SBI ಗ್ರಾಹಕರೇ ಗಮನಿಸಿ ಮಧ್ಯಾಹ್ನ 3:25 ರಿಂದ ನಿಂತು ಹೋಗಲಿದೆ ಈ ಸೇವೆ

ಏಪ್ರಿಲ್ 4 ರಂದು ಮಧ್ಯಾಹ್ನ 3.25 ರಿಂದ  ಅಪ್ ಗ್ರೇಡೆಶನ್  ಕಾರ್ಯ  ನಡೆಯಲಿದೆ . ಹಾಗಾಗಿ ಬ್ಯಾಂಕ್‌ಗೆ ಸಂಬಂಧಿಸಿದ ಆನ್‌ಲೈನ್ ವಹಿವಾಟುಗಳನ್ನು ಮುಂಚೆಯೇ ಮುಗಿಸಿಕೊಳ್ಳುವಂತೆ ಬ್ಯಾಂಕ್ ಕೋರಿದೆ. 

Written by - Ranjitha R K | Last Updated : Apr 4, 2021, 01:11 PM IST
  • ಅಪ್ ಗ್ರೇಡೆಶನ್ ಬಗ್ಗೆ ಟ್ವೀಟ್ ಮಾಡಿದ ಬ್ಯಾಂಕ್
  • 2 ಗಂಟೆಗಳ ಕಾಲ ನಡೆಯಲಿರುವ ಅಪ್ ಗ್ರೇಡೆಶನ್
  • Google ನಲ್ಲಿ ಸಿಗುವ ಸಂಖ್ಯೆಗಳನ್ನು ನಂಬದಂತೆ ಮನವಿ
SBI ಗ್ರಾಹಕರೇ ಗಮನಿಸಿ ಮಧ್ಯಾಹ್ನ 3:25 ರಿಂದ ನಿಂತು ಹೋಗಲಿದೆ ಈ ಸೇವೆ  title=
2 ಗಂಟೆಗಳ ಕಾಲ ನಡೆಯಲಿರುವ ಅಪ್ ಗ್ರೇಡೆಶನ್ (file photo)

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಇಂದು ಮಧ್ಯಾಹ್ನದ ನಂತರ ಡಿಜಿಟಲ್ ವಹಿವಾಟಿನಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾದೀತು. ಸಂಜೆ ಬ್ಯಾಂಕ್ (Bank) ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಅಪ್ ಗ್ರೇಡ್ ಮಾಡುತ್ತಿದೆ. ಈ ಕಾರಣದಿಂದಾಗಿ ಗ್ರಾಹರು ನೆಟ್ ಬ್ಯಾಂಕಿಂಗ್ (Net banking) ಮಾಡುವುದಾದರೆ ಸಮಸ್ಯೆ ಎದುರಾಗಬಹುದು.

 ಟ್ವೀಟ್ ಮೂಲಕ ಅಪ್ ಗ್ರೇಡ್ ಮಾಹಿತಿ ಹಂಚಿಕೊಂಡ ಬ್ಯಾಂಕ್ : 
ಅಪ್ ಗ್ರೇಡೆಶನ್ (Upgradation) ಬಗ್ಗೆ ಎಸ್‌ಬಿಐ (SBI) ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ' ಗ್ರಾಹಕರಿಗೆ ಉತ್ತಮ ಆನ್‌ಲೈನ್ ಬ್ಯಾಂಕಿಂಗ್ ಅನುಭವವನ್ನು ನೀಡಲು ಏಪ್ರಿಲ್ 4 ರಂದು ತಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಅಪ್‌ಗ್ರೇಡ್ ಮಾಡಲಾಗುವುದು. ಈ ಸಮಯದಲ್ಲಿ ಎದುರಾಗುವ ಸಮಸ್ಯೆಗೆ ಖೇದ ವ್ಯಕ್ತಪಡಿಸುವುದಾಗಿ  ಬ್ಯಾಂಕ್ (Bank) ಹೇಳಿದೆ. ಅಪ್ ಗ್ರೇಡೆಶನ್ ಕಾರಣದಿಂದಾಗಿ, ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಆಪ್ (YONO App), ಯೋನೊ ಲೈಟ್ ಆ್ಯಪ್ (YONO Lite) ಮತ್ತು ಯುಪಿಐ (UPI) ಸೌಲಭ್ಯ ಇಂದು ಎರಡು ಗಂಟೆಗಳವರೆಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ : SBI ಗ್ರಾಹಕರು ಈ ಹಂತಗಳ ಮೂಲಕ ಸುಲಭವಾಗಿ ಡೆಬಿಟ್ ಕಾರ್ಡ್ ಪಿನ್ ರಚಿಸಬಹುದು

ಸಂಜೆ 2 ಗಂಟೆಗಳ ಕಾಲ ನಡೆಯಲಿದೆ ಅಪ್ ಗ್ರೇಡೆಶನ್  ಕಾರ್ಯ :
ಏಪ್ರಿಲ್ 4 ರಂದು ಮಧ್ಯಾಹ್ನ 3.25 ರಿಂದ ಸಂಜೆ 5.25 ರವರೆಗೆ ಸೇವಾ ನವೀಕರಣ ಕಾರ್ಯಗಳನ್ನು ಮಾಡಲಾಗುವುದು ಎಂದು ಬ್ಯಾಂಕ್ ಮಾಹಿತಿ ನೀಡಿದೆ. ಇದರಿಂದಾಗಿ, ಗ್ರಾಹಕರಿಗೆ 2 ಗಂಟೆಗಳ ಕಾಲ ಆನ್‌ಲೈನ್ (Online) ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬ್ಯಾಂಕ್‌ಗೆ ಸಂಬಂಧಿಸಿದ ಆನ್‌ಲೈನ್ ವಹಿವಾಟುಗಳನ್ನು ಮುಂಚೆಯೇ ಮುಗಿಸಿಕೊಳ್ಳುವಂತೆ ಬ್ಯಾಂಕ್ ಕೋರಿದೆ. 

Google ನಲ್ಲಿ ಸಿಗುವ ನಂಬರ್ ಗಳನ್ನ ನಂಬದಂತೆ ಮನವಿ : 

ಇದೇ ವೇಳೆ, Google ನಲ್ಲಿ ಸಿಗುವ  ಯಾವುದೇ ನಂಬರ್ ಗಳನ್ನೂ ನಂಬದಂತೆ ಬ್ಯಾಂಕ್ ಗ್ರಾಹಕರಲ್ಲಿ ಮನವಿ ಮಾಡಿದೆ. ಮೋಸ ಮಾಡುವವರು ಗೂಗಲ್‌ನಲ್ಲಿ ಎಸ್‌ಬಿಐ ಹೆಸರಿನಲ್ಲಿ ನಕಲಿ ಕಸ್ಟಮರ್ ಕೇರ್ (Customer care)  ಸಂಖ್ಯೆಯನ್ನು ಅಪ್‌ಲೋಡ್ ಮಾಡಿರುತ್ತಾರೆ. ಈ ಕಾರಣದಿಂದ Google ನಲ್ಲಿ ನಂಬರ್ ಹುಡುಕುವ ಮುನ್ನ ಎಚ್ಚರ ವಹಿಸುವಂತೆ ಬ್ಯಾಂಕ್ ಸೂಚಿಸಿದೆ . ಏನೇ ಮಾಹಿತಿ ಬೇಕಿದ್ದರೂ ಎಸ್‌ಬಿಐ (State bnk Of India)ಟೋಲ್ ಫ್ರೀ ಸಂಖ್ಯೆ 1800 11 2211, 1800 425 3800 ಅಥವಾ  080 26599990 ಗೆ ಮಾತ್ರ ಕರೆ ಮಾಡುವಂತೆ ಬ್ಯಾಂಕ್ ಹೇಳಿದೆ. 

ಇದನ್ನೂ ಓದಿ : TRAI ನಿಂದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News