India GDP: ಎರಡನೇ ತ್ರೈಮಾಸಿಕದಲ್ಲಿ ಶೇ.8.4ರಷ್ಟು ಹೆಚ್ಚಾದ GDP, ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ ಸರ್ಕಾರ

India GDP: 2021-22ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ (GDP) ಶೇ 8.4ರಷ್ಟು ಹೆಚ್ಚಾಗಿದೆ

Written by - Nitin Tabib | Last Updated : Nov 30, 2021, 09:00 PM IST
  • ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
  • 2021-22ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ 8.4 ರಷ್ಟು ಏರಿಕೆಯಾಗಿದೆ.
  • ಮಂಗಳವಾರ ಸರ್ಕಾರ ಈ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
India GDP: ಎರಡನೇ ತ್ರೈಮಾಸಿಕದಲ್ಲಿ ಶೇ.8.4ರಷ್ಟು ಹೆಚ್ಚಾದ GDP, ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ ಸರ್ಕಾರ  title=
India GDP (File Photo)

India GDP: ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 2021-22ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ (Indian Economy) ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ 8.4 ರಷ್ಟು ಏರಿಕೆಯಾಗಿದೆ. ಮಂಗಳವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 20.1 ರಷ್ಟಿತ್ತು. ಇದೇ ವೇಳೆ ಕಳೆದ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬೆಳವಣಿಗೆಯ ದರದಲ್ಲಿ ಶೇ. 24.4 ಕ್ಕೆ ಕುಸಿದಿತ್ತು. ರಾಷ್ಟ್ರೀಯ ಅಂಕಿಅಂಶ ಕಚೇರಿಯ (NSO) ದತಾಮ್ಶಗಳ ಪ್ರಕಾರ, ಕಳೆದ ಹಣಕಾಸು ವರ್ಷದ 2020-21 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ GDP ಬೆಳವಣಿಗೆಯ ದರದಲ್ಲಿ ಶೇ. 7.4 ರಷ್ಟು ಇಳಿಕೆಯಾಗಿದೆ.

ಸ್ಥಿರ ಬೆಲೆಗಳಲ್ಲಿ (2011-12) ಜಿಡಿಪಿಯು 2021-22ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 68.11 ಲಕ್ಷ ಕೋಟಿ ರೂ.ಗಳಷ್ಟಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಅದು 59.92 ಲಕ್ಷ ಕೋಟಿ ರೂ. ಗಳಾಗಿತ್ತು. ಇದೇ ರೀತಿ  ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್-ಸೆಪ್ಟೆಂಬರ್) ಅದು 13.7 ರಷ್ಟು ಬೆಳವಣಿಗೆಯನ್ನು ತೋರಿಸಿದೆ. ಹಿಂದಿನ ಹಣಕಾಸು (Finance Ministry) ವರ್ಷದ ಇದೇ ಅವಧಿಯಲ್ಲಿ ಶೇ.15.9ರಷ್ಟು ಕುಸಿತ ಕಂಡಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರ ಕಳೆದ ವರ್ಷ ರಾಷ್ಟ್ರವ್ಯಾಪಿ 'ಲಾಕ್‌ಡೌನ್' ವಿಧಿಸಿತ್ತು. 2021 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚೀನಾದ ಬೆಳವಣಿಗೆಯ ದರವು ಶೇಕಡಾ 4.9 ರಷ್ಟಿದೆ.

ಇದನ್ನೂ ಓದಿ-GST On Notice Period Pay: ಇನ್ಮುಂದೆ ನೌಕರಿ ಬಿಡುವುದು ಕೂಡ ದುಬಾರಿ ಸಾಬೀತಾಗಲಿದೆ, ಹೇಗಂತಿರಾ? ವರದಿ ಓದಿ

ಕಾಂಗ್ರೆಸ್ ಪ್ರತಿಕ್ರಿಯೆ
ಜಿಡಿಪಿಯ ಈ ಅಂಕಿಅಂಶಗಳ ಮೇಲೆ, ಆರ್ಥಿಕತೆಯು ಇನ್ನೂ 2019-20ರ ಮಟ್ಟವನ್ನು ತಲುಪಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ,  "2021-22 ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇಕಡಾ 20.1 ರಷ್ಟಿತ್ತು, ಆದರೆ ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇಕಡಾ 24.4 ರಷ್ಟು ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು ಶೇ. 8.4 ರಷ್ಟಿತ್ತು. ಆದರೆ ಕಳೆದ ವರ್ಷ ಈ ಅವಧಿಯಲ್ಲಿ GDP ಬೆಳವಣಿಗೆ ದರವು 7.4 ಶೇಕಡಾ ಕುಸಿತವನ್ನು ಕಂಡಿತು." ಎಂದಿದ್ದಾರೆ. 

ಇದನ್ನೂ ಓದಿ-PF Interest Credit: Good News: ಟ್ವೀಟ್ ಮಾಡುವ ಮೂಲಕ ತನ್ನ ಖಾತೆದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ EPFO

ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, "2021-22 ರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ 35.73 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, ಕರೋನಾ ಸಾಂಕ್ರಾಮಿಕ ರೋಗಕ್ಕೂ ಮುನ್ನ 2019-20 ರ ಎರಡನೇ ತ್ರೈಮಾಸಿಕದಲ್ಲಿ 35.84 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು." ಜಿಡಿಪಿ ಇನ್ನೂ 2019-20ರ ಮಟ್ಟವನ್ನು ತಲುಪಿಲ್ಲ. ಆರ್ಥಿಕತೆ (Economy) ಪುನರುಜ್ಜೀವನಗೊಳ್ಳುವುದು ದೂರದ ಸಂಗತಿ, ಇನ್ನೂ ಆರ್ಥಿಕತೆ ಹಳಿಗೆ ಮರಳಿಲ್ಲ" ಎಂದಿದ್ದಾರೆ.

ಇದನ್ನೂ ಓದಿ-Pension : ಈಗ ಕಾರ್ಮಿಕರಿಗೂ ಸಿಗಲಿದೆ ಪಿಂಚಣಿ : ₹36000 ಪಿಂಚಣಿಗೆ ₹2 ಠೇವಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News