ನವದೆಹಲಿ : ನೀವು ಕೇವಲ ಸ್ಯಾಲರಿ ಅಕೌಂಟ್ ಹೊಂದಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗೆ ತುರ್ತು ಪರಿಸ್ಥಿತಿಯಲ್ಲಿ 20 ಲಕ್ಷದವರೆಗೆ ಸಾಲದ ಸಹಾಯ ಮಾಡುತ್ತದೆ. ನಿಮ್ಮ ಸ್ಯಾಲರಿ ಅಕೌಂಟ್ ಎಸ್ಬಿಐನಲ್ಲೆ ಇರಬೇಕು ಎಂಬ ನಿಯಮವೆನಿಲ್ಲಾ, ನಿಮ್ಮ ಸ್ಯಾಲರಿ ಅಕೌಂಟ್ ಯಾವುದೇ ಬ್ಯಾಂಕ್ನಲ್ಲಿ ಇದ್ದರು ಸಾಲ ಸಿಗಲಿದೆ.
SBI ಸ್ಯಾಲರಿ ಅಕೌಂಟ್ ದಾರರಿಗೆ(SBI Salary Holder) ಕಸ್ಟಮೈಸ್ ಮಾಡಿದ ವೈಯಕ್ತಿಕ ಸಾಲದ ಉತ್ಪನ್ನವನ್ನು ನೀಡುತ್ತದೆ. ಇದರಲ್ಲಿ ಮದುವೆ, ರಜಾದಿನಗಳು, ತುರ್ತು, ಯೋಜಿತ ವೆಚ್ಚಗಳಿಗೆ ಅರ್ಹತೆಗೆ ಅನುಗುಣವಾಗಿ ವೈಯಕ್ತಿಕ ಸಾಲವನ್ನು ತಕ್ಷಣವೇ ಅನುಮೋದಿಸಲಾಗುತ್ತದೆ. ಉತ್ಪನ್ನದ ವಿಶೇಷತೆ ಏನೆಂದರೆ ನೀವು ಅದರ ಅನುಮೋದನೆಯನ್ನು ಕಾಂಟ್ಯಾಕ್ಟ್ಲೆಸ್ ಲೆಂಡಿಂಗ್ ಪ್ಲಾಟ್ಫಾರ್ಮ್ (CLP) ಮೂಲಕ ಪಡೆಯುತ್ತೀರಿ. ಈ ಯೋಜನೆಯ ಬಗ್ಗೆ ಎಲ್ಲವನ್ನೂ ತಿಳಿಯಿರಿ.
ಇದನ್ನೂ ಓದಿ : Business Loan : ಕೇವಲ 30 ನಿಮಿಷಗಳಲ್ಲಿ ಮನೆಯಿಂದಲೇ ಸಿಗಲಿದೆ ಸಾಲ! ಹೇಗೆ ಇಲ್ಲಿದೆ ನೋಡಿ
ಈ ಸಾಲದ ಲಾಭ ಯಾರಿಗೆ ಸಿಗುತ್ತದೆ?
SBI ನಿಂದ ಈ ಕಸ್ಟಮೈಸ್ ಮಾಡಿದ ವೈಯಕ್ತಿಕ ಸಾಲಕ್ಕಾಗಿ, ಗ್ರಾಹಕರು ಯಾವುದೇ ಬ್ಯಾಂಕ್ನಲ್ಲಿ ಸ್ಯಾಲರಿ ಅಕೌಂಟ್ ಹೊಂದಿರಬೇಕು. ಅವರ ಕನಿಷ್ಠ ನಿವ್ವಳ ಮಾಸಿಕ ವೇತನ (NMI) 15,000 ರೂ. ಗಿಂತ ಕಡಿಮೆ ಇರಬಾರದು. ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಕೇಂದ್ರ, ರಾಜ್ಯ ಅಥವಾ ಅರೆ ಸರ್ಕಾರಿ, ಕೇಂದ್ರ ಅಥವಾ ರಾಜ್ಯ ಪಿಎಸ್ಯು, ಕಾರ್ಪೊರೇಟ್ ಅಥವಾ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳ ಉದ್ಯೋಗಿಯಾಗಿರಬೇಕು ಎಂದು ಬ್ಯಾಂಕ್ ನಿಯದಲ್ಲಿದೆ. ಸಾಲದ ಅರ್ಜಿದಾರರ ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು ಮತ್ತು ಅವರು ಕನಿಷ್ಠ 1 ವರ್ಷ ಕೆಲಸ ಮಾಡಿರಬೇಕು. ಇದರಲ್ಲಿ, EMI / NMI ಅನುಪಾತವು 50 ಪ್ರತಿಶತಕ್ಕಿಂತ ಕಡಿಮೆ ಇರುತ್ತದೆ.
ನೀವು ಎಷ್ಟು ಸಾಲ ಪಡೆಯಬಹುದು?
ಈ ವೈಯಕ್ತಿಕ ಸಾಲ ಯೋಜನೆ(SBI Personal Loan)ಯಲ್ಲಿ ಎಸ್ಬಿಐ ಕನಿಷ್ಠ 24,000 ಮತ್ತು ಗರಿಷ್ಠ 20 ಲಕ್ಷ ಸಾಲ ಪಡೆಯಬಹುದು. ಇದರಲ್ಲಿ, ಗರಿಷ್ಠ ಸಾಲವು ಗ್ರಾಹಕರ ನಿವ್ವಳ ಮಾಸಿಕ ಆದಾಯದ 24 ಪಟ್ಟು ಅಥವಾ 20 ಲಕ್ಷ ರೂ. SBI ಪ್ರಕಾರ, ಸಂಬಳ ಪಡೆಯುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾದ ಈ ವೈಯಕ್ತಿಕ ಸಾಲದ ಉತ್ಪನ್ನಗಳಿಗೆ ಯಾವುದೇ ರೀತಿಯ ಭದ್ರತೆ ಅಥವಾ ಗ್ಯಾರಂಟಿ ಅಗತ್ಯವಿರುವುದಿಲ್ಲ.
ಬಡ್ಡಿದರಗಳು ಬಗ್ಗೆ ತಿಳಿದುಕೊಳ್ಳಿ
ಸಂಬಳ ಪಡೆಯುವ ಗ್ರಾಹಕರಿಗೆ SBI ಪರ್ಸನಲ್ ಲೋನಿನ ಬಡ್ಡಿ ದರಗಳು(SBI Interest Rates) ವಾರ್ಷಿಕ 9.85-11.35 ಪ್ರತಿಶತದಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಹಿಡನ್ ಚಾರ್ಜ್ ಇರುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಸಂಸ್ಕರಣಾ ಶುಲ್ಕವೂ ತುಂಬಾ ಕಡಿಮೆ ಇರುತ್ತದೆ. ಇದು ಸಾಲದ ಮೊತ್ತದ ಶೇ. 1.5 ಆಗಿರುತ್ತದೆ (ಕನಿಷ್ಠ ರೂ 1,000 ಮತ್ತು ಗರಿಷ್ಠ ರೂ 15,000 ಜೊತೆಗೆ ಜಿಎಸ್ಟಿ). ಇದರಲ್ಲಿ ಎರಡನೇ ಸಾಲ ಪಡೆಯುವ ಅವಕಾಶವೂ ಇದೆ.
ಇದನ್ನೂ ಓದಿ : Komaki Ranger: ಒಂದೇ ಚಾರ್ಜ್ನಲ್ಲಿ 250 ಕಿಲೋಮೀಟರ್ ಓಡಲಿದೆ, ಈ ಕ್ರೂಸರ್ ಮೋಟಾರ್ಸೈಕಲ್
ಈ ದಾಖಲೆಗಳು ಬೇಕಾಗುತ್ತವೆ
ಎಸ್ಬಿಐ ಸಂಬಳದ ವೈಯಕ್ತಿಕ ಸಾಲಕ್ಕಾಗಿ, ಆದಾಯ ತೆರಿಗೆ ರಿಟರ್ನ್ನ ಪ್ರತಿ, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಇತ್ತೀಚಿನ ಸಂಬಳ ಚೀಟಿ, 2 ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು ಮತ್ತು ಗುರುತಿನ ಪುರಾವೆ ಮತ್ತು ಬ್ಯಾಂಕ್ನ KYC ಮಾರ್ಗಸೂಚಿಗಳ ಪ್ರಕಾರ ವಿಳಾಸ ಪುರಾವೆ ಅಗತ್ಯವಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.