ಬೆಂಗಳೂರು : Income Tax Rule : ನಾಳೆಯಿಂದ ಆದಾಯ ತೆರಿಗೆ ಇಲಾಖೆ ದೊಡ್ಡ ನಿಯಮವನ್ನೇ ಬದಲಾಯಿಸುತ್ತಿದೆ. ಈಗ ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಕಡ್ಡಾಯವಾಗಿ ಪ್ಯಾನ್ ಮತ್ತು ಆಧಾರ್ ಅನ್ನು ಸಲ್ಲಿಸಲೇಬೇಕಾಗುತ್ತದೆ.
ಆದಾಯ ತೆರಿಗೆ (15 ನೇ ತಿದ್ದುಪಡಿ) ನಿಯಮಗಳು, 2022 ರ ಅಡಿಯಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ನಾಳೆಯಿಂದಲೇ ಅಂದರೆ ಮೇ 26 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ : Arecanut Price Today: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ..?
ನಾಳೆಯಿಂದ ಬದಲಾಗಲಿರುವ ನಿಯಮಗಳು ಯಾವುವು ತಿಳಿಯಿರಿ :
ಪ್ಯಾನ್-ಆಧಾರ್ ಯಾವಾಗ ಅಗತ್ಯ ?
1. ಒಂದು ಹಣಕಾಸು ವರ್ಷದಲ್ಲಿ ಯಾರಾದರೂ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ 20 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಠೇವಣಿ ಮಾಡಿದರೆ, ಪ್ಯಾನ್-ಆಧಾರ್ ಅನ್ನು ಸಲ್ಲಿಸಬೇಕಾಗುತ್ತದೆ.
2. ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ಕಂಪನಿ, ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿರುವ ಯಾವುದೇ ಒಂದು ಅಥವಾ ಹೆಚ್ಚಿನ ಖಾತೆಗಳಿಂದ 20 ಲಕ್ಷ ಹಿಂಪಡೆಯಲು ಸಹ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಅವಶ್ಯಕ.
3. ನೀವು ಬ್ಯಾಂಕಿಂಗ್ ಕಂಪನಿ, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕರಂಟ್ ಅಕೌಂಟ್ ಅಥವಾ ಕ್ಯಾಶ್ ಕ್ರೆಡಿಟ್ ಅಕೌಂಟ್ ತೆರೆದರೂ ಪ್ಯಾನ್-ಆಧಾರ್ ನೀಡಬೇಕಾಗುತ್ತದೆ.
4. ಯಾರಾದರೂ ಕರಂಟ್ ಅಕೌಂಟ್ ತೆರೆದರೆ, ಅದಕ್ಕೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ.
5. ಬ್ಯಾಂಕ್ ಖಾತೆಯು ಪ್ಯಾನ್‌ನೊಂದಿಗೆ ಲಿಂಕ್ ಆಗಿದ್ದರೆ, ಟ್ರಾನ್ಸಾಕ್ಶನ್ ಗಾಗಿ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲೇಬೇಕಾಗುತ್ತದೆ.
ಇದನ್ನೂ ಓದಿ : 7th Pay Commission: July 1 ರಿಂದ ಕೇಂದ್ರ ಸರ್ಕಾರಿ ನೌಕರರ ಖಾತೆಗೆ ಹೆಚ್ಚಿನ ವೇತನ ಬರಲಿದೆ! ಎಷ್ಟು ಹೆಚ್ಚಾಗಲಿದೆ?
ನಗದು ವಹಿವಾಟಿನ ಮೇಲೆ ಸರ್ಕಾರದ ಕಣ್ಣು :
ಜನರ ಹಣಕಾಸಿನ ವಹಿವಾಟುಗಳ ಅಪ್ ಡೇಟ್ ಪಡೆದುಕೊಳ್ಳುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಈಗ ಆಧಾರ್ ಮತ್ತು ಪ್ಯಾನ್ ಸೇರ್ಪಡೆಯಿಂದ ಹೆಚ್ಚು ಹೆಚ್ಚು ಜನರು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತಾರೆ. ವಹಿವಾಟಿನ ಸಮಯದಲ್ಲಿ ಪ್ಯಾನ್ ಸಂಖ್ಯೆಯನ್ನು ಹೊಂದಿರುವಾಗ, ಆದಾಯ ತೆರಿಗೆ ಇಲಾಖೆಯು ನಿಮ್ಮ ವ್ಯವಹಾರಗಳ ಮೇಲೆ ನಿಗಾ ಇಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ