಾರತೀಯ ಆರ್ಥಿಕತೆ

ಆರ್ಥಿಕ ಬೆಳವಣಿಗೆಯ ಈ ಅಂದಾಜು ನಿರ್ದೇಶನದ ಪ್ರಕಾರ, ಭಾರತವು 2025 ರಲ್ಲಿ ಬ್ರಿಟನ್, 2027 ರಲ್ಲಿ ಜರ್ಮನಿ ಮತ್ತು 2030 ರಲ್ಲಿ ಜಪಾನ್ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎನ್ನಲಾಗಿದೆ.  2028 ರಲ್ಲಿ ಚೀನಾ ಯುಎಸ್ ಅನ್ನು ಮೀರಿಸಿ ವಿಶ್ವದ ಬಹುದೊಡ್ಡ ಆರ್ಥಿಕತೆಯಾಗಲಿದೆ ಎಂದು ಸಂಸ್ಥೆ ಭವಿಷ್ಯ ನುಡಿದಿದೆ.

ಇದನ್ನು ಓದಿ- 2030ರ ವೇಳೆಗೆ ಭಾರತ ಕಡಿಮೆ ಆದಾಯದಿಂದ ಮಧ್ಯಮ ಆದಾಯದ ಆರ್ಥಿಕತೆಗೆ ಬದಲಾಗಲಿದೆ: ನೀತಿ ಆಯೋಗ

ಕೋವಿಡ್ 19 ಸಾಂಕ್ರಾಮಿಕ ಹರಡುವ ಮೊದಲು ಭಾರತೀಯ ಆರ್ಥಿಕತೆಯ ವೇಗ ನಿಧಾನವಾಗತೊಡಗಿತು. 2019 ರಲ್ಲಿ, ಬೆಳವಣಿಗೆಯ ದರವು ಶೇಕಡಾ 4.2 ರಷ್ಟಿತ್ತು, ಇದು ಹತ್ತು ವರ್ಷಗಳ ಕನಿಷ್ಠ ಬೆಳವಣಿಗೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News