Income Tax: ಇನ್ಮುಂದೆ ನಿಮ್ಮ ಆದಾಯದ ಮೇಲೆ ಕೇವಲ ಶೇ.5 ರಷ್ಟು ತೆರಿಗೆ, ವಿತ್ತ ಸಚಿವರ ಆದೇಶ ಜಾರಿ !

Income Tax News: ಹೊಸ ವರ್ಷದ ಮೊದಲ ದಿನವೇ ದೇಶದ ಕೋಟ್ಯಾಂತರ ತೆರಿಗೆ ಪಾವತಿದಾರರಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಇನ್ಮುಂದೆ ನೀವು ಕೇವಲ ಶೇ.5ರಷ್ಟು ತೆರಿಗೆ ಮಾತ್ರ ಪಾವತಿಸಬೇಕಾಗುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸವರ್ಷದಂದು ದೇಶದ ನಾಗರಿಕರಿಗೆ ದೊಡ್ಡ ಉಡುಗೊರೆಯೊಂದನ್ನೇ ನೀಡಿದ್ದಾರೆ.  

Written by - Nitin Tabib | Last Updated : Jan 1, 2023, 05:44 PM IST
  • ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ತೆರಿಗೆ ಮುಕ್ತ ಆದಾಯದ ವ್ಯಾಪ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
  • ಪ್ರಸ್ತುತ, ಲಕ್ಷಗಟ್ಟಲೆ ಜನರು 2.5 ಲಕ್ಷದವರೆಗೆ ಮಾತ್ರ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತಿದ್ದಾರೆ.
  • ಈ ಮಿತಿಯನ್ನು ಸರ್ಕಾರ 3 ರಿಂದ 5 ಲಕ್ಷದವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
Income Tax: ಇನ್ಮುಂದೆ ನಿಮ್ಮ ಆದಾಯದ ಮೇಲೆ ಕೇವಲ ಶೇ.5 ರಷ್ಟು ತೆರಿಗೆ, ವಿತ್ತ ಸಚಿವರ ಆದೇಶ ಜಾರಿ ! title=
Income Tax Update

Income Tax Slab: ಹೊಸವರ್ಷದ ಮೊದಲ ದಿನವೇ ದೇಶದ ಕೋಟ್ಯಾಂತರ ತೆರಿಗೆ ಪಾವತಿದಾರರಿಗೆ ಸಂದಸದ ಸುದ್ದಿಯೊಂದು ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಇನ್ಮುಂದೆ ನೀವು ಕೇವಲ ಶೇ.5 ರಷ್ಟು ತೆರಿಗೆ ಮಾತ್ರ ಪಾವತುಇಸಬೇಕಾಗಲಿದೆ.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ವರ್ಷದಂದು ಜನರಿಗೆ ಈ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ದೇಶದೆಲ್ಲೆಡೆ ಬಜೆಟ್ ಮಂಡನೆಗಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದಿಂದ ಹಿಡಿದು ಉದ್ಯೋಗಸ್ಥರವರೆಗೆ ಎಲ್ಲರೂ ಈ ಬಾರಿ ದೊಡ್ಡ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದಾರೆ.

ಯಾವುದೇ ವ್ಯವಸ್ಥೆಯನ್ನು ಸ್ವೀಕರಿಸಿ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇನ್ನು ಮುಂದೆ ಅನೇಕ ಜನರು ಕೇವಲ ಶೇ.5 ರಷ್ಟು ತೆರಿಗೆಯನ್ನು ಮಾತ್ರ ಪಾವತಿಸಬೇಕಾಗಲಿದೆ ಎಂದು ಹೇಳಿದ್ದಾರೆ. ನೀವು ಹೊಸ ತೆರಿಗೆ ಪದ್ಧತಿ ಅಥವಾ ಹಳೆಯ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡರೂ ನೀವು ಭಾರೀ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಶೇ.5 ರಷ್ಟು ತೆರಿಗೆಯನ್ನು ಯಾರು ಪಾವತಿಸಬೇಕಾಗುತ್ತದೆ
2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ಹೊಂದಿರುವ ಜನರು ಕೇವಲ ಶೇ.5 ರಷ್ಟು ತೆರಿಗೆಯನ್ನು ಪಾವತಿಸಬೇಕಾಗಲಿದೆ. ಈ ಜನರು ಇದಕ್ಕಿಂತ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಮತ್ತೊಂದೆಡೆ, ನಿಮ್ಮ ಆದಾಯವು 2.5 ಲಕ್ಷಕ್ಕಿಂತ ಕಡಿಮೆಯಿದ್ದರೆ, ನೀವು ಒಂದು ರೂಪಾಯಿ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ-Pension Scheme: ಈ ಯೋಜನೆಯಲ್ಲಿ ಸರ್ಕಾರ ನೀಡುತ್ತೆ 72,000 ರೂ. ಇಂದೇ ಅರ್ಜಿ ಸಲ್ಲಿಸಿ

ತೆರಿಗೆ ಮುಕ್ತ ಆದಾಯ ವ್ಯಾಪ್ತಿ ಹೆಚ್ಚಾಗಬಹುದು
ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ತೆರಿಗೆ ಮುಕ್ತ ಆದಾಯದ ವ್ಯಾಪ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಪ್ರಸ್ತುತ, ಲಕ್ಷಗಟ್ಟಲೆ ಜನರು 2.5 ಲಕ್ಷದವರೆಗೆ ಮಾತ್ರ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಮಿತಿಯನ್ನು ಸರ್ಕಾರ 3 ರಿಂದ 5 ಲಕ್ಷದವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಬಾರಿ ಸರ್ಕಾರವು ಕೋಟಿಗಟ್ಟಲೆ ತೆರಿಗೆದಾರರಿಗೆ ದೊಡ್ಡ ಲಾಭವನ್ನು ನೀಡಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.

ಇದನ್ನೂ ಓದಿ-Budget 2023 Expectations: PPF ಖಾತೆದಾರರಿಗೆ ಭಾರಿ ಸಂತಸದ ಸುದ್ದಿ!

2014ರಲ್ಲಿ ಕೊನೆಯ ಬಾರಿಗೆ ಬದಲಾವಣೆ ಮಾಡಲಾಗಿತ್ತು 
ಕಳೆದ ಬಾರಿ 2014ರಲ್ಲಿ ಸರ್ಕಾರ ತೆರಿಗೆ ಮಿತಿಯನ್ನು ಹೆಚ್ಚಿಸಿತ್ತು. ಮೊದಲು ಈ ಮಿತಿಯನ್ನು 2 ಲಕ್ಷ ರೂ.ಗಳಷ್ಟಿತ್ತು, ಇದನ್ನು 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಜನರಿಗೆ ಹೂಡಿಕೆಗೆ ಹೆಚ್ಚಿನ ಹಣ ಸಿಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News